ಅವಾರ್ಡ್ ಫಂಕ್ಷನ್ ಗಳ ಅಬ್ಬರ ಹೇಗಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುತ್ತದೆ. ಅಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತವಾದ ಡ್ರೆಸ್ಸಿಂಗ್ ನಲ್ಲಿರುತ್ತಾರೆ. ಇದಕ್ಕಾಗಿ ಖ್ಯಾತ ಡಿಸೈನರ್ ಗಳು ತಿಂಗಳಾನುಗಟ್ಟಲೆಯಿಂದ ಕೆಲಸ ಮಾಡುತ್ತಿರುತ್ತಾರೆ. ಇಲ್ಲಿ ಒಬ್ಬೊಬ್ಬ ನಟಿಯೂ ಸಾವಿರಾರು ರೂಪಾಯಿ ಖರ್ಚು ಮಾಡಿ ಡ್ರೆಸ್ ಡಿಸೈನ್ ಮಾಡಿಸಿಕೊಂಡಿರುತ್ತಾರೆ. ಇವರೆಲ್ಲರ ಮಧ್ಯೆ ಸಾದಾ ಸರಳವಾಗಿ ವೇದಿಕೆಗೆ ಆಗಮಿಸಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿ ಈ ನಟ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ನಟಿ ಇಡೀ ಬಾಲಿವುಡ್ ಅನ್ನೇ ಆಳುತ್ತಿರುವ ಬೆಡಗಿ. ಮಾಡಿದ ಚಿತ್ರಗಳು ಸೋತಿರುವುದು ಬಹಳ ಕಡಿಮೆ. ಸೌಂದರ್ಯ, ಬಣ್ಣಕ್ಕಿಂತ ಪ್ರತಿಭೆಯೇ ಮುಖಿ ಎನ್ನುವುದನ್ನು ಜಗತ್ತಿಗೆ ಸಾರಿದ ನಟಿ. ಫಿಲಂ ಫೇರ್ ಅವಾರ್ಡ್ ಶೋ ನಲ್ಲಿ ಅತ್ಯುತ್ತಮ ನಟಿ ಬಿರುದು ಸಿಕ್ಕಿದಾಗಲೂ ಸಿಂಪಲ್ ಚೂಡಿದಾರ ಹಾಕಿಕೊಂಡು ವೇದಿಕೆ ಹತ್ತಿದ್ದಾರೆ. ಅಲ್ಲಿ ಹೇಳಿಕೊಳ್ಳುವಂಥಹ ಹೇರ್ ಸ್ಟೈಲ್ ಕೂಡಾ ಇಲ್ಲ. ತಲೆತುಂಬಾ ಎಣ್ಣೆ ಹಚ್ಚಿಕೊಂಡಿದ್ದ ಈ ನಟಿ ಒಂದು ಪೋನಿ ಹಾಕಿಕೊಂಡಿದ್ದಾರೆ. 


ಇದನ್ನೂ ಓದಿ : ಮೋಸ್ಟ್‌ ಹ್ಯಾಂಡಸಮ್‌ ಬಿಗ್‌ಬಾಸ್‌ ಸ್ಪರ್ಧಿ ತ್ರಿವಿಕ್ರಮ್‌ ತಂದೆ ಯಾರು ಗೊತ್ತೇ? ಇವರ ನಿಜಜೀವನದ ಕಥೆ ಕೇಳಿದ್ರೆ ಎಂತವರಿಗೂ ಕಣ್ಣೀರು ಬರುತ್ತೆ!!


ನಾವು ಹೇಳುತ್ತಿರುವ ನಟಿ ಬೇರೆ ಯಾರೂ ಅಲ್ಲ, ಕಾಜೋಲ್. ಸರಳವಾದ ಕಿತ್ತಳೆ ಬಣ್ಣದ ಸೂಟ್‌ನಲ್ಲಿ ಪ್ರಶಸ್ತಿ ಕಾರ್ಯಕ್ರಮಕ್ಕೆ ಹಾಜರಾಗಿರುವ ಈಕೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಗುಪ್ತ್ (1997) ಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸುವ ಸಲುವಾಗಿ ವೇದಿಕೆಗೆ ಬಂದ ಕಾಜೋಲ್ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದರು.  


 


https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 ಗುಪ್ತ್ ಚಿತ್ರದಲ್ಲಿ ಬಾಬಿ ಡಿಯೋಲ್ ಮತ್ತು ಮನೀಶಾ ಕೊಯಿರಾಲಾ ಕೂಡಾ ನಟಿಸಿದ್ದಾರೆ. ಈ ಚಿತ್ರವನ್ನು ಬಾಲಿವುಡ್‌ನ ಅತ್ಯುತ್ತಮ ಕೊಲೆ ರಹಸ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಋಣಾತ್ಮಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದ ಮೊದಲ ನಟಿ ಕಾಜೋಲ್. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ