David Warner: ಕೋವಿಡ್ ಅವಧಿಯಲ್ಲಿ ತೆಲುಗು ಸಿನಿಮಾ ಹಾಡುಗಳು ಮತ್ತು ಡೈಲಾಗ್‌ಗಳ ರೀಲ್‌ಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಬಹಳ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಜನಪ್ರಿಯತೆ ಪಡೆದುಕೊಂಡರು..  ಅಲ್ಲದೇ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಂ ಸಿನಿಮಾದ ಬುಟ್ಟ ಬೊಮ್ಮ ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ತೆಲುಗು ಸಿನಿಮಾಗಳ ಕಟ್ಟಾ ಅಭಿಮಾನಿಯಾಗಿರುವ ಡೇವಿಡ್ ವಾರ್ನರ್ ಹಲವು ತೆಲುಗು ಸಿನಿಮಾಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ವಾರ್ನರ್ ತೆಲುಗು ಚಿತ್ರಗಳಲ್ಲಿ ನಟಿಸಿದರೆ ಉತ್ತಮ ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ-"ರಾಜ್ಯವೇ ಖುಷಿ ಪಡುವ ಸುದ್ದಿ" ಎನ್ನುತ್ತಾ ವೈರಲ್ ಆಗಿದ್ದ ನಿರೂಪಕಿ ದಿವ್ಯಾ ವಸಂತ ಮದುವೆ: ಈಕೆಯನ್ನು ವರಿಸಿದವನಾರು? ಇಲ್ಲಿದೆ ಫೋಟೋಸ್‌


ಕೆಲ ದಿನಗಳ ಹಿಂದೆ ನಿರ್ದೇಶಕ ರಾಜಮೌಳಿ ಜೊತೆ ಜಾಹೀರಾತು ಕೂಡ ಮಾಡಿದ್ದು ಗೊತ್ತೇ ಇದೆ. ಡೇವಿಡ್ ವಾರ್ನರ್ ತೆಲುಗು ಸಿನಿಮಾಗಳಲ್ಲಿ ನಟಿಸಿದರೆ? ಅದನ್ನು ರಾಜಮೌಳಿ ನಿರ್ದೇಶಿಸಿದರೆ ಹೇಗಿರುತ್ತದೆ ಎಂಬ ತಮಾಷೆಯ ಚಿತ್ರವನ್ನು ರಚಿಸಿದ್ದಾರೆ. ಆದರೆ ಈಗ ವಾರ್ನರ್ ನೇರವಾಗಿ ತೆಲುಗು ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..


ಇದನ್ನೂ ಓದಿ-ಈ ಬಿಗ್ ಬಾಸ್ ಸ್ಪರ್ಧಿಯ ಅಕ್ಕ ಮತ್ತು ಭಾವ ಇಬ್ಬರೂ ಮೆಗಾ ಸ್ಟಾರ್ ಗಳೇ!ಆದರೆ ಮನೆಯೊಳಗೆ ಇರುವವರೆಗೂ ಬಳಸುವುದಿಲ್ಲವಂತೆ ಅವರ ಹೆಸರು!


 ಕೆಲ ದಿನಗಳ ಹಿಂದೆ ಡೇವಿಡ್ ವಾರ್ನರ್ ಬಿಳಿ ಶರ್ಟ್ ಧರಿಸಿ ಬಂದೂಕು ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ನಂತರವೂ ಡೇವಿಡ್ ವಾರ್ನರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದು ಸ್ಪಷ್ಟವಾಗಿರಲಿಲ್ಲ. ಕೆಲವರು ‘ಪುಷ್ಪ2’ ಅಂದರು. ಆದರೆ ಅದು ನಿಜವಲ್ಲ.


ಇತ್ತೀಚಿನ ಮಾಹಿತಿಯ ಪ್ರಕಾರ ಡೇವಿಡ್ ವಾರ್ನರ್ ನಿತಿನ್ ಅವರ 'ರಾಬಿನ್‌ಹುಡ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿರುವ ಈ ಸಿನಿಮಾದಲ್ಲಿ ಡೇವಿಡ್ ವಾರ್ನರ್ ವಿಲನ್ ಆಗಿ ನಟಿಸಲಿದ್ದಾರಂತೆ. ಈ ಸಿನಿಮಾದಲ್ಲಿ ಡೇವಿಡ್ ವಾರ್ನರ್ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅವರ ಜತೆ ಸಾಹಸ ದೃಶ್ಯಗಳ ಜತೆಗೆ ಕಾಮಿಡಿ ದೃಶ್ಯಗಳೂ ಇರಲಿದೆಯಂತೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.