Begur Colony teaser: ಕನ್ನಡ‌ ಚಿತ್ರರಂಗದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಹೊಸ ಹೊಸ ಪ್ರತಿಭೆಗಳು ಹೊಸ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಬೇಗೂರು ಕಾಲೋನಿ. ಪೋಸ್ಟರ್ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಚಿತ್ರದ ಟೀಸರ್ ರಿಲೀಸ್ ಆಗಿದೆ. ಬೆಂಗಳೂರಿನ ಎಂಎಂ‌ ಲೆಗಸಿಯಲ್ಲಿ ಇತ್ತೀಚೆಗಷ್ಟೇ ನಿರ್ದೇಶಕ ತರುಣ್ ಸುಧೀರ್ ಹಾಗೂ ಶಾಸಕ ಸತೀಶ್ ರೆಡ್ಡಿ ಟೀಸರ್ ರಿವೀಲ್ ಮಾಡಿ ತಂಡಕ್ಕೆ ಶುಭ ಕೋರಿದ್ದರು.


COMMERCIAL BREAK
SCROLL TO CONTINUE READING

ತರುಣ್ ಸುಧೀರ್ ಮಾತನಾಡಿ, ಒಂದು ಸಿನಿಮಾಗೆ ಟೀಸರ್ ಇನ್ವಿಟೇಷನ್ ತರ. ಆ ಸಿನಿಮಾದಲ್ಲಿ ಏನಿದೆ ಅನ್ನೋದನ್ನು ಜನರಿಗೆ ತಲುಪಿಸುವುದು ಟೀಸರ್. ಟೀಸರ್ ಹಾಗೂ ಟ್ರೇಲರ್ ಸಿನಿಮಾಗೆ ಅಷ್ಟು ಮುಖ್ಯ.‌ ನಮ್ಮ ಇಡೀ ಶ್ರಮ, ಕಷ್ಟಪಟ್ಟಿರುವುದು, ಶೂಟಿಂಗ್ ಇರಬಹುದು. ಇಡೀ ಎಫರ್ಟ್ ಗಿಂತ ಜಾಸ್ತಿ ಟೆನ್ಷನ್ ಆಗುವುದು ಟೀಸರ್ ಹಾಗೂ ಟ್ರೇಲರ್ ಕಟ್ ಮಾಡುವಾಗ. 


ಅದೇ ಜನರನ್ನು ಥಿಯೇಟರ್ ಒಳಗೆ ಕರೆದುಕೊಂಡು ಬರುವುದು. ಆ ನಿಟ್ಟಿನಲ್ಲಿ ನೋಡುವುದಾದರೆ ಕಾಲೋನಿ ಟೀಸರ್ ಚೆನ್ನಾಗಿ ಕಟ್ ಮಾಡಲಾಗಿದೆ. ನನ್ನ ಆತ್ಮೀಯ ಗೆಳೆಯ. ಐದೈದು ವರ್ಷಗಳ ಜರ್ನಿ. ಕ್ರಿಕೆಟ್ ಟೂರ್ನಮೆಂಟ್ ಟೈಮ್ ನಲ್ಲಿ ಅವರನ್ನು ನೋಡಿದ್ದು. ಈ ರೀತಿ ಕ್ರಿಕೆಟ್ ಆಡ್ತಾನೆ ಅಂತಾ ಖುಷಿ ಆಯ್ತು. ಆ ಬಳಿಕ ಅವನ ಸಿನಿಮಾ ಪ್ರೀತಿ ಗೊತ್ತಾಯ್ತು. ಅವನಲ್ಲಿರುವ ಕ್ರಿಕೆಟರ್ ಹಾಗೂ ಕಲಾವಿದರನ್ನು ಗುರುತಿಸಿದ್ದು ಸುದೀಪ್ ಸರ್. ಅವನ ಜರ್ನಿ ನೋಡಿಕೊಂಡು ಬಂದಿದ್ದೇವೆ. ನಮ್ಮ‌ ಮಣ್ಣಿನ ಕಥೆಗಳು ಅಂತೀವಲ್ಲ. ಆ ತರ ಫೇಸ್ ಇರುವ ಹುಡ್ಗ ಅವನು. ಅದ್ಭುತ ನಟ. ಅವನಿಗೆ ಬೇಕಿರುವು ಬ್ರೇಕ್ ಬೇಗೂರು ಕಾಲೋನಿ ಮೂಲಕ ಸಿಗಲಿದೆ ಎಂಬ ನಂಬಿಕೆ ಇದೆ ಎಂದರು.


ಇದನ್ನೂ ಓದಿ: ಡಾಲಿ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್‌... ಧನಂಜಯ್ ಮದುವೆ ಪತ್ರಿಕೆ ಇಲ್ಲಿದೆ ನೋಡಿ


ಶಾಸಕ ಸತೀಶ್ ಶೆಡ್ಡಿ ಮಾತನಾಡಿ, ಮಂಜು ನಿರ್ದೇಶನದಲ್ಲಿ ಅದ್ಭುತ ಸಿನಿಮಾ ಮೂಡಿಬಂದಿದೆ. ಅನೇಕ‌ ಸಿನಿಮಾಗಳಲ್ಲಿ ಅವರು ಕೆಲಸ‌ ಮಾಡಿದ್ದಾರೆ. ಆದರೆ ಈ ಚಿತ್ರ‌ ನೋಡಿದಾಗ ಬಹಳ‌ ಜವಾಬ್ದಾರಿಯಿಂದ‌ ಕೆಲಸ ಮಾಡಿದ್ದಾರೆ. ಟೀಸರ್ ಅದ್ಭುತವಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು‌ ತಿಳಿಸಿದರು.


ನಟ ರಾಜೀವ್ ಮಾತನಾಡಿ, ಸರಳತೆ ಅಂದರೆ ಏನೂ ಅನ್ನೋದನ್ನು ತರುಣ್ ಅಣ್ಣ ತೋರಿಸಿದ್ದಾರೆ. ನಮ್ಮ ಸಿನಿಮಾಗೆ ಯಾವುದೇ ಪೂಜೆ ಮಾಡಿಲ್ಲ. ಟೀಸರ್ ತುಂಬಾ ಚೆನ್ನಾಗಿ ಬಂದಿದೆ. ಈ ರೀತಿ ಸಿನಿಮಾ ಮಾಡಿದ ಬಾಬಾಣ್ಣ ಅವರಿಗೆ ಧನ್ಯವಾದ. ನಿರ್ಮಾಪಕರಿಗೆ ಒಳ್ಳೆದು ಆಗಬೇಕು. ಈ ಚಿತ್ರದಲ್ಲಿ ಹೊಸಬರು ನಟಿಸಿದ್ದಾರೆ. ಆದರೆ ಸಿನಿಮಾ ನೋಡಿ ಹೊರಬಂದರೆ ಹೊಸಬರು ಅನಿಸುವುದಿಲ್ಲ. ಎಲ್ಲರೂ ಅದ್ಭುತ ಪಾತ್ರ ಮಾಡಿದ್ದಾರೆ. ಕಾಲೋನಿಯಲ್ಲಿ ಬೆಳೆಯುವ ಮಕ್ಕಳು ಅಲ್ಲೇ ಬೆಳೆಯುತ್ತಾರೆ. ಅಲ್ಲೇ ಸಾಯುತ್ತಾರೆ. ಆದರೆ ಅದರ ಎದುರು ಇರುವ  ದೊಡ್ಡ ಜಾಗ ಕಮ್ಮಿಯಾಗುತ್ತಾ ಬರುತ್ತದೆ. ಎಲ್ಲಾ ಬೆಳೆಯುತ್ತಿದ್ದಾರೆ. ಆದರೆ ಕಾಲೋನಿ ಹಾಗೆಯೇ ಇರುತ್ತದೆ. ಅಲ್ಲಿ ಬೆಳೆಯುವ ಕಾಲೋನಿ ಹುಡ್ಗನಿಗೆ ಆಡಲು ಜಾಗ ಇರುವುದಿಲ್ಲ. ಇರುವ ಜಾಗವನ್ನು ಉಳಿಸಿಕೊಳ್ಳಲು ಹೋರಾಡುವ ಕಥೆಯೇ ಬೇಗೂರು ಕಾಲೋನಿ ಎಂದರು.


ಬೆಂಗಳೂರು ಹುಟ್ಟುವ ಮೊದಲೇ ಹುಟ್ಟಿದ್ದು ಬೇಗೂರು  ಎಂಬ  ಡೈಲಾಗ್ ಮೂಲಕ ಶುರುವಾಗುವ ಬೇಗೂರು ಕಾಲೋನಿ ಟೀಸರ್ ನಲ್ಲಿ‌ ಆಕ್ಷನ್ , ಎಮೋಷನ್  , ಪ್ರೀತಿ, ನೋವು ನಲಿವುಗಳನ್ನು ಬ್ಲೆಂಡ್ ಮಾಡಿ ಟೀಸರ್ ಕಟ್ ಮಾಡಲಾಗಿದೆ.  ಶ್ರೀಮಾ ಸಿನಿಮಾಸ್ ಬ್ಯಾನರ್‌ ಅಡಿ ಎಂ ಶ್ರೀನಿವಾಸ್ ಬಾಬು 'ಬೇಗೂರು ಕಾಲೋನಿ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಫ್ಲೈಯಿಂಗ್ ಕಿಂಗ್ ಮಂಜು ಎಂಬುವವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ರಾಜೀವ್ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ನಿರ್ದೇಶಕ ಮಂಜು ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.


ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ತೆಲುಗು ನಟ ಪೊಸಾನಿ ಕೃಷ್ಣ ಮುರಳಿ, ಬಾಲ ರಾಜ್‌ವಾಡಿ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು 'ಬೇಗೂರು ಕಾಲೋನಿ' ಚಿತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ, ಪ್ರಮೋದ್ ತಲ್ವಾರ್ ಸಂಕಲನ ಚಿತ್ರಕ್ಕಿದೆ. ಭರ್ಜರಿ ಮೇಕಿಂಗ್ ಹಾಗೂ ಆಕ್ಷನ್ ಸನ್ನಿವೇಶ 'ಬೇಗೂರು ಕಾಲೋನಿ' ಚಿತ್ರದಲ್ಲಿದೆ. ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸಿನಿಮಾ ಇದು. ಜನವರಿ ತಿಂಗಳಲ್ಲಿ 'ಬೇಗೂರು ಕಾಲೋನಿ' ಕಥೆ ಕರ್ನಾಟಕದ ಪ್ರೇಕ್ಷಕರ ಮುಂದೆ ಅನಾವರಣ ಆಗಲಿದೆ.


ಇದನ್ನೂ ಓದಿ: ಅಲ್ಲು ಅರ್ಜುನ್ ಬಂಧನ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಸಿಎಂ ರೇವಂತ್ ರೆಡ್ಡಿ..!


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.