ಕನ್ನಡಿಗರಿಗೆ ನೂರಾರು ಸಿನಿಮಾಗಳನ್ನು ಕಾಣಿಕೆಯಾಗಿ ನೀಡಿ, ಕೋಟಿ ಕೋಟಿ ಅಭಿಮಾನಿಗಳ ಮನರಂಜಿಸಿ, ಕನ್ನಡಿಗರ ಹೃದಯವನ್ನು ಗೆದ್ದಿರುವ ದೊಡ್ಮನೆಯ ಹಿರಿಯ ಪುತ್ರ ಹಾಗೂ ಕನ್ನಡಿಗರ ಪ್ರೀತಿಯ ನಟ ಶಿವಣ್ಣ ಅಭಿನಯದ 'ಬೈರಾಗಿ' ಸಿನಿಮಾ ಅದ್ಧೂರಿಯಾಗಿ ರಿಲೀಸ್‌ ಆಗಿತ್ತು. 'ಬೈರಾಗಿ' ಎಲ್ಲೆಲ್ಲೂ ದೊಡ್ಡ ಸದ್ದು ಮಾಡುವ ಜೊತೆಗೆ, ಬಾಕ್ಸ್ ಆಫಿಸ್ ಅಲ್ಲೂ ಸದ್ದು ಮಾಡಿತ್ತು. ಇದೀಗ 'ಬೈರಾಗಿ' ಸಿನಿಮಾ ಸಂಬಂಧ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.


COMMERCIAL BREAK
SCROLL TO CONTINUE READING

ಡಾ.ಶಿವಣ್ಣ ಹಾಗೂ ಧನಂಜಯ್ ಕಾಂಬಿನೇಷನ್ ಜೊತೆಗೆ ವಿಜಯ್ ಮಿಲ್ಟನ್ ನಿರ್ದೇಶನದ ಈ ಬ್ಲಾಕ್ ಬಸ್ಟರ್ ಚಿತ್ರ ಆಕ್ಷನ್‌ ಮತ್ತು ಥ್ರಿಲಿಂಗ್ ಆಗಿತ್ತು. ಕರುನಾಡಿನಾದ್ಯಂದ ನೂರಾರು ಥಿಯೇಟರ್ ಗಳಲ್ಲಿ 'ಬೈರಾಗಿ' ರಿಲೀಸ್ ಆಗಿತ್ತು. ಇದೀಗ ಈ ಬ್ಲಾಕ್ ಬಸ್ಟರ್ ಸಿನಿಮಾ ಒಟಿಟಿ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ.


ಇದನ್ನೂ ಓದಿ : Yuzvendra Chahal-Dhanashree : ಧನಶ್ರೀ, ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಕು..!


ಲೆಜೆಂಡ್ ಜೋಡಿ: 


'ಟಗರು' ಸಿನಿಮಾ ನಂತರ ಡಾ.ಶಿವರಾಜ್‌ಕುಮಾರ್‌ & ಡಾಲಿ ಧನಂಜಯ್‌ ಜೋಡಿ ದೇಶಾದ್ಯಂತ ಕಮಾಲ್‌ ಮಾಡಿತ್ತು. 'ಟಗರು' ನೋಡಿ ಬಾಲಿವುಡ್‌ ಮಂದಿ ಕೂಡ ಬೆರಗಾಗಿದ್ದರು. ಅದರಲ್ಲೂ ಶಿವಣ್ಣ ಮತ್ತು ಡಾಲಿ ಜೋಡಿ ಸಖತ್‌ ಫೇಮಸ್‌ ಆಗಿಬಿಟ್ಟಿತ್ತು. ಹೀಗಾಗಿ ಇಬ್ಬರ ಕಾಂಬಿನೇಷನ್‌ನ ಹೊಸ ಸಿನಿಮಾಗಾಗಿ ಅಭಿಮಾನಿಗಳು ಹಲವು ವರ್ಷಗಳಿಂದ ಕಾಯುತ್ತಿದ್ದರು. ಈ ಕನಸು 'ಬೈರಾಗಿ' ಮೂಲಕ ನನಸಾಗಿದೆ. ಮತ್ತೊಮ್ಮೆ ಶಿವಣ್ಣ ಹಾಗೂ ಡಾಲಿ ಧನಂಜಯ್‌ ಜೋಡಿ ಮೋಡಿ ಮಾಡಿದೆ.ಇದೀಗ ವೂಟ್ ಸೆಲೆಕ್ಟ್ ಮೂಲಕ 'ಬೈರಾಗಿ' ಪ್ರತಿಯೊಬ್ಬ ಕನ್ನಡಿಗನ ಮನೆಗೂ ತಲುಪುತ್ತಿದೆ.


ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುವ, ಮೌಲ್ಯಗಳನ್ನು ಉನ್ನತವಾಗಿ ಗೌರವಿಸುವ ಕಲಾವಿದ ಹುಲಿ ಶಿವನ ಕಥೆ ಇದಾಗಿದೆ. ಆಕ್ಷನ್ ಮತ್ತು ಭಾವನಾತ್ಮಕ ದೃಶ್ಯಗಳ ಸಮ್ಮಿಲನವಾಗಿ ಬೈರಾಗಿ ಸಂಪೂರ್ಣವಾಗಿ ಮಾಸ್ ಎಂಟರ್‌ಟೈನರ್ ಆಗಿದೆ. ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಬೈರಾಗಿ ಚಿತ್ರ ಆಗಸ್ಟ್ 19ರಿಂದ Voot Select ನಲ್ಲಿ ಮಾತ್ರ ಸ್ಟ್ರೀಮಿಂಗ್ ಆಗಲಿದೆ.


ಇದನ್ನೂ ಓದಿ : IND vs ZIM ಪಂದ್ಯದ Playing 11 ನಿಂದ ಶಾರ್ದುಲ್ ಠಾಕೂರ್ ಔಟ್!


ಡೈರೆಕ್ಟರ್ ವಿಜಯ್ ಮಿಲ್ಟನ್ ಅಚ್ಚುಕಟ್ಟಾಗಿ 'ಬೈರಾಗಿ' ನಿರ್ದೇಶನ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ಇಂಪಾಗಿದೆ. ಇನ್ನು ನಟ ಶಿವಣ್ಣನ ಎದುರು ಮತ್ತೊಮ್ಮೆ ನೆಗೆಟಿವ್ ಶೇಡ್‌ನಲ್ಲಿ ಡಾಲಿ ಧನಂಜಯ್‌ ಎಂಟ್ರಿಯನ್ನ ಕೊಟ್ಟರೂ ರೋಚಕ ತಿರುವು ಈ ಸಿನಿಮಾಗೆ ಇದೆ. ಇವರಿಗೆ ಪೃಥ್ವಿ ಅಂಬರ್, ಅಂಜಲಿ ಸೇರಿ ದೊಡ್ಡ ತಾರಾ ಬಳಗವೇ ಸಾಥ್‌ ನೀಡಿದೆ. ಒಟ್ಟಾರೆ ಈ ಸಿನಿಮಾ ಸ್ಯಾಂಡಲ್ ವುಡ್ ಅಭಿಮಾನಿ ಬಳಗಕ್ಕೆ ದೊಡ್ಡ ಗಿಫ್ಟ್ ಅಂದರೆ ತಪ್ಪಾಗಲಾರದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.