ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕೆ ಖ್ಯಾತ ನಟಿಯ ಖಾಸಗಿ ವಿಡಿಯೋ ವೈರಲ್ ಮಾಡಿದ ನಿರ್ಮಾಪಕ..!
Actress Video : ಲೀವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಖ್ಯಾತ ನಟಿ, ನಿರ್ಮಾಪಕರ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸದ್ಯ ನಟಿಯ ಖಾಸಗಿ ವಿಡಿಯೋಗಳು ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿವೆ. ಈ ವಿಚಾರವಾಗಿ ನಿರ್ಮಾಪಕನ ವಿರುದ್ಧ ನಟಿ ದೂರು ದಾಖಲಿಸಿದ್ದಾರೆ.
Actress Video Leaked : ತನ್ನ ಸಿನಿಮಾ ಒಪ್ಪಿಕೊಂಡಿಲ್ಲ, ಬೇರೆ ನಿರ್ಮಾಪಕರ ಜತೆ ಸಿನಿಮಾ ಮಾಡಲು ಒಪ್ಪಿದ್ದಕ್ಕೆ ನಿರ್ಮಾಪಕ ದಯಾನಿಧಿ ದಹಿಮಾ ನಟಿಯ ಖಾಸಗಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಈ ಸಂಬಂಧ ನಟಿಯಿಂದ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಕುರಿತು ಒಡಿಶಾದ ಭುವನೇಶ್ವರದ ಲಕ್ಷ್ಮೀ ಸಾಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾನು ಕಳೆದ ಕೆಲ ವರ್ಷಗಳಿಂದ ನಿರ್ಮಾಪಕರ ಜತೆಗೆ ಉತ್ತಮ ಬಾಂಧವ್ಯದಿಂದ ಇದ್ದೆ. ಅದನ್ನೇ ಅವರು ಈ ರೀತಿ ಮೋಸಕ್ಕೆ ಬಳಸಿಕೊಂಡಿದ್ದಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
"ಆರಂಭದಲ್ಲಿ ಅವನು ನನ್ನ ಜೊತೆ ಇದ್ದಾಗ ಕ್ಲೋಸ್ ಫೋಟೋ ತೆಗೆದುಕೊಂಡು ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದ. ನಾನು ಆಗ ಏನೂ ಹೇಳುತ್ತಿರಲಿಲ್ಲ..ಆತ ಉದ್ದೇಶಪೂರ್ವಕವಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾನೆ ಎಂದು ನನಗೆ ತಿಳಿದಿರಲಿಲ್ಲ. ಅವನನ್ನು ನಾನು ತುಂಬಾ ನಂಬಿದ್ದೆ. ಸಿನಿಮಾದಲೂ ಅವರ ಜೊತೆ ಕೆಲಸ ಮಾಡಿದ್ದೆ...ಹೀಗೆ ಈ ನಡುವೆ ಚಿತ್ರದ ಸಂಭಾವನೆ ಕೇಳಿದರೆ ಕೊಟ್ಟಿರಲಿಲ್ಲ. ಆಗಿನಿಂದ ನಮ್ಮಿಬ್ಬರ ಸಂಭಂದದಲ್ಲಿ ಬಿರುಕು ಉಂಟಾಗಿತ್ತು" ಎಂದಿದ್ದಾರೆ.
ಇದನ್ನೂ ಓದಿ-ಬಿಡುಗಡೆಯಾಯಿತು ನವೀನ್ ಶಂಕರ್ ಅಭಿನಯದ "ಕ್ಷೇತ್ರಪತಿ" ಚಿತ್ರದ ಹೊಸ ಪೋಸ್ಟರ್
"ಬಳಿಕ ಆತ ನನ್ನನ್ನು ನಿಂದಿಸಲು ಆರಂಭಿಸಿದ..ಅದರೆ ಈಗ ನನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾನೆ" ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣ ದಾಖಲೆಯ ಆಧಾರದ ಮೇಲೆ ನಿರ್ಮಾಪಕ ದಯಾನಿಧಿ ದಹಿಮಾ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಪ್ರಕರಣದ ಇನ್ನೊಂದು ಮಗ್ಗಲು ನೋಡುವುದಾದರೆ, ನಿರ್ಮಾಪಕ ಹಾಗೂ ನಟಿ ಕೆಲವು ವರ್ಷಗಳಿಂದ ಒಂದೇ ಮನೆಯಲ್ಲಿಯೇ ವಾಸವಾಗಿದ್ದರು. ಹೀಗಿರುವಾಗಲೇ ನಟಿ ಬೇರೆ ನಿರ್ಮಾಪಕರ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದೇ ಈ ಪ್ರಕರಣಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ-ಇನ್ಮುಂದೆ ಥಿಯೇಟರ್‌ನಲ್ಲಿ ಸಿನಿಮಾ ಪೈರಸಿ ಮಾಡಿದ್ರೆ ಜೈಲು...ಕೋಟ್ಯಾಂತರ ರೂಪಾಯಿ ದಂಡ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.