ಡೊಳ್ಳು ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಿನಿಮಾ, ಸುಮಾರು ದಿನಗಳಿಂದ ಪೋಸ್ಟರ್‌, ಟ್ರೇಲರ್‌ ಹಾಗೂ ಹಾಡಿನ ಮೂಲಕ ಗಮನ ಸೆಳೆದಿದ್ದ ಡೊಳ್ಳು ಇದೀಗ ತೆರೆಮೇಲೆ ಪ್ರೇಕ್ಷಕರ ಮನಗೆಲ್ಲಲು ತಯಾರಾಗಿದೆ. ಹೌದು ಪವನ್ ಒಡೆಯರ್ ನಿರ್ಮಾಣದ ಈ ಸಿನಿಮಾ ಇದೇ ಆಗಸ್ಟ್‌ 26ಕ್ಕೆ ಬಿಡುಗಡೆಗೊಂಡು ಡೊಳ್ಳಿನ ನಾದ ಶುರುಮಾಡಲಿದೆ. ಡೊಳ್ಳು ಕಲೆಯನ್ನು ಯಾರು ಬೇಕಾದರೂ ಕಲಿಯಬಹುದು. ಆದರೆ ಮನಸ್ಸಿನಲ್ಲಿ ಇಳಿಸಿಕೊಳ್ಳಲು ಆಗುವುದಿಲ್ಲ ಎಂಬ ಅರ್ಥಪೂರ್ಣವಾದ ಮಾತಿನಿಂದ ಶುರುವಾಗುವ ಟ್ರೇಲರ್ ನಲ್ಲಿ ಜನಪದ ಕಲೆ ಡೊಳ್ಳು ಪ್ರಾಮುಖ್ಯತೆ ಜೊತೆಗೆ ಪ್ರೀತಿ, ಕಣ್ಣೀರು, ಕೋಪ ಎಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bigg Boss Kannada OTT : ‌ಬಿಗ್‌ ಬಾಸ್ ಮನೆಯಿಂದ‌ ಒಂದೇ ದಿನ ಇಬ್ಬರು ಸ್ಪರ್ಧಿಗಳು ಔಟ್!


ಈಗಾಗಲೇ ಅನೇಕ ತಾರೆಯರು ಶುಭಹಾರೈಸಿ ಸಿನಿಮಾಗೆ ಸಾಥ್‌ ಕೊಟ್ಟಿದ್ದಾರೆ. ನಮ್ಮ ಮಣ್ಣಿನ ಸೊಗಡಿನ ಸಿನಿಮಾ. ಕಲೆ ಮತ್ತು ಕಮರ್ಷಿಯಲ್ ನಡುವಿನ ಮಧ್ಯೆ ತೆಗೆದಿರುವ ಸಿನಿಮಾ. ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಜನಪದ ಕಲೆ ಡೊಳ್ಳಿನ ಮಹತ್ವವನ್ನು ಕಟ್ಟಿಕೊಡಲಾಗಿದ್ದು, ಕಾರ್ತಿಕ್ ಮಹೇಶ್ ನಾಯಕನಾಗಿ ಅಮೋಘವಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ನಿಧಿ ಹೆಗ್ಡೆ ಕಾಣಿಸಿಕೊಂಡಿದ್ದಾರೆ. 


ಪೋಷಕ ಪಾತ್ರದಲ್ಲಿ ಚಂದ್ರ ಮಯೂರ್‌ ಹಾಗೂ  ಬಾಬು ಹಿರಣಯ್ಯ, , ಶರತ್ ಮುಂತಾದ ಕಲಾ ಬಳಗ ಚಿತ್ರದಲ್ಲಿದ್ದು, ಶ್ರೀನಿಧಿ ಸಂಭಾಷಣೆ-ಚಿತ್ರಕಥೆ, ಅನಂತ್ ಸಂಗೀತ, ಅಭಿಲಾಸ್ ಕಲಾಥಿ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿದೆ. ಹಲವು ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಡೊಳ್ಳು ಸಿನಿಮಾ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಭಾಜನವಾಗಿದೆ. ಪವನ್ ಒಡೆಯರ್ ಮೂವೀಸ್ ಬ್ಯಾನರ್ ನಡಿ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಬಿಡುಗಡೆಯ ನಂತರ ಪ್ರೇಕ್ಷಕಪ್ರಭುವಿನ ರಿಯಾಕ್ಷನ್‌ ಹೇಗಿರುತ್ತೆ ಕಾದು ನೋಡಬೇಕಿದೆ. 


ಇದನ್ನೂ ಓದಿ: Rajinikanth as Governor: ರಾಜ್ಯಪಾಲರಾಗಿ ನೇಮಕವಾಗಲಿದ್ದಾರಾ ರಜನಿಕಾಂತ್‌?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.