Baby Movie Director: ಈ ವರ್ಷ ಸಂಚಲನ ಮೂಡಿಸಿದ ಕಿರು ಚಿತ್ರ ಬೇಬಿ. ಸಾಯಿ ರಾಜೇಶ್ ನಿರ್ದೇಶನದ ಈ ಚಿತ್ರದಲ್ಲಿ ಆನಂದ್ ದೇವರಕೊಂಡ, ವಿರಾಜ್ ಮತ್ತು ವೈಷ್ಣವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಸುಮಾರು 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಸಾಯಿ ರಾಜೇಶ್‌ಗೆ ನಿರ್ಮಾಪಕ ಎಸ್‌ಕೆಎನ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಹಾಗಾದರೆ ಆ ಕಾರಿನ ಬೆಲೆ ಎಷ್ಟೀರಬಹುದು ಅಂತೀರಾ...ಇಲ್ಲಿದೆ ಉತ್ತರ. 


COMMERCIAL BREAK
SCROLL TO CONTINUE READING

ಬೇಬಿ ಮೂವಿ ಜುಲೈ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅದರಲ್ಲೂ ಯುವಕರಿಗೆ  ಕನೆಕ್ಟ್ ಆಗೋ ಈ ಸಿನಿಮಾದಲ್ಲಿ ವಿಜಯ್ ಬಲ್ಗಾನಿನ್ ಅವರ ಸಂಗೀತವೇ ಹೈಲೈಟ್. 


ಇದನ್ನೂ ಓದಿ-ಬಲೂಚಿಸ್ತಾನದ ಮಸೀದಿ ಬಳಿ ಆತ್ಮಾಹುತಿ ಬಾಂಬ್ ಸ್ಫೋಟ: 52 ಜನ ಸಾವು, 50 ಮಂದಿಗೆ ಗಾಯ


ಬೇಬಿ ಸಿನಿಮಾವನ್ನು ಕಡಿಮೆ ಬಜೆಟ್‌ನಲ್ಲಿ ಖ್ಯಾತ ನಿರ್ಮಾಪಕ ಎಸ್‌ಕೆಎನ್ ನಿರ್ಮಿಸಿದ್ದು, ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರ ಉತ್ತಮ ಟಾಕ್ ಪಡೆದುಕೊಂಡಿತ್ತು. ಜೊತೆಗೆ ಈ ಬೇಬಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸೌಂಡ್‌ ಮಾಡಿ, ವಿಶ್ವಾದ್ಯಂತ ರೂ.100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಅಲ್ಲದೇ ಚಿರಂಜೀವಿ, ಅಲ್ಲು ಅರ್ಜುನ್ ಮುಂತಾದ ಸ್ಟಾರ್ ಗಳ ಮೆಚ್ಚುಗೆಯನ್ನೂ ಈ ಸಿನಿಮಾ ಪಡೆದುಕೊಂಡಿದೆ. 


ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿರುವ ಭರವಸೆಯ ನಿರ್ದೇಶಕ ಸಾಯಿ ರಾಜೇಶ್ ಬೇಬಿ ಸಿನಿಮಾವನ್ನು ಅದ್ಬುತವಾಗಿ ನಿರ್ದೇಶಿಸಿದ್ದಾರೆ.  ಇದೀಗ ಈ ಸಿನಿಮಾದ ನಿರ್ಮಾಪಕ ಎಸ್ ಕೆಎನ್ ಅವರು ನಿರ್ದೇಶಕ ಸಾಯಿ ರಾಜೇಶ್ ಅವರಿಗೆ ಬೆಂಜ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.


ಈ ಉಡುಗೊರೆ ನೀಡಿದ ಕಾರಿನ ಕೀಯನ್ನು ಶೋ ರೂಂನಲ್ಲಿ ನಿರ್ದೇಶಕರಿಗೆ ನೀಡಲಾಯಿತು. ಸದ್ಯ ಈ ಫೋಟೋ ವೈರಲ್ ಆಗಿದ್ದು, ಆ ಕಾರಿನ ಬೆಲೆ ಎಷ್ಟೀರಬಹುದು ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಆ ಬೆಂಜ್ ಕಾರಿನ ಮೌಲ್ಯ ಸುಮಾರು 45 ಲಕ್ಷದಿಂದ ರೂ. 50 ಲಕ್ಷ ಆಗಿದೆ. 


ಇದನ್ನೂ ಓದಿ-ನಮ್ಮ ಮನೆ ವಾಚ್‌ಮ್ಯಾನ್‌ ಪಕ್ಕದ ಮನೆಗೆ ನೀರು ಬಿಡ್ತಿದ್ದಾನೆ : ನಟ ಉಪೇಂದ್ರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.