Nagma Marriage: ಬಹುಭಾಷಾ ನಟಿ ನಗ್ಮಾ 49 ವರ್ಷ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಹೀಗೆ ಹಲವು ಭಾಷೆಗಳಲ್ಲಿ ನಟಿ ನಗ್ಮಾ ನಟಿಸಿದ್ದಾರೆ. ತಮ್ಮ ಮೋಹಕ ರೂಪ ಮತ್ತು ಅಭಿನಯದಿಂದ ಕೋಟ್ಯಾಂತರ ಜನರ ಹೃದಯ ಗೆದ್ದಿದ್ದಾರೆ. 


COMMERCIAL BREAK
SCROLL TO CONTINUE READING

ಖ್ಯಾತ ನಟನನ್ನು ನಟಿ ನಗ್ಮಾ ಪ್ರೀತಿಸುತ್ತಿದ್ದಾರೆ ಎಂಬ ವದಂತಿಯೊಂದು ಆ ಕಾಲದಲ್ಲಿ ಬಲು ಜೋರಾಗಿ ಹಬ್ಬಿತ್ತು. ನಟನ ಪ್ರೀತಿಯ ಬಲೆಯಲ್ಲಿ ಬಿದ್ದ ನಗ್ಮಾ ಜೊತೆ ಅವರ ಮದುವೆ ನಡೆಯಲಿಲ್ಲ. ಕೆಲವು ಕಾರಣಗಳಿಂದ ಅವರಿಬ್ಬರೂ ದೂರವಾದರು ಎನ್ನಲಾಗುತ್ತದೆ.  


ನಟ ಶಿವರಾಜ್ ಕುಮಾರ್ ಜೊತೆಗೆ ಕುರುಬನ ರಾಣಿ ಚಿತ್ರದಲ್ಲಿ ನಟಿ ನಗ್ಮಾ ನಟಿಸಿದ್ದರು. ಆ ಬಳಿಕ ಸ್ಯಾಂಡಲ್‌ವುಡ್‌ನಲ್ಲಿಯೂ ಸಖತ್ ಫೇಮಸ್ ಆದರು. ಕನ್ನಡದಲ್ಲಿ ಮಾಡಿದ ಮೊದಲ ಚಿತ್ರದಲ್ಲೇ ಜನಪ್ರಿಯತೆ ಪಡೆದರು. ನಂತರ ರವಿಚಂದ್ರನ್, ವಿಷ್ಣುವರ್ಧನ್ ಜೊತೆಯೂ ನಗ್ಮಾ ಸಿನಿಮಾ ಮಾಡಿದ್ದಾರೆ.


ಇದನ್ನೂ ಓದಿ: 16 ನೇ ವಯಸ್ಸಿಗೆ ಸಿಎಂ ಪುತ್ರನನ್ನು ಪ್ರೀತಿಸಿ ಮದುವೆಯಾದ ಖ್ಯಾತ ನಟಿ !


ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ನಗ್ಮಾ 49 ವರ್ಷವಾದರೂ ಒಂಟಿಯಾಗಿದ್ದಾರೆ. ಇನ್ನೂ ಮದುವೆಯಾಗದೇ ಉಳಿದಿದ್ದಾರೆ. ನಟಿ ನಗ್ಮಾ ಖ್ಯಾತ ತಮಿಳು ನಟನ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ಹೇಳಲಾಗುತ್ತದೆ. ಆದರೆ ಇವರಿಬ್ಬರು ಮದುವೆಯಾಗಲಿಲ್ಲ. ಕೆಲವು ಕಾರಣಗಳಿಂದಾಗಿ ಇವರ ಲವ್‌ ಬ್ರೇಕ್ ಅಪ್ ಆಯ್ತು ಎನ್ನಲಾಗುತ್ತದೆ. ಆ ನಟನೇ ಶರತ್ ಕುಮಾರ್ ಎನ್ನಲಾಗುತ್ತದೆ. 


ಶರತ್ ಕುಮಾರ್ ಗೆ ಛಾಯ ಎಂಬವರ ಜತೆ ಮದುವೆಯಾಗಿತ್ತು. ಈ ವಿಚಾರ ಕೆಲ ದಿನಗಳ ಬಳಿಕ ಅವರಿಗೆ ತಿಳಿಯಿತಂತೆ. ನಂತರ ಶರತ್ ಪತ್ನಿ ಛಾಯ ಡಿವೋರ್ಸ್‌ ಕೋರಿದರು. ಆ ಬಳಿಕ ನಟ ಶರತ್ ಕುಮಾರ್ ಮತ್ತು ನಗ್ಮಾ ಬೇರ್ಪಟ್ಟರು ಎಂದು ಹೇಳಲಾಗುತ್ತದೆ. 


ಈ ಬ್ರೇಕಪ್‌ ಬಳಿಕ ನಟಿ ನಗ್ಮಾ ಹೆಸರು ಕ್ರಿಕೆಟರ್‌ ಗಂಗೂಲಿ ಜೊತೆಗೆ ತಳುಕು ಹಾಕಿಕೊಂಡಿತ್ತು. ಗಂಗೂಲಿಗೆ ಅದಾಗಲೇ ಮದುವೆಯಾಗಿದ್ದ ಕಾರಣ ಸಂಬಂಧ ಮುರಿದುಬಿತ್ತು. 


ಇದನ್ನೂ ಓದಿ: ಕೊಲೆ ಕೇಸ್‌ನಲ್ಲಿ ದರ್ಶನ್ & ಗ್ಯಾಂಗ್ ಗೆ ಬೇಗನೆ ಶಿಕ್ಷೆ ಕೊಡಿಸಲು ಪೊಲೀಸರ ಮೆಗಾ ಪ್ಲಾನ್..!


ನಗ್ಮಾ ಹೆಸರು ನಂತರ ಬೋಜುಪುರಿ ನಟ ರವಿಕಿಶನ್ ಜೊತೆ ಸೇರಿಕೊಂಡಿತ್ತು.   ರವಿ ಕಿಶನ್‌ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿತ್ತು. ಅದಾದ ಬಳಿಕ ಭೋಜ್‌ಪುರಿ ನಟ ಮನೋಜ್ ತಿವಾರಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿ ಹಬ್ಬಿತು. ಈ ವಿಚಾರವನ್ನು ನಟಿ ನಗ್ಮಾ ನಿರಾಕರಿಸಿದರು. ಇಬ್ಬರು ನಟರೊಂದಿಗೆ ಸಂಬಂಧ ಇಲ್ಲ ಅವರಿಬ್ಬರೂ ಮದುವೆಯಾದವರು, ದಯಮಾಡಿ ನನ್ನ ಹೆಸರನ್ನು ತರಬೇಡಿ ಎಂದು ನಟಿ ನಗ್ಮಾ ಸ್ಪಷ್ಟನೆ ನೀಡಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.