ಬೆಂಗಳೂರು : ತೆಲುಗು ನಟ ನಾಗ ಶೌರ್ಯ ಜೊತೆ ಕನ್ನಡತಿ ಅನುಷಾ ಶೆಟ್ಟಿಯವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಮದುವೆ ಬೆಂಗಳೂರಿನಲ್ಲಿ ಇಂದು ಮದ್ಯಾಹ್ನ 11:25ಕ್ಕೆ ಅದ್ಧೂರಿಯಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು. ಸದ್ಯ ಮದುವೆಯ ಖುಷಿಯಲ್ಲಿರುವ ನಾಗಶೌರ್ಯ ಅವರಿಗೆ ಅವರ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೆಲವು ದಿನಗಳ ಹಿಂದೆ ನಟ ನಾಗಶೌರ್ಯ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಅನುಷಾ ಶೆಟ್ಟಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದರು. ಇಂದು ಬೆಳಗ್ಗೆ 11:25ಕ್ಕೆ ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯಟ್ ಪಂಚತಾರಾ ಹೋಟೆಲ್‌ನಲ್ಲಿ ವಿವಾಹವಾದರು. ಇವರ ಮದುವೆಗೆ ಸಂಬಂಧಿಸಿದ ಮೆಹಂದಿ, ಬ್ಯಾಚುಲರ್‌ ಪಾರ್ಟಿಗಳು ನಿನ್ನೆ ನಡೆದಿದ್ದವು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


ಇದನ್ನೂ ಓದಿ:  ʼಕಾಂತಾರʼ ದಾಖಲೆ ಮುರಿಯುತ್ತಾ ʼದೃಶ್ಯಂ 2ʼ : ಕೇವಲ ಎರಡು ದಿನದಲ್ಲಿ ಬರ್ಜರಿ ಕಲೆಕ್ಷನ್‌..!


ಇನ್ನು ನಾಗಶೌರ್ಯ ಮದುವೆಗೆ ಯಾವುದೇ ಟಾಲಿವುಡ್‌ ಸ್ಟಾರ್‌ಗಳು ಆಗಮಿಸಿಲ್ಲ. ವಾಸ್ತವವಾಗಿ, ಕೊರೊನಾ ನಂತರ ಟಾಲಿವುಡ್‌ನಲ್ಲಿ ನಡೆಯುತ್ತಿರುವ ಮೊದಲ ದೊಡ್ಡ ಶುಭ ಕಾರ್ಯಕ್ರಮ ಇದಾಗಿರುವುದರಿಂದ, ಅವರು ಅದ್ಧೂರಿಯಾಗಿ ಮದುವೆಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ನಾಗಶೌರ್ಯ ತನ್ನ ಕುಟುಂಬ ಸದಸ್ಯರು ಮತ್ತು ಹುಡುಗಿಯ ಕುಟುಂಬ ಸದಸ್ಯರೊಂದಿಗೆ ಚಿಕ್ಕದಾಗಿ ಚೊಕ್ಕದಾಗಿ ಮದುವೆಯಾಗಿದ್ದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.


ಟಾಲಿವುಡ್ ಸೆಲೆಬ್ರಿಟಿಗಳಿಗೆ ಆರತಕ್ಷತೆ ಏರ್ಪಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ನಾಗಶೌರ್ಯ ಕುಂದಾಪುರದ ಹಳ್ಳಿಯ ಯುವತಿ ಅನುಷಾ ಶೆಟ್ಟಿ ಅವರು ವರಿಸಿದ್ದಾರೆ. ಆದರೆ ಅನುಷಾ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಮತ್ತು ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಅನುಷಾ ಕೆಲಸ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದ ಮೂಲಕ ನವದಂಪತಿಗೆ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.