ಬಾಲಿವುಡ್‌ ನಟಿ ಪೂನಂ ಧಿಲ್ಲೋನ್ ಮನೆಯಲ್ಲಿ ಕಳ್ಳತನ ನಡೆದಿದೆ. ವರದಿಗಳ ಪ್ರಕಾರ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ಸಮೀರ್ ಅನ್ಸಾರಿ ಎಂದು ಗುರುತಿಸಲಾಗಿದೆ. ನಟಿಯ ಮನೆಯಲ್ಲಿದ್ದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ವಜ್ರದ ಕಿವಿಯೋಲೆ ಹಾಗೂ 35 ಸಾವಿರ ನಗದು ಕಳ್ಳತನಾಗಿತ್ತು.  


COMMERCIAL BREAK
SCROLL TO CONTINUE READING

ಮುಂಬೈನ ಖಾರ್‌ ಏರಿಯಾದಲ್ಲಿರುವ ಪೂನಂ ಧಿಲ್ಲೋನ್ ಅವರ ನಿವಾಸದಲ್ಲಿ ಕಳ್ಳತನ ನಡೆದಿದೆ. ವಾಸ್ತವವಾಗಿ, ನಟಿ ಜುಹು ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಅವರ ಮಗ ಅನ್ಮೋಲ್ ಖಾರ್ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಪೂನಂ ಧಿಲ್ಲೋನ್ ಕೂಡ ಕೆಲವೊಮ್ಮೆ ಈ ಮನೆಯಲ್ಲಿಯೇ ಇರುತ್ತಾರೆ. ಇತ್ತೀಚೆಗೆ ಅವರ ಮನೆಯಲ್ಲಿ ಕಳ್ಳತನದ ಘಟನೆ ನಡೆದಿದೆ. ಆರೋಪಿಗಳು 35 ಸಾವಿರ ನಗದು, ಒಂದು ಲಕ್ಷ ಮೌಲ್ಯದ ವಜ್ರದ ಕಿವಿಯೋಲೆ ಹಾಗೂ 500 ಅಮೆರಿಕನ್ ಡಾಲರ್ ದೋಚಿದ್ದಾರೆ. ಕಳ್ಳತನ ಆರೋಪದ ಮೇಲೆ ಖಾರ್ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.


ಇದನ್ನೂ ಓದಿ:ನಟಿ ಹನಿ ರೋಸ್‌ ಬಗ್ಗೆ ಅಶ್ಲೀಲ ಕಾಮೆಂಟ್..! ಭಾರತದ ಪ್ರಮುಖ ಚಿನ್ನದ ವ್ಯಾಪಾರಿ ಬಂಧನ


ಸಮೀರ್ ಅನ್ಸಾರಿ ಎಂಬ ವ್ಯಕ್ತಿ ಡಿಸೆಂಬರ್ 28 ರಿಂದ ಜನವರಿ 5 ರವರೆಗೆ ನಟಿಯ ಮನೆಯಲ್ಲಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಫ್ಲಾಟ್‌ಗೆ ಬಣ್ಣ ಬಳಿಯಲು ಬಂದಿದ್ದ ಜನರ ನಡುವೆ ಅವನೂ ಇದ್ದ. ಮನೆಯಲ್ಲಿದ್ದುಕೊಂಡೇ ಬೀರು ತೆರೆದಿದ್ದು, ಕಳ್ಳತನ ಮಾಡಿದ್ದಾನೆ. ಕಳ್ಳತನದ ಆರೋಪ ಹೊತ್ತಿರುವ ವ್ಯಕ್ತಿ ಕದ್ದ ಹಣದಿಂದ ತನ್ನ ಕೆಲ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದ ಎನ್ನಲಾಗಿದೆ. 


ನಟಿಯ ಪುತ್ರ ಅನ್ಮೋಲ್ ಜನವರಿ 5 ರಂದು ದುಬೈನಿಂದ ಹಿಂದಿರುಗಿ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಬಗ್ಗೆ ತನ್ನ ತಾಯಿಯೊಂದಿಗೆ ಮಾತನಾಡಿದ್ದಾರೆ. ಮನೆಯ ಸಹಾಯಕರೊಂದಿಗೂ ಮಾತುಕತೆ ನಡೆಸಲಾಯಿತು. ಇದಾದ ನಂತರ ಪೂನಂ ಧಿಲ್ಲೋನ್ ಅವರ ಮ್ಯಾನೇಜರ್ ಸಂದೇಶ್ ಚೌಧರಿ ಅವರು ಖಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ನಂತರ, ಪೇಂಟರ್‌ಗಳನ್ನು ವಿಚಾರಣೆಗೆ ಕರೆಯಲಾಯಿತು. ವಿಚಾರಣೆ ವೇಳೆ ಸಮೀರ್ ಅನ್ಸಾರಿ ನಾನೇ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಲಾಯಿತು.


ಇದನ್ನೂ ಓದಿ: ಇಂಟಿಮೇಟ್ ಸೀನ್‌ ವೇಳೆ ನಟನ ದೇಹದ ಆ ಭಾಗವನ್ನು 5 ಬಾರಿ ತೊಳೆಸಿದ್ದರಂತೆ ಈ ನಟಿ!


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.