The Kapil Sharma Show Updates - ನವದೆಹಲಿ: ಕಿರು ತೆರೆಯ ಅತ್ಯಂತ ಜನಪ್ರೀಯ ಕಾಮಿಡಿ ಷೋ 'ದಿ ಕಪಿಲ್ ಶರ್ಮಾ ಷೋ ' ಕಳೆದ ಹಲವಾರು ವರ್ಷಗಳಿಂದ ಪ್ರೇಕ್ಷಕರ ಹೃದಯದಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ. ಅನೇಕ ವಿವಾದಗಳ ನಡುವೆ ಅನೇಕ ಜನರು ಈ ಷೋ ಕೈಬಿಟ್ಟರು, ಆದರೆ ಮತ್ತೆ ಮತ್ತೆ ಈ ಷೋ ಜನರನ್ನು ತನ್ನತ್ತ ಸೆಳೆಯುವಲ್ಲಿ  ಮತ್ತು ನಗುವಿನ ಪ್ರತಿಧ್ವನಿಯನ್ನು ಮರಳಿ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಇದೀಗ 'ದಿ ಕಪಿಲ್ ಶರ್ಮಾ ಷೋ ' ಅಭಿಮಾನಿಗಳ ಪಾಲಿಗೆ ನಿರಾಶೆಯ ಸುದ್ದಿಯೊಂದು ಪ್ರಕಟಗೊಂಡಿದೆ. ಈ ಷೋ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ.


COMMERCIAL BREAK
SCROLL TO CONTINUE READING

ಬಹುತೇಕ ಎಲ್ಲಾ ತಾರೆಯರನ್ನು ಅಭಿಮಾನಿಗಳು ಈ ಷೋ ಮೂಲಕ ತುಂಬಾ ಹತ್ತಿರದಿಂದ ನೋಡಿದ್ದಾರೆ. ಹೌದು, ಈ ಷೋ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಯರನ್ನು ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ನೀಡಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಪ್ರತಿ ಮನೆಯಲ್ಲೂ ನಗುವನ್ನು ತುಂಬುವ ಈ ಷೋ, ಶೀಘ್ರದಲ್ಲಿಯೇ ತನ್ನ ಪ್ರದರ್ಶನ ಸ್ಥಗಿತಗೊಳಿಸಲಿದೆ.


ಇದನ್ನು ಓದಿ- Viral Video: ಕಪಿಲ್ ಶರ್ಮಾ ಶೋ ಖ್ಯಾತಿಯ ಚಿಂಕಿ-ಮಿಂಕಿಯಿಂದ 'ನಾಚ್ ಮೇರಿ ರಾಣಿ' ಹಾಡಿನ ಡಾನ್ಸ್


ಕಾರಣವೇನು?
Tellychakkar ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಶೀಘ್ರದಲ್ಲಿಯೇ ಈ ಷೋ ಆಫ್ ಏರ್ ಆಗಲಿದೆ. ವರದಿಗಳ ಪ್ರಕಾರ ಈ ಷೋ ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಪ್ರಕಟವಾಗಲಿದೆ ಎಂದೂ ಕೂಡ ವರದಿಯಲ್ಲಿ ಹೇಳಲಾಗಿದೆ. ಕಪಿಲ್ (Kapil Sharma) ಈ ಷೋ ಮೂಲಕ ಹೊಸದಾಗಿ ಕಿರುತೆರೆ ಮೇಲೆ ಎಂಟ್ರಿ ನೀಡಲು ಪ್ಲಾನಿಂಗ್ ಕೂಡ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಭಿಮಾನಿಗಳು ನಿರಾಶರಾಗುವ ಅವಶ್ಯಕತೆ ಇಲ್ಲ ಮತ್ತು ಕಪಿಲ್ ಶರ್ಮಾ ಮತ್ತೆ ತಮ್ಮ ಅಭಿಮಾನಿಗಳನ್ನು ರಂಜಿಸಲು ಮತ್ತು ಅವರ ಮನೆಗಳನ್ನು ನಗುವಿನಿಂದ ತುಂಬಲು ಮತ್ತೆ ಕಿರುತೆರೆಯ ಮೇಲೆ ಪ್ರಕಟವಾಗಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.


ಇದನ್ನು ಓದಿ-ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಮಿಂಚಿದ ಕಿಚ್ಚ ಸುದೀಪ್


ಲೈವ್ ಆಡಿಯನ್ಸ್ ಗಳ ಕೊರತೆ
ಕೊರೊನಾ ವೈರಸ್ ಹಿನ್ನೆಲೆ ಪ್ರಾರಂಭಗೊಂಡ  ಈ ಷೋ ಸದ್ಯಕ್ಕೆ ಲೈವ್ ಆಡಿಯನ್ಸ್ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಕಪಿಲ್ ತಮ್ಮ ಷೋಗೆ ಹೊಸ ರಂಗು ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಚಾನೆಲ್ ಆಗಲಿ ಅಥವಾ ಕಪಿಲ್ ಅವರಿಂದಾಗಲಿ ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.


ಇದನ್ನು ಓದಿ- Kapil Sharma ಐಷಾರಾಮಿ ವ್ಯಾನಿಟಿ ವ್ಯಾನ್‌ನ ಫೋಟೋಸ್ ವೈರಲ್


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.