Chiranjeevi on Dali Dhananjay: ಕನ್ನಡ ಚಿತ್ರರಂಗ ಸದ್ಯ ದೇಶದೆಲ್ಲೆಡೆ ಪ್ರಖ್ಯಾತಿ ಪಡೆಯುತ್ತಿದೆ. ಕನ್ನಡದಲ್ಲಿ ಯುವಪ್ರತಿಭೆಗಳು ತಮ್ಮ ಪ್ರತಿಭೆಯನ್ನು ವಿಶೇಷ ರೀತಿಯಲ್ಲಿ ಪ್ರದರ್ಶಿಸುತ್ತಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲ, ನಿರ್ದೇಶನ, ನಿರ್ಮಾಣ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅಂತವರ ಸಾಲಿನಲ್ಲಿ ಕನ್ನಡದ ನಟ ಡಾಲಿ ಧನಂಜಯ ಅವರು ಕೂಡ ಒಬ್ಬರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತುಳಸಿ ಹಬ್ಬದಂದು ಈ ಕೆಲಸ ಮಾಡಿದ್ರೆ ದಾರಿದ್ರ್ಯ ದೂರವಾಗಿ, ಸಂಪತ್ತು ವೃದ್ಧಿಯಾಗುತ್ತೆ!


ಡಾಲಿ ಧನಂಜಯ ಕನ್ನಡದ ಅದ್ಬುತ ನಟ. ಸಿಕ್ಕ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಒಳ್ಳೊಳ್ಳೆ ಸಿನಿಮಾಗಳನ್ನ ಇಂಡಸ್ಟ್ರಿಗೆ ಕೊಟ್ಟ ಪ್ರತಿಭೆ. ಶಿವಣ್ಣನ ಟಗರು ಸಿನಿಮಾ ಮೂಲಕ ಡಾಲಿ ಆಗಿ ಬದಲಾದ ಧನಂಜಯ್‌ ಅವರಿಗೆ ಕನ್ನಡ ಅಷ್ಟೇ ಅಲ್ಲದೇ ಎಲ್ಲಾ ಭಾಷೆಗಳಲ್ಲೂ ಅವಕಾಶಗಳು ಹುಡುಕೊಂಡು ಬರುತ್ತಿವೆ.


ಈ ತಿಂಗಳ ಕೊನೆಯಲ್ಲಿ ಡಾಲಿ ನಟನೆಯ ʼಝೀಬ್ರಾʼ ಸಿನಿಮಾ ರಿಲೀಸ್ ಆಗುತ್ತಿದೆ. ಝೀಬ್ರಾ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಕನ್ನಡದ ನಟ ಡಾಲಿ ಧನಂಜಯ ಅವರನ್ನು ಹಾಡಿ ಹೊಗಳಿದ್ದಾರೆ ತೆಲುಗು ಮೆಗಾಸ್ಟಾರ್ ಚಿರಂಜೀವಿ.


ಝೀಬ್ರಾ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಧನಂಜಯ ಬಗ್ಗೆ ಮೆಗಾಸ್ಟಾರ್ ಮಾತನಾಡಿದ್ದು, "ಅದ್ಭುತ ನಟ ಧನಂಜಯ್ ತೆಲುಗಿನಲ್ಲಿ  ಸ್ಟಾರ್ ಆಗ್ತಾರೆ" ಎಂದಿದ್ದಾರೆ. ಮೆಗಾಸ್ಟಾರ್ ಹೊಗಳಿಕೆಗೆ ಡಾಲಿ ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದಾರೆ.


ಇದನ್ನೂ ಓದಿ: Hair Care: ಈ ಎಣ್ಣೆಯಲ್ಲಿ ಒಂದು ತುಂಡು ಕರ್ಪೂರ ಬೆರೆಸಿ ಹಚ್ಚಿ... ಬಿಳಿ ಕೂದಲು ಬುಡದಿಂದಲೇ ಕಡುಕಪ್ಪಾಗಲು ಜಸ್ಟ್​ 24 ಗಂಟೆ ಸಾಕು!


ಅಂದಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಲು ಸಿದ್ಧರಾಗಿರೋ ಡಾಲಿಗೆ ವೈವಾಹಿಕ ಜೀವನ ಮತ್ತು ವೃತ್ತಿ ಜೀವನ ಎರಡೂ ಸುಖಕರವಾಗಿರಲಿ ಅನ್ನೋದೇ ನಮ್ಮ ಆಶಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.