Vikram Thangalaan : ತಮಿಳು ನಟ ಚಿಯಾನ್ ವಿಕ್ರಮ್ ಅವರು ಇಂದು ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಕ್ರಮ್‌ ಹುಟ್ಟು ಹಬ್ಬದ ಪ್ರಯುಕ್ತ ಅವರ ಮುಂಬರುವ ಚಿತ್ರ 'ತಂಗಲಾನ್‌' ಚಿತ್ರದ ಮೇಕಿಂಗ್‌ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರದ ಮೇಕಿಂಗ್‌ ದೃಶ್ಯಗಳನ್ನು ನೋಡಿದ್ರೆ, ಈ ಸಿನಿಮಾ ವಿಕ್ರಮ್‌ ಎಷ್ಟು ಶ್ರಮವಹಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಅಲ್ಲದೆ, ಚಿತ್ರದ ಮೇಲೆ ಕುತೂಹಲ ಹೆಚ್ಚಿಸುತ್ತದೆ.


COMMERCIAL BREAK
SCROLL TO CONTINUE READING

ನಿರ್ದೇಶಕ ಪಾ ರಂಜಿತ್ ಮತ್ತು ವಿಕ್ರಮ್‌ ನಿರ್ದೇಶನ ಮೊದಲ ಸಿನಿಮಾ ʼತಂಗಲಾನ್‌ʼ. ರಂಜಿತ್ ಸಿನಿಮಾದ ಹೊಸ ಪೋಸ್ಟರ್ ಮತ್ತು ವೀಡಿಯೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ʼನನ್ನ ತಂಗಲಾನ್‌, ಚಿಯಾನ್ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು. ತಂಗಲಾನ್‌ನ ಭವ್ಯವಾದ ಮೇಕಿಂಗ್ ದೃಶ್ಯ ವೀಡಿಯೊವನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇವೆʼ ಎಂದು ಶೀರ್ಷಿಕೆ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Nita Ambani: 5 ಲಕ್ಷದ ಹ್ಯಾಂಡ್‌ಬ್ಯಾಗ್‌, 100 ಕೋಟಿಯ ನೆಕ್ಲೇಸ್, ಕೋಟ್ಯಂತರ ಮೌಲ್ಯದ ಕಾರು.. ಇದು ನೀತಾ ಅಂಬಾನಿಯ ಐಷಾರಾಮಿ ಜೀವನ


ಮೇಕಿಂಗ್‌ ವೀಡಿಯೊದಲ್ಲಿ ವಿಕ್ರಮ್ ಪಾತ್ರದ ಒಂದು ನೋಟವನ್ನು ನೀಡುತ್ತದೆ. ಅಲ್ಲದೆ, ಅವರು ಪಾತ್ರಕ್ಕೆ ಹೇಗೆ ಸಿದ್ಧರಾದರು ಎನ್ನುವುದನ್ನ ತೋರಿಸಲಾಗಿದೆ. ವಿಕ್ರಮ್ ಈ ಸಿನಿಮಾದ ಪಾತ್ರಕ್ಕೆ ಹೇಗೆ ತಮ್ಮ ದೇಹವನ್ನು ರೂಪಾಂತರ ಮಾಡಿದ್ದಾರೆ ಎನ್ನುವುದು ತಂಗಲಾನ್‌ ಮೆಕಿಂಗ್‌ ವಿಡಿಯೋ ನೋಡಿದ್ರೆ ಅರ್ಥವಾಗುತ್ತದೆ. 


Dhoomam Movie : ಹೊಂಬಾಳೆ ನಿರ್ಮಾಣದ ಫಹಾದ್ ನಟನೆಯ ʼಧೂಮಂʼ ಪೋಸ್ಟರ್‌ ರಿಲೀಸ್‌..!


ಈ ಆಕ್ಷನ್ ಎಂಟರ್ಟೈನರ್ ಚಿತ್ರವನ್ನು ಸ್ಟುಡಿಯೋ ಗ್ರೀನ್ - ಕೆ.ಇ. ಜ್ಞಾನವೇಲ್ ರಾಜ ಪಾ.ರಂಜಿತ್ ಅವರ ನೀಲಂ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಭಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದ ಚಿತ್ರೀಕರಣದ ಅಂತಿಮ ಹಂತದಲ್ಲಿದೆ. ವಿಕ್ರಮ್ ಪ್ರಸ್ತುತ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 2 ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಆದಿತಾ ಕರಿಕಾಳನ್ (10 ನೇ ಶತಮಾನದಲ್ಲಿ ಚೋಳ ಚಕ್ರವರ್ತಿ) ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ