ಬಾಲಿವುಡ್ ಗೆ ಎಂಟ್ರಿ ಕೊಟ್ಟ ಲಾಲು ಪ್ರಸಾದ್ ಯಾದವ್ ಪುತ್ರ!
ನವದೆಹಲಿ: ಇತ್ತಿಚೆಗಷ್ಟೇ ಮದುವೆ ಆಗಿದ್ದ ಲಾಲು ಪ್ರಸಾದ್ ನ ಮಗ ತೇಜ್ ಪ್ರತಾಪ್ ಯಾದವ್ ಈಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾನೆ.
ಈಗ ಟ್ವೀಟರ್ ಮೂಲಕ ರುದ್ರ-ದಿ ಅವತಾರ್ ಎನ್ನುವ ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.ಆದರೆ ಈ ಸಿನಿಮಾದ ನಿರ್ದೇಶಕ ಯಾರು ಮತ್ತು ಇತರ ನಟರು ಯಾರು ಎಂದು ಇವರೆಗೂ ಕೂಡ ತಿಳಿದಿಲ್ಲ ಎನ್ನಲಾಗಿದೆ.
ತೇಜ್ ಪ್ರತಾಪ್ ಯಾದವ್ ಇತ್ತಿಚೆಗೆ ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರಾಯ್ ಯವರ ಮೊಮ್ಮಗಳನ್ನು ವರಿಸಿದ್ದರು.ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿಯೂ ಸಹಿತ ಮದುವೆಯ ಪೋಟೋಗಳು ಸಹಿತ ಸಾಕಷ್ಟು ವೈರಲ್ ಆಗಿದ್ದವು.
ಮದುವೆಯಾದ ನಂತರ ತೇಜ್ ಪ್ರಸಾದ್ ಐಶ್ವರ್ಯ ರೈ ಸೈಕಲ್ ಮೇಲೆ ಕುಳಿತುಕೊಂಡು ಸವಾರಿ ಮಾಡಿದ್ದು ಕೂಡ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.