ದಳಪತಿ ವಿಜಯ್ ನಟನೆಯ `ಲಿಯೋ` ಸಿನಿಮಾ ಕೇರಳದಲ್ಲಿ ಬೈಕಾಟ್...! ಕಾರಣವೇನು?
Leo Bycott in Kerala: ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ನಟಿಸುತ್ತಿರುವ ಬಹುನಿರೀಕ್ಷಿತ ಲಿಯೋ ಸಿನಿಮಾಗೆ ಕೇರಳದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಚಿತ್ರವನ್ನು ಬೈಕಾಟ್ ಮಾಡಬೇಕು ಎನ್ನುವ ಕೂಗು ಜೋರಾಗಿದೆ.
Leo Movie: ವಾರಿಸು ಸಿನಿಮಾದ ನಂತರ ದಳಪತಿ ವಿಜಯ್ ಲಿಯೋ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಕೇರಳದಲ್ಲಿ ಲಿಯೋ ಸಿನಿಮಾಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಕೇರಳ ಮಂದಿ ಕೆಂಗಣ್ಣಿಗೆ ಗುರಿಯಾದ ಈ ಸಿನಿಮಾಗೆ #KeralaBoycottLEO ಹ್ಯಾಶ್ಟ್ಯಾಗ್ ಬಳಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಜಯ್ ಹಾಗೂ ಮಲಯಾಳಂ ನಟ ಮೋಹನ್ ಲಾಲ್ ಅಭಿಮಾನಿಗಳಿಗೆ ಒಬ್ಬರನ್ನ ಕಂಡರೇ ಒಬ್ಬರಿಗಾಗುವುದಿಲ್ಲ. ಒಂದು ಸಿನಿಮಾದಲ್ಲಿ ಇವರಿಬ್ಬರು ಜೋಡಿಯಾಗಿ ನಟಿಸಿದ್ದಾಗ ವಿಜಯ್ ಅಭಿಮಾನಿಯೊಬ್ಬ ಮೋಹನ್ ಲಾಲ್ ಅವರಿಗೆ ಅವಹೇಳನ ಕಾಮೆಂಟ್ ಮಾಡಿದ್ದ, ಅಲ್ಲಿಂದ ಶುರುವಾದ ಫ್ಯಾನ್ಸ್ ವಾರ್ ಇದು. ಈ ಕಾರಣಕ್ಕೆ ವಿಜಯ್ ಸಿನಿಮಾ ಬಿಡುಗಡೆಗೆ ಬಂದಾಗೆಲ್ಲ ಬೈಕಾಟ್ ಕೂಗು ಕೇಳಿಬರುತ್ತಿದೆ.
ಇದನ್ನೂ ಓದಿ- ‘ಕೆಡಿ’ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್...! ಅಣ್ಣನಾಗಿ ಎಂಟ್ರಿ ಕೊಟ್ಟ ರಮೇಶ್ ಅರವಿಂದ್
ಲಿಯೋ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಸದ್ಯ ಲಿಯೋ ಸಿನಿಮಾವನ್ನು ಬೈಕಾಟ್ ಮಾಡಿ ಎನ್ನುವ ಕೂಗು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಹೀಗಾಗಿ ಸಹಜವಾಗಿಯೇ ನಿರ್ಮಾಪಕರಿಗೆ ಆತಂಕ ಎದುರಾಗಿದೆ.
ಇನ್ನು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ಪೋಸ್ಟರ್‌ವೊಂದು ಇತ್ತೇಚೆಗೆ ರಿಲೀಸ್ ಆಗಿ ಸಖತ್ ಸೌಂಡ್ ಮಾಡಿತ್ತು. ಇದೀಗ ಅಭಿಮಾನಿಗಳ ಈ ಕಿತ್ತಾಟಕ್ಕೆ ಮೋಹನ್ಲಾಲ್ ಮತ್ತು ದಳಪತಿ ವಿಜಯ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ- ನಾನು ನಂದಿನಿ... ಸಾಂಗ್‌ಗೆ ರೀಲ್ಸ್ ಮಾಡಿದ ನಟಿ ರಮ್ಯಾ..ಇವರು ನಮ್ಮ ನಂದು ಎಂದ ಫ್ಯಾನ್ಸ್!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.