ಗಣೇಶ ಚತುರ್ಥಿಯಂದು ಬಿಡುಗಡೆಯಾಯ್ತು ಗಡದ್ದಾದ `ಇಂಟರ್ವಲ್` ಸಾಂಗ್.!
ಇತ್ತೀಚೆಗೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಚಿತ್ರ `ಇಂಟರ್ ವಲ್'. ಯುವ ನಿರ್ದೇಶಕ ಭರತ್ ವರ್ಷ ಸಾರಥ್ಯದ ಈ ಸಿನಿಮಾ, ಯುವ ಆವೇಗದ ಕಥೆಯನ್ನೊಳಗೊಂಡಿದೆ ಅಂತೊಂದು ಸುಳಿವು ಚಿತ್ರತಂಡದ ಕಡೆಯಿಂದ ಜಾಹೀರಾಗಿತ್ತು. ಇದೀಗ ಆನಂದ್ ಆಡಿಯೋ ಮೂಲಕ `ಇಂಟರ್ ವಲ್' ನ ಹಾಡೊಂದು ಬಿಡುಗಡೆಗೊಂಡಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆಯಿಂದ ಈ ಹಾಡಿಗೆ ಮೆಚ್ಚುಗೆಗಳು ಮೂಡಿಕೊಂಡಿವೆ. ಗಣೇಶನ ಹಬ್ಬದೊಂದಿಗೆ ಯುವ ಸಮುದಾಯಕ್ಕಿರುವ ಅವಿನಾಭಾವ ಬಂಧವನ್ನು, ಆ ಸಂಭ್ರಮದ ತೀವ್ರತೆಯನ್ನು ಹಿಡಿದಿಟ್ಟುಕೊಂಡಿರುವ ಸದರಿ ಸಾಂಗ್ ಗಣೇಶನ ಸುತ್ತ ಸೃಷ್ಟಿಯಾಗಿರುವ ಪ್ರಸಿದ್ಧ ಹಾಡುಗಳ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ಭರತವರ್ಷ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರುವ `ಇಂಟರ್ ವಲ್' ಚಿತ್ರದ ಈ ಹಾಡನ್ನು ರ್‍ಯಾಪರ್ ಚಂದನ್ ಶೆಟ್ಟಿ ಹಾಡಿದ್ದಾರೆ. ವಿಜಯ್ ಈಶ್ವರ್ ಸಾಹಿತ್ಯಕ್ಕೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆ ಮಾಡಿದ್ದಾರೆ. `ಗಣ ಗಣ ಗಣಪತಿ ಫಂಕ್ಷನ್ ಹಲೋ ಎವ್ರಿಬಡಿ ಸ್ವಲ್ಪ ಅಟೆನ್ಷನ್' ಅಂತ ಶುರುವಾಗೋ ಈ ಹಾಡು, ಬಹುತೇಕರ ಬದುಕಿನ ಗತವೈಭವವನ್ನು ಹಿಡಿದಿಟ್ಟುಕೊಂಡಂತಿದೆ. ಇದರೊಂದಿಗೆ ಸಿನಿಮಾದ ಒಂದಷ್ಟು ಪಾತ್ರಗಳೂ ಕೂಡಾ ಪರಿಚಯವಾಗಿವೆ. ಒಂದಿಡೀ ಕಥೆಯಲ್ಲಡಗಿರುವ ಯುವ ಆವೇಗ, ಹುಮ್ಮಸ್ಸನ್ನು ತುಂಬಿಕೊಂಡಂತೆ ಹಾಡು ಮೂಡಿ ಬಂದಿದೆ.
ಇದನ್ನೂ ಓದಿ- ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಸೆ.15 ಕೊನೆಯ ದಿನ
ಇಂಜಿನಿಯರಿಂಗ್ ಮುಗಿಸಿಕೊಂಡು, ಕೆಲಸ ಅರಸಿ ಹೊರಡುವ ಯುವಕರ ಗುಂಪೊಂದರ ಹೋರಾಟದ ಕಥನವನ್ನು ಈ ಚಿತ್ರ ಒಳಗೊಂಡಿದೆಯಂತೆ. ಅದರೊಂದಿಗೆ ರೋಚಕ ಅಂಶಗಳನ್ನು ಬೆರೆಸಿ ಸುಕಿ ಕಥೆ ಬರೆದಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಈ ಒಂದೆಳೆ ಕೇಳಿದಾಕ್ಷಣ ನಿಮ್ಮ ಮನಸಲ್ಲಿ ಒಟ್ಟಾರೆ ಸಿನಿಮಾದ ಬಗ್ಗೆ ಕಲ್ಪನೆಯೊಂದು ಗರಿಬಿಚ್ಚಿಕೊಳ್ಳಬಹುದು. ಆದರೆ, ಅದ್ಯಾವುದಕ್ಕೂ ನಿಲುಕದ ಹೊಸತನಗಳೊಂದಿಗೆ ಈ ಚಿತ್ರ ರೂಪುಗೊಂಡಿದೆಯಂತೆ. ಅಂದಹಾಗೆ ಬೆಂಗಳೂರು, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳೂ ಮುಗಿದಿವೆ.
ಈಗಾಗಲೇ ಅನೇಕ ಸೀರಿಯಲ್ಲುಗಳಲ್ಲಿ ನಟಿಸಿ, ತಮ್ಮದೇ ವಿಶಿಷ್ಟ ಮ್ಯಾನರಿಸಂ ಮತ್ತು ನಟನಾ ಶೈಲಿಯಿಂದ ಗಮನ ಸೆಳೆದಿರುವವರು ಶಶಿರಾಜ್ (ಬಾಲಾ). ಅವರು ಇಂಟರ್ ವಲ್ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನುಳಿದಂತೆ ರಂಗಭೂಮಿ ಕಲಾವಿದ ಪ್ರಜ್ವಲ್ ಗೌಡ, ಸುಖಿ ಮತ್ತು ರಂಗನಾಥ್ ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜ್ ಕಾಂತ್ ಛಾಯಾಗ್ರಹಣ, ಪ್ರಮೋದ್ ಮರವಂತೆ ಮತ್ತು ಸುಖಿ ಸಾಹಿತ್ಯ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸುಖಿ ನಿಭಾಯಿಸಿದ್ದಾರೆ. ಈ ಹಾಡಿಗೆ ಸಿಗುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗಳ ಪ್ರಭೆಯಲ್ಲಿಯೇ ಬಿಡುಗಡೆಗಾಗಿನ ತಯಾರಿ ಭರದಿಂದ ಸಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.