ನವದೆಹಲಿ: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪೂತ್ ಅವರ ನಿಧನದ ಬಳಿಕ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದೆ. ಸಾಮಾಜಿಕ ಮಾಧ್ಯಮಗಳಿಂದ ಹಿಡಿದು ಸೆಲಿಬ್ರಿಟಿಗಳ ನಡುವೆ ಇದೀಗ ಸ್ವಜನಪಕ್ಷಪಾತದ ಕುರಿತು ಬಿಸಿಬಿಸಿ ಚರ್ಚೆಗಳು ಆರಂಭವಾಗಿವೆ. ಏತನ್ಮಧ್ಯೆ, ಖ್ಯಾತ ಚಿತ್ರ ನಿರ್ದೇಶಕ ಅನುಭವ್ ಸಿನ್ಹಾ ಚಿತ್ರೋದ್ಯಮಕ್ಕೆ ಬೇಸತ್ತು ಗಂಭೀರ ನಿರ್ಣಯವೊಂದನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ  ಬಾಲಿವುಡ್ ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಅನುಭವ್ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅನುಭವ್. " ಸಾಕಿನ್ನು...! ನಾನು ಬಾಲಿವುಡ್ ಗೆ ನನ್ನ ರಾಜೀನಾಮೆ ನೀಡುತ್ತಿದ್ದೇನೆ" ಎಂದಿದ್ದಾರೆ. ಅಷ್ಟೇ ಅಲ್ಲ ಇದರೊಂದಿಗೆ ಅನುಭವ್ ಅವರು ತಮ್ಮ ಪ್ರೊಫೈಲ್ ಕೂಡ ಬದಲಾಯಿಸಿದ್ದಾರೆ. ತಮ್ಮ ಪ್ರೊಫೈಲ್ ಮುಂದೆ ಅವರು NOT ಬಾಲಿವುಡ್ ಎಂದೂ ಕೂಡ ಬರೆದುಕೊಂಡಿದ್ದಾರೆ. ಆದರೆ, ನಿಜಾರ್ಥದಲ್ಲಿ ಅನುಭವ್ ಒಂದು ಅಬಿಯಾನವನ್ನೇ ಆರಂಭಿಸಿದ್ದಾರೆ ಎನ್ನಲಾಗುತ್ತಿದ್ದು, ಇದರೊಂದಿಗೆ ಇತರ ಚಿತ್ರ ನಿರ್ದೇಶಕರೂ ಕೂಡ ತಮ್ಮನ್ನು ಸೇರಿಸಿಕೊಳ್ಳುತ್ತಿದ್ದಾರೆ.



ಚಲನಚಿತ್ರ ನಿರ್ಮಾಪಕ ಸುಧೀರ್ ಮಿಶ್ರಾ  ಅನುಭವ ಅವರ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. "ಬಾಲಿವುಡ್ ಎಂದರೇನು? ನಾನು ಸತ್ಯಜಿತ್ ರೇ, ರಾಜ್ ಕಪೂರ್, ಗುರು ದತ್, ಬಿಮಲ್ ರಾಯ್, ಮೃಣಾಲ್ ಸೇನ್ ಹೃಷಿಕೇಶ್ ಮುಖರ್ಜಿ, ಕೆ ಆಸಿಫ್, ವಿಜಯ್ ಆನಂದ್, ಜಾವೇದ್ ಅಖ್ತರ್, ಗುಲ್ಜಾರ್, ಶೇಖರ್ ಕಪೂರ್ ಅವರಿಂದ ಸ್ಫೂರ್ತಿ ಪಡೆದ ಚಿತ್ರರಂಗದ ಭಾಗವಾಗಲು ಬಂದಿದ್ದೆ, ಅಲ್ಲಿ ನಾನು ಯಾವಾಗಲೂ ಇರುತ್ತೇನೆ" ಎಂದಿದ್ದಾರೆ. ಸುಧೀರ್ ಮಿಶ್ರಾ ಅವರಿಗೆ ಪ್ರತಿಕ್ರಿಯೆ ನೀಡಿರುವ ಅನುಭವ್, " ಹಾಗಾದ್ರೆ .. ಬಾಲಿವುಡ್ ನಿಂದ ಇಬ್ಬರು ಹೊರಗೆ.. ನಮ್ಮ ಹಿಂದಿ ಚಲನಚಿತ್ರರಂಗದಲ್ಲಿದ್ದುಕೊಂಡು ಚಿತ್ರ ನಿರ್ಮಿಸೋಣ.. 'ಯಹ್ ಲೇ ಅಪ್ನಿ ಲಕುಟಿ ಕಂಬರಿಯಾ, ಬಹುತಹಿ ನಾಚ್ ನಚಾಯೋ' ಎಂದು ಹೇಳಿದ್ದಾರೆ.



ಇದಲ್ಲದೆ, ನಿರ್ದೇಶಕ ಹನ್ಸಲ್ ಮೆಹ್ತಾ ಕೂಡ ತಾವು ಬಾಲಿವುಡ್ ತೊರೆದಿರುವುದಾಗಿ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಮೊದಲು ಎಂದಿಗೂ ಅಸ್ತಿತ್ವದಲ್ಲಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರುವ ಅನುಭವ್, "ಮತ್ತೊಬ್ಬ ಬಂದ ನೋಡಿ" ಎಂದು ಹೇಳಿದ್ದಾರೆ. ಜೊತೆಗೆ "ಕೇಳಿ.. ಸಹೋದರರೇ. ನೀವು ಬಾಲಿವುಡ್ ಬಗ್ಗೆ ಮಾತನಾಡುವಾಗ, ನೀವು ನಮ್ಮ ಬಗ್ಗೆ ಮಾತನಾಡುತ್ತಿಲ್ಲ" ಎಂದರ್ಥ ಎಂದಿದ್ದಾರೆ.