Vijay Net Worth: ಕಾಲಿವುಡ್‌ ಸ್ಟಾರ್‌ ನಟ ವಿಜಯ್‌ ಶನಿವಾರ, ಜೂನ್‌ 22ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಂತೆಯೇ ದಳಪತಿ ವಿಜಯ್‌ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಮೂರು ದಶಕಗಳ ಇತಿಹಾಸವಿದೆ. ಈ ಸ್ಟಾರ್ ಹೀರೋ ರೇಂಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚಲನಚಿತ್ರೋದ್ಯಮದಲ್ಲಿ ಅತೀ ಹೆಚ್ಚು ಸಾಂಭಾವನೆ ಪಡೆಯುವವರಲ್ಲಿ ವಿಜಯ್‌ ಕೂಡ ಒಬ್ಬರು. ಅಷ್ಟಕ್ಕೂ ಇವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಮುಂದೆ ಓದಿ...


COMMERCIAL BREAK
SCROLL TO CONTINUE READING

2019 ದಳಪತಿ ವಿಜಯ್ ಪ್ರತಿ ಚಿತ್ರಕ್ಕೆ ರು.100 ಕೋಟಿ ಸಂಭಾವನೆ ಪಡೆಯುತ್ತಿದ್ದರು. ವರ್ಷಗಳು ಕಳೆಯುತ್ತಾ ರೇಂಜ್‌ ಹೆಚ್ಚಾದಂತೆ ದಳಪತಿ ಸಂಭಾವನೆ ಕೂಡ ಹೆಚ್ಚಾಗಿದೆ. ಅಷ್ಟಕ್ಕೂ ದಳಪತಿ ಈಗ ಒಂದು ಸಿನಿಮಾಗೆ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆಯುತ್ತಾರೆ. ವಿಜಯ್‌ ನಟಸಿದ ಕೊನೆಯ ಚಿತ್ರಕ್ಕೆ ನಟ 250 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ದಳಪತಿ ವಿಜಯ್ ಸುಮಾರು 420 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರಂತೆ. ವಿಜಯ್ ಕೇವಲ ಸಿನಿಮಾಗಳ ಮೂಲಕ ಮಾತ್ರವಲ್ಲದೆ ಹಲವು ಕಂಪನಿಗಳ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಆದಾಯ ಗಳಿಸುತ್ತಾರೆ. ಕೇವಲ ಜಾಹೀರಾತುಗಳ ಮೂಲಕ ವಾರ್ಷಿಕ ರೂ.10 ಕೋಟಿ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ. 


ಇದನ್ನೂ ಓದಿ: ನಯನತಾರಾ ಅಲ್ಲ.. 15 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಿದ್ದ ಈಕೆ ಇಂದು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್!


ದಳಪತಿ ವಿಜಯ್‌ಗೆ ಕಾರುಗಳು ಎಂದರೆ ಬಹಳಷ್ಟು ಹುಚ್ಚಿದೆ.  ಅವರ ಗ್ಯಾರೇಜ್‌ನಲ್ಲಿ ಹಲವು ಐಷಾರಾಮಿ ಕಾರುಗಳಿವೆ. ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ವಿಜಯ್‌ ಹೊಂದಿದ್ದಾರೆ. ಅಷ್ಟೇ ಅಲ್ಲ 1.30 ಕೋಟಿ ಮೌಲ್ಯದ ಆಡಿ ಎ8, 75 ಲಕ್ಷ ಮೌಲ್ಯದ ಬಿಎಂಡಬ್ಲ್ಯು, 90 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಎಕ್ಸ್6, 35 ಲಕ್ಷ ಮೌಲ್ಯದ ಮಿನಿ ಕೂಪರ್ ಕಾರು ಕೂಡ ದಳಪತಿಯವರ ಬಳಿ ಇದೆ. 


ಸದ್ಯಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ವಿಜಯ್‌ ಸಿನಿಮಾಗೆ ಗುಡ್‌ ಬೈ ಹೇಳುತ್ತಾರೆ ಎನ್ನುವ ಗುಸು ಗುಸು ಕೂಡ ಕೇಳಿ ಬರುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ