Shubman Gill proposed to Rashmika Mandanna : ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸದ್ದಿಲ್ಲದೇ ಭಾರತದ ಸ್ಟಾರ್‌ ಕ್ರಿಕೆಟಿಗನ ಹೃದಯ ಕದ್ದಿದ್ದಾರೆ. ರಶ್ಮಿಕಾ ಮಂದಣ್ಣ ಕಡಿಮೆ ಅವಧಿಯಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಮುಖ ನಾಯಕಿಯಾಗಿ ಬೆಳೆದರು. ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಇದೀಗ ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಅವರು ರಶ್ಮಿಕಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಸಖತ್‌ ಸುದ್ದಿ ಮಾಡಿದೆ. 


COMMERCIAL BREAK
SCROLL TO CONTINUE READING

ಕ್ರಿಕೆಟಿಗರು ಮತ್ತು ಚಲನಚಿತ್ರ ನಟಿಯರ ಪ್ರೀತಿಯ ಕತೆ ಹೊಸದೇನಲ್ಲ. ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಸೌತ್ ಚಿತ್ರ ಡಿಯರ್ ಕಾಮ್ರೇಡ್‌ನಲ್ಲಿ ಮಹಿಳಾ ಕ್ರಿಕೆಟರ್ ಪಾತ್ರದಲ್ಲಿ ನಟಿಸಿದಾಗಿನಿಂದ, ಅವರು ಕ್ರಿಕೆಟ್ ಅಭಿಮಾನಿಗಳ ನೆಚ್ಚಿನವರಾಗಿದ್ದಾರೆ. ಅದೇ ಸಮಯದಲ್ಲಿ, ರಶ್ಮಿಕಾ ಮಂದಣ್ಣ ಅವರ ಕ್ರಿಕೆಟ್‌ ಆಸಕ್ತಿಯು ಚಿತ್ರದ ನಂತರ ಹೆಚ್ಚಾಗಿದೆ. ಈ ಸಮಯದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಟೀಂ ಇಂಡಿಯಾದ ಈ ಸ್ಟಾರ್‌ ಕ್ರಿಕೆಟರ್‌ ರಶ್ಮಿಕಾ ಅವರಿಗೆ ಮದುವೆ ಪ್ರಪೋಸಲ್‌ ನೀಡಿದ್ದಾರಂತೆ. 


ಇದನ್ನೂ ಓದಿ : Kushboo Sundar : '8 ವರ್ಷದವಳಿದ್ದಾಗ ನನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ' 


ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ರಶ್ಮಿಕಾ ಅವರ ಗಮನಾರ್ಹ ಪಾತ್ರಗಳಿಗಾಗಿ ಕ್ರಿಕೆಟಿಗ ಶುಭಮನ್ ಗಿಲ್ ಸಂದರ್ಶನವೊಂದರಲ್ಲಿ ಪ್ರಶಂಸಿಸಿದ್ದಾರೆ. ಸಂದರ್ಶನವೊಂದರಲ್ಲಿ ನಿರೂಪಕರು ಕ್ರಿಕೆಟಿಗ ಶುಭಮನ್ ಗಿಲ್ ಅವರನ್ನು ನಿಮ್ಮ ಕ್ರಶ್ ಯಾರು ಎಂದು ಕೇಳಿದಾಗ, ಇದಕ್ಕೆ ಪ್ರತಿಕ್ರಿಯೆಯಾಗಿ ರಶ್ಮಿಕಾ ಮಂದಣ್ಣ ಎಂದು ಹೇಳಿದ್ದಾರೆ. ರಶ್ಮಿಕಾ ನನ್ನ ಕ್ರಶ್ ಎಂಬ ಕ್ರಿಕೆಟಿಗನ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಯುವ ಕ್ರಿಕೆಟಿಗ ಶುಭಮನ್ ಗಿಲ್ ರಶ್ಮಿಕಾಗೆ ಪ್ರಪೋಸ್ ಮಾಡಿದ್ದಾರೆ ಎಂಬ ವದಂತಿಗಳು ಸಹ ಹರಿದಾಡುತ್ತಿವೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಕೇಳಿದ ರಶ್ಮಿಕಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.  


ಇದನ್ನೂ ಓದಿ : Bhairathi Ranagal : ʼಅವನ ಯುಗದ ಆರಂಭಕ್ಕೆ ಜಗತ್ತೇ ಸಾಕ್ಷಿʼ... ಶಿವಣ್ಣನ ʼಭೈರತಿ ರಣಗಲ್ʼ ಪೋಸ್ಟರ್‌ ರಿಲೀಸ್‌..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.