Bodyguards Salary: ಎಲ್ಲಾ ಸ್ಟಾರ್‌ ನಟ - ನಟಿಯರೀಗೂ ಅಭಿಮಾನಿಗಳು ಆಟೋಗ್ರಾಫ್, ಛಾಯಾಚಿತ್ರಗಳನ್ನು ಕೇಳುತ್ತಾ ಹಿಂದೆ ಬರುವುದು ಸಾಮಾನ್ಯ. ಅಲ್ಲದೇ ಅನೇಕ ಬಾರಿ ಅವರನ್ನು ದ್ವೇಷಿಸುವವರು ಇರುತ್ತಾರೆ. ಇವರಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಮನೆಗೆ ಬರಲು ಸ್ಟಾರ್‌ ನಟ - ನಟಿಯರು ಅಂಗರಕ್ಷಕರನ್ನು ಹೊಂದಿರುತ್ತಾರೆ. ಇನ್ನು ಸಿನಿಮಾದಲ್ಲಿ ಅದ್ಧೂರಿ ಸ್ಟಂಟ್ ಮಾಡಿ ವಿಲನ್ ಗಳನ್ನು ಬೆಚ್ಚಿ ಬೀಳಿಸುವ ಸ್ಟಾರ್ ಹೀರೋ, ಹೀರೋಯಿನ್ ಗಳು ಭಾರೀ ಸ್ಯಾಲರಿ ಪಡೆಯುತ್ತಿರುವಾಗ... ಅವರಿಗೆ ಭದ್ರತೆ ನೀಡುವ ವೈಯಕ್ತಿಕ ಅಂಗರಕ್ಷಕರಿಗೆ ಇನ್ನೆಷ್ಟು ಸ್ಯಾಲರಿನೀಡಬೇಕು? 


COMMERCIAL BREAK
SCROLL TO CONTINUE READING

ಚಿತ್ರರಂಗದ ಸೆಲೆಬ್ರಿಟಿಗಳು ಜನಸಂದಣಿಯೊಳಗೆ ಕಾಲಿಟ್ಟರೆ ಅವರಿಗೆ ಭದ್ರತೆ ಒದಗಿಸುವುದು ಎಷ್ಟು ಕಷ್ಟ ಎಂಬುದನ್ನು ನೀವೂ ಅನೇಕ ಬಾರಿ ವಿಡಿಯೋಗಳಲ್ಲಿ ನೋಡಿರಬಹುದು. ಅಗಾಧ ಫ್ಯಾನ್ ಫಾಲೋಯಿಂಗ್ ಹೊಂದಿರುವ ಸ್ಟಾರ್ ಹೀರೋ, ಹೀರೋಯಿನ್ ಗಳಿಗೆ ಸೆಕ್ಯೂರಿಟಿ ಕೊಡೋಕೆ ಅಂತಾನೆ ಅವರ ಅಂಗರಕ್ಷಕರು ಇರುತ್ತಾರೆ. ಹಾಗಾಗಿಯೇ ಆ ಸ್ಟಾರ್ ಸೆಲೆಬ್ರಿಟಿಗಳಿಗೆ ರಕ್ಷಣೆ ನೀಡುವ ಅಂಗರಕ್ಷಕರು ಕೂಡ ಭಾರೀ ಸ್ಯಾಲರಿ ಪಡೆಯುತ್ತಿದ್ದಾರೆ.  


ಇದನ್ನೂ ಓದಿ: ಇವರೇ ನೋಡಿ ದಕ್ಷಿಣ ಭಾರತದ ಶ್ರೀಮಂತ ನಟಿ.. ಸಮಂತಾ, ತಮನ್ನಾ, ಅನುಷ್ಕಾ, ರಶ್ಮಿಕಾ ಅಲ್ಲವೇ ಅಲ್ಲ.! 


ಶಾರುಖ್ ಖಾನ್ ಅವರ ಅಂಗರಕ್ಷಕ ರವಿ ಸಿಂಗ್ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅಂಗರಕ್ಷಕರಾಗಿದ್ದಾರೆ. ರವಿ ಸಿಂಗ್ 2.7 ಕೋಟಿ ಸ್ಯಾಲರಿ ಪಡೆಯುತ್ತಾರೆ. ಶಾರುಖ್ ಖಾನ್ ಅವರ ವೈಯಕ್ತಿಕ ಅಂಗರಕ್ಷಕನ ನಂತರ, ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ ಅತಿ ಹೆಚ್ಚು ಸ್ಯಾಲರಿ ಪಡೆಯುವರು. ಸಲ್ಮಾನ್ ಖಾನ್ ಅಂಗರಕ್ಷ ಶೇರಾ 2 ಕೋಟಿ ರೂ. ಸಂಬಳ ಪಡೆಯುತ್ತಾರೆ. 


ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್ ಅವರ ಅಂಗರಕ್ಷಕ ಜಿತೇಂದ್ರ ಶಿಂಧೆ. ಮಾಧ್ಯಮ ವರದಿಗಳ ಪ್ರಕಾರ, ಅಮಿತಾಬ್ ಬಚ್ಚನ್ ಅವರ ಅಂಗರಕ್ಷಕನಾಗಿ ದೀರ್ಘಕಾಲದಿಂದ  ಜಿತೇಂದ್ರ ಶಿಂಧೆ ಕೆಲಸ ಮಾಡುತ್ತಿದ್ದಾರೆ. ಅವರು ರೂ. 1.5 ಕೋಟಿ ಸಂಬಳ ಪಡೆಯುತ್ತಿದ್ದಾರೆ.


ಇದನ್ನೂ ಓದಿ: ʼಹ್ಯಾಪಿ ಬರ್ತಡೇ ಮೈ ಡಾರ್ಲಿಂಗ್ ಕೃಷ್ಣ; ಆದಿಗೆ ಶುಭಕೋರಿದ ‘ಲವ್ ಮಾಕ್ಟೇಲ್ ನಿಧಿಮಾ!


ಅಮೀರ್ ಖಾನ್ ಅವರ ಅಂಗರಕ್ಷಕ ಯುವರಾಜ್ ಅವರ ವಾರ್ಷಿಕ ವೇತನ ರೂ. 2 ಕೋಟಿ. ಅಲ್ಲದೆ, ಅಕ್ಷಯ್ ಕುಮಾರ್ ತನ್ನ ಅಂಗರಕ್ಷಕನಿಗೆ ರೂ. 1.2 ಕೋಟಿ ಸಂಬಳ ನೀಡುತ್ತಾರೆ. ಸ್ಟಾರ್ ನಟಿ ದೀಪಿಕಾ ಪಡುಕೋಣೆ ತಮ್ಮ ಅಂಗರಕ್ಷಕ ಜಲಾಲ್‌ಗೆ 1.2 ಕೋಟಿ ಸಂಬಳ ನೀಡುತ್ತಿದ್ದಾರೆ. ಜಲಾಲ್ ಹಲವು ವರ್ಷಗಳಿಂದ ಅವರ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ.


ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ಅಂಗರಕ್ಷಕನಾಗಿ ಪ್ರಕಾಶ್ ಸಿಂಗ್ ಸೋನು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕಾಶ್ ಸಿಂಗ್ ಬಹಳ ದಿನಗಳಿಂದ ಅನುಷ್ಕಾ ಶರ್ಮಾ ಅವರ ಅಂಗರಕ್ಷಕ. ಆದರೆ, ಮದುವೆಗೂ ಮುನ್ನ ಅನುಷ್ಕಾ ಶರ್ಮಾ ಅವರ ವೈಯಕ್ತಿಕ ಅಂಗರಕ್ಷಕರಾಗಿದ್ದವರು ಪ್ರಕಾಶ್ ಸಿಂಗ್. ಇವರು ಸಮಯ ಮತ್ತು ಸಂದರ್ಭದಿಂದ ಇಬ್ಬರಿಗೂ ರಕ್ಷಣೆ ನೀಡುತ್ತಿದ್ದಾರೆ. ವರದಿಯ ಪ್ರಕಾರ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿಗಳು ಪ್ರಕಾಶ್ ಸಿಂಗ್ ಅವರಿಗೆ ವಾರ್ಷಿಕ ರೂ.1.2 ಕೋಟಿ ಸಂಬಳ ನೀಡುತ್ತಾರೆ.


ಇದನ್ನೂ ಓದಿ: ಪಠಾಣ್, RRR ಅಲ್ಲ.. ಕೊರೊನಾ ಬಳಿಕ ಅತಿ ಹೆಚ್ಚು ಲಾಭ ಗಳಿಸಿದ್ದು ಕನ್ನಡದ ಈ ಸಿನಿಮಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.