Golden Star Ganesh: ಹುಟ್ಟು ಹಬ್ಬ ದಿನದಂದು ʼಪೊರಕೆ,ಬಕೆಟ್ʼ ಹಿಡಿದು ಹೊರಟಿರುವ ಗೋಲ್ಡನ್ ಸ್ಟಾರ್ ಗಣೇಶ್....!
Golden Star Ganesh Birthday: ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ಸ್ಯಾಂಡಲ್ವುಡ್ ಗಣಿಗೆ ಸಿನಿ ಗಣ್ಯರು, ಅಭಿಮಾನಿಗಳು ಶುಭಾಶಯ ಭರಪೂರ ಹರಿಸಿದ್ದಾರೆ.
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ಸ್ಯಾಂಡಲ್ವುಡ್ ಗಣಿಗೆ ಸಿನಿ ಗಣ್ಯರು, ಅಭಿಮಾನಿಗಳು ಶುಭಾಶಯ ಭರಪೂರ ಹರಿಸಿದ್ದಾರೆ. ಇದೀಗ ಹುಟ್ಟು ಹಬ್ಬದ ಪ್ರಯುಕ್ತ 41 ನೇ ಚಿತ್ರ ‘ಕೃಷ್ಣಂ ಪ್ರಣಯ ಸಖಿ’ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಯೋಗರಾಜ್ ಭಟ್ ನಿರ್ದೇಶನದ ʼಮುಂಗಾರು ಮಳೆ, ಸಿನಿಮಾ ಮೂಲಕ ಹೀರೋ ಆಗಿ ಮೊದಲು ಕಾಣಿಸಿಕೊಂಡರು. ಬಳಿಕ ಹಲವು ಚಿತ್ರಗಳಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಮನ ಗೆದ್ದರು.
ಇವರ ಅನೇಕ ಸಿನಿಮಾಗಳು ಪ್ರೇಮಿಗಳ ಸಂಕಟಪರದಾಟ, ಪ್ರೀತಿ ಆಧಾರಿತ ಕಥೆಗಳಾಗಿವೆ. ಹೀಗಾಗಿ ಗಣಿ ಸಿನಿಮಾವನ್ನು ಪ್ರೀತಿಸುವ ವರ್ಗವೇ ಇದೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಇದೇ ತಿಂಗಳಿನಲ್ಲಿ ತೆರೆಗೆ ಅದ್ದೂರಿ ಎಂಟ್ರಿ..!
ಇನ್ನು ಈಗ ತಾನೇ ಪೋಸ್ಟರ್ ರೀಲಿಸ್ ಆಗಿರುವ ತ್ರಿಶೂಲ್ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ನಿರ್ಮಾಣದ, ‘ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’ ಪೋಷ್ಟರ್ ಕಂಡು ಅಭಿಮಾನಿಗಳಲ್ಲಿ ಈ ಸಿನಿಮಾ ಮೇಲೆನ ನಿರೀಕ್ಷೆ ಹೆಚ್ಚಾಗಿದೆ.
‘ಕೃಷ್ಣಂ ಪ್ರಣಯ ಸಖಿ’ ಪೋಸ್ಟರ್ ರಲ್ಲಿ ನಟ ಗಣೇಶ್ ಕೈಯಲ್ಲಿ ಪೊರಕೆ, ನೆಲ ಒರೆಸುವ ಸ್ಟಿಕ್ ಹಾಗೂ ಬಕೆಟ್ ಹಿಡಿದಿರುವುದು ನೋಡಿದರೇ ಇದು ಯಾವುದೋ ಪಕ್ಕಾ ಕಾಮಿಡಿ ಸಿನಿಮಾ ಆಗಿರಲಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: Viral Video: 73 ವರ್ಷದ ವೃದ್ಧನ ಮಧುರ ಕಂಠಕ್ಕೆ ಖ್ಯಾತ ಬಾಲಿವುಡ್ ಗಾಯಕ ಶಾನ್ ಪಾಪಾ ಫಿದಾ; ವಿಡಿಯೋ ವೈರಲ್!
ಸದ್ಯ ಈ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಸಿನಿಮಾದಲ್ಲಿ ಸಾಧುಕೋಕಿಲ, ಶಶಿಕುಮಾರ್, ರಂಗಾಯಣ ರಘು, ಸುಧಾರಾಣಿ, ಶ್ರುತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.