Moye More official song : ಸಾಮಾಜಿಕ ಮಾಧ್ಯಮದಲ್ಲಿ ಯಾವಾಗ ಯಾರು, ಯಾವುದು ಹೇಗೆ ವೈರಲ್ ಆಗುತ್ತೆ ಅಂತ ಗೊತ್ತಾಗುವುದಿಲ್ಲ. ಕೆಲವೊಮ್ಮೆ ವಿವಿಧ ರೀತಿಯ ಹಾಡುಗಳು ಮತ್ತು ನೃತ್ಯದ ವೀಡಿಯೊಗಳು ಸಿಕ್ಕಾಪಟ್ಟೆ ವೈರಲ್ ಆಗಿ ಟ್ರೆಂಡ್ ಕ್ರಿಯೆಟ್‌ ಮಾಡುತ್ತವೆ. ಪ್ರಸ್ತುತ, 'ಮೊಯೆ ಮೋಯೆ' ಎಂಬ ಸಾಂಗ್‌ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿದೆ. ಪ್ರತಿಯೊಬ್ಬರೂ ಈ ಹಾಡಿಗೆ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಬನ್ನಿ ಈ ಹಾಡಿನ ಅರ್ಥ, ಸಿಂಗರ್‌ ಯಾರು ಅಂತ ನೋಡೋಣ..


COMMERCIAL BREAK
SCROLL TO CONTINUE READING

ಇದು ಸರ್ಬಿಯನ್ ಹಾಡು ವಾಸ್ತವವಾಗಿ ಇದರ ಪ್ರಾರಂಭದ ಲೈನ್ 'ಮೋಯೆ ಮೋರ್' ಅಂತ, ಆದರೆ ಭಾರತದಲ್ಲಿ ಇದನ್ನು 'ಮೋಯೆ ಮೋಯೆ' ಎಂದು ಉಚ್ಚರಿಸಲಾಗುತ್ತಿದೆ. ಮಾಹಿತಿಯ ಪ್ರಕಾರ, ಈ ಹಾಡಿನ ಕ್ರೇಜ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಿಂದ ಪ್ರಾರಂಭವಾಯಿತು. ನಂತರ ಕೆಲವೇ ದಿನಗಳಲ್ಲಿ ಅದು ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್‌ನಂತಹ ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಹರಡಿತು. ಈ ಹಾಡು ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.


“ಬೇರೆ ಯಾರಿಗೂ Sorry ಕೇಳಲ್ಲ… ನಿಮ್ಮಿಬ್ರಿಗೆ ಮಾತ್ರ”- ಬಿಗ್ ಬಾಸ್’ನಿಂದ ಹೊರಬಂದ ಬೆನ್ನಲ್ಲೇ ಸ್ನೇಹಿತ್ ಹೀಗಂದಿದ್ದು ಯಾರಿಗೆ?


ವರದಿಗಳ ಪ್ರಕಾರ, ಈ ಮೂರು ನಿಮಿಷಗಳ ವೈರಲ್ ಹಾಡು 'ಮೊಯೆ ಮೋರ್' ಅನ್ನು ಸರ್ಬಿಯಾದ ಗಾಯಕ-ಗೀತರಚನೆಕಾರ ತೆಯಾ ಡೋರಾ ಹಾಡಿದ್ದಾರೆ. ಈ 'ಮೋಯೆ ಮೋರ್' ಅಥವಾ 'ಮೋಯೆ ಮೋಯೆ'  ಹಾಡಿನ ಅಧಿಕೃತ ಶೀರ್ಷಿಕೆ 'Dzanum'. ಹಾಡಿನ ಸಾಹಿತ್ಯವನ್ನು ಸರ್ಬಿಯಾದ ರಾಪರ್ ಸ್ಲೋಬೊಡಾನ್ ವೆಲ್ಕೊವಿಕ್ ಕೋಬಿ ಅವರ ಸಹಯೋಗದೊಂದಿಗೆ ಸಂಯೋಜಿಸಲಾಗಿದೆ.


ಆದರೆ ಲೋಕಾ ಜೊವಾನೋವಿಕ್ ರಾಗ ಸಂಯೋಜಿಸಿದ್ದಾರೆ, ಅದು ಈಗ ಹಿಟ್ ಆಗಿದೆ. ಈ ಹಾಡನ್ನು ಯೂಟ್ಯೂಬ್‌ನಲ್ಲಿ 57 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 5.7 ಕೋಟಿ ಬಾರಿ ವೀಕ್ಷಿಸಲಾಗಿದೆ. ವರದಿಗಳ ಪ್ರಕಾರ, ಸೆರ್ಬಿಯಾದಲ್ಲಿ 'ಮೋರ್' ಎಂದರೆ 'ದುಃಸ್ವಪ್ನ' ಅಂದರೆ ಕೆಟ್ಟ ಕನಸು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.