Tollywood News: ಟಾಲಿವುಡ್‌ನ ಸ್ಟಾರ್‌ ನಟ...ಯುವ ಸಾಮ್ರಾಟ್‌ ನಾಗಚೈತನ್ಯ ಅವರ 23ನೇ ಸಿನಿಮಾದಲ್ಲಿ ಸಾಯಿಪಲ್ಲವಿ ನಟಿಸಲಿದ್ದಾರೆ. ಲವ್‌ ಸ್ಟೋರಿ ಸಿನಿಮಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದ ಈ ಜೋಡಿ ಇದೀಗ ಮತ್ತೆ ಒಂದಾಗುತ್ತಿರುವುದು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. 


COMMERCIAL BREAK
SCROLL TO CONTINUE READING

ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಚಂದು ಮೊಂಡೇಟಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾ ಗೆ ಸದ್ಯ NC23 ಎಂಬ ತಾತ್ಕಾಲಿಕ ಹೆಸರನ್ನು ಇಡಲಾಗಿದೆ. ಇನ್ನು ಈ ಸಿನಿಮಾವನ್ನು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಪ್ರಸ್ತುತಪಡಿಸಲಿದ್ದು,  ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣ ಈ ಚಿತ್ರ ನಿರ್ಮಾಣವಾಗಲಿದೆ. 


ಇದನ್ನೂ ಓದಿ-ಶ್ರೀಲೀಲಾ ಜಾಗಕ್ಕೆ ರಶ್ಮಿಕಾ...! ನ್ಯಾಷನಲ್‌ ಕ್ರಶ್‌ ಕಮ್‌ ಬ್ಯಾಕ್‌


ಮೀನುಗಾರರ ಸಮುದಾಯದಲ್ಲಿ ನಡೆದ ನಿಜ ಘಟನೆಯನ್ನಾಧರಿಸಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಇತ್ತೀಚೆಗೆ ನಾಗಚೈತನ್ಯ ಹಾಗೂ ನಿರ್ದೇಶಕ ಚಂದು ಮೊಂಡೇಟಿ ಆಂಧ್ರಪ್ರದೇಶದ ಶ್ರೀಕಾಕುಳಂಗೆದಲ್ಲಿ ಮೀನುಗಾರರ ಕುಟುಂಬಕ್ಕೆ ಭೇಟಿ ನೀಡಿದ್ದರು. 


ಸದ್ಯ ಈ NC23 ಚಿತ್ರ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರತಂಡ ಶೂಟಿಂಗ್ ಶುರುವಾಲಿದೆ ಎನ್ನಲಾಗುತ್ತಿದೆ. ಇನ್ನು ಲವ್‌ ಸ್ಟೋರಿ ಸಿನಿಮಾದದಲ್ಲಿ ಸಾಯಿಪಲ್ಲವಿ ಹಾಗೂ ನಾಗಚೈತನ್ಯ ಜೋಡಿಯ ಕೆಮಿಸ್ಟ್ರೀಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಈ ಕ್ಯೂಟ್‌ ಜೋಡಿ ಮತ್ತೆ ತೆರೆ ಹಂಚಿಕೊಳ್ಳುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಇನ್ನು ಈ ಸಿನಿಮಾದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಕುರಿತು ಶೀಘ್ರದಲ್ಲಿಯೇ ಚಿತ್ರತಂಡ ತಿಳಿಸಲಿದೆ. 


ಇದನ್ನೂ ಓದಿ-ಗೆಳೆಯ ವಿಜಯ್‌ ಆಂಟೋನಿ ಪುತ್ರಿ ನೆನೆದು ಕಣ್ಣೀರಿಟ್ಟ ನಟ ವಿಶಾಲ್‌..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.