ʼದಿ ಕಾಶ್ಮೀರ್ ಫೈಲ್ಸ್ʼಗೆ ಮೋದಿ ಮೆಚ್ಚುಗೆ... ಪ್ರಚಾರವಿಲ್ಲದೆ ಫುಲ್ ಸೌಂಡ್!
ಎಲ್ಲೆಡೆ ಇದೀಗ ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದ ಸದ್ದು ತುಂಬಾ ಜೋರಾಗಿದೆ.ಪ್ರಧಾನಿ ಮೋದಿ ಕೂಡ ಇದೀಗ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ಇದರಿಂದ ಚಿತ್ರತಂಡಕ್ಕೆ ಒಂದು ಹೊಸ ಹುಮ್ಮಸ್ಸು ಸಿಕ್ಕಂತಾಗಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸತ್ಯ ಘಟನೆ ಆಧರಿಸಿದ ಸಿನಿಮಾ ಆಗಿದೆ. ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮಾರ್ಚ್ ೧೧ರಂದು ಬಿಡುಗಡೆಯಾದ ಈ ಸಿನಿಮಾಕ್ಕೆ ಚಿತ್ರತಂಡ ಹೆಚ್ಚಿನ ಪ್ರಚಾರ ನೀಡಿರಲಿಲ್ಲ. ಆದ್ರೀಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.
ಇದನ್ನೂ ಓದಿ: Puneeth Rajkumar : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್
1990 ರ ಕಾಶ್ಮೀರದ ಘಟನೆಗಳು, ಕಾಶ್ಮೀರಿ ಪಂಡಿತರ ನರಮೇಧದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ.ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.ಕಾಶ್ಮೀರ ದಂಗೆಯ ಸಮಯದಲ್ಲಿ ಕಾಶ್ಮೀರಿ ಹಿಂದೂಗಳ ವಲಸೆ ಕುರಿತ ವಿಷಯ ಇಟ್ಟುಕೊಂಡು, ಅದನ್ನು ಒಂದು ಸಿನಿಮಾವಾಗಿ ಸಮರ್ಥವಾಗಿ ಕಟ್ಟಿಕೊಟ್ಟಿರುವ ಚಿತ್ರತಂಡಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಿರ್ಮಾಪಕ ಅಭಿಷೇಕ್ ಜೊತೆಗೆ ಚಿತ್ರದ ನಟಿ ಪಲ್ಲವಿ ಜೋಷಿ ಅವರು ಪ್ರಧಾನಿ ಮೋದಿ (PM Modi) ಅವರನ್ನು ಭೇಟಿ ಮಾಡಿದ್ದಾರೆ. ಚಿತ್ರಕ್ಕೆ ಪ್ರಧಾನಿಯಿಂದ ಶಹಬ್ಬಾಸ್‌ಗಿರಿ ಸಿಕ್ಕಿರುವುದು ಚಿತ್ರ ತಂಡಕ್ಕೆ ಮತ್ತಷ್ಟು ಬಲ ತುಂಬಿದಂತೆ ಆಗಿದೆ.
ಧರೆಗಿಳಿದ ಸಿನಿಮಾ ಸರ್ಗಲೋಕ..! ಎಲ್ಲೆಲ್ಲೂ ಕಾಣುತ್ತಿದ್ದಾರೆ ಡಾ. ಪುನೀತ್ ರಾಜ್‌ಕುಮಾರ್..!
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡದವರು ಪೋಸ್ಟ್ ಮಾಡಿಕೊಂಡಿದ್ದಾರೆ.ಇದರಿಂದ ಚಿತ್ರಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಂತಾಗಿದೆ.ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ಮಾಪಕ ಅಭಿಷೇಕ್ ಅಗರ್ವಾಲ್,ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಅವರು ಮೋದಿ ಜೊತೆ ಕ್ಲಿಕ್ಕಿಸಿಕೊಂಡ ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.ದೇಶಾದ್ಯಂತ ಈ ಸಿನಿಮಾ ಮೊದಲ ದಿನ 630+ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡಿದೆ.ಬರೋಬ್ಬರಿ 3.55 ಕೋಟಿ ರೂ.ಮೊದಲ ದಿನ ಗಳಿಕೆ ಮಾಡಿದೆ.ಮೊದಲ ದಿನದ ಗಳಿಗೆಗಿಂತ ಎರಡನೇ ದಿನದ ಗಳಿಕೆ ಹೆಚ್ಚಿದೆ ಎನ್ನಲಾಗಿದೆ. ಶನಿವಾರದ ಬಹುತೇಕ ಎಲ್ಲ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ.ಇನ್ನು ಈ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅವರು ʼದಿ ಕಾಶ್ಮೀರ್ ಫೈಲ್ಸ್ʼ ನೋಡ್ತಾರಾ ಅನ್ನೋ ಪ್ರಶ್ನೆ ಕೂಡ ಈಗ ಹಲವರಲ್ಲಿ ಮೂಡಿದೆ.
ಚಿತ್ರತಂಡ ಹೆಚ್ಚು ಪ್ರಚಾರ ಮಾಡದೇ ಹೋದ್ರೂ ಇದೀಗ ʼದಿ ಕಾಶ್ಮೀರಿ ಫೈಲ್ಸ್ʼ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುವ ಮೂಲಕ ಯಶಸ್ಸು ಕಂಡಿದೆ. ನೈಜ ಘಟನೆಯಾಧರಿತ ಈ ಸಿನಿಮಾವನ್ನ ಪ್ರತಿಯೊಬ್ಬರೂ ನೋಡಿದ್ರೆ ಒಂದು ಉತ್ತಮವಾದ ಮೇಸೆಜ್ ತಗೊಂಡು ಹೊರಬರಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.