ಬೆಂಗಳೂರು: ಮೈನವರೆಳಿಸುವ ದೃಶ್ಯಗಳೊಂದಿಗೆ ಪ್ರಾರಂಭವಾಗುವ ದಿ ವಿಲನ್ ಟಿಸರ್ ನಿಜಕ್ಕೂ ಪ್ರತಿ ಫ್ರೇಮ್ ನಲ್ಲಿಯೂ ಕೂಡ ವಿಭಿನ್ನವಾಗಿ ಮೂಡಿಬಂದಿದೆ. 


COMMERCIAL BREAK
SCROLL TO CONTINUE READING

ಜಗತ್ತಿನ ಯಾವುದೇ  ಮೂಲೆಯಲ್ಲಿದ್ದರೂ ಆ ಭೇಟೆ ನಂದೇ ಎಂದು ಪ್ರಾರಂಭವಾಗುವ ಶಿವಣ್ಣನ ಡೈಲಾಗ್ ಗೆ ಅಷ್ಟೇ ಶಾಂತ ಚಿತ್ತವಾಗಿ ತಮ್ಮದೇ ಸ್ಟೈಲ್ ಲ್ಲಿ ಕೌಂಟರ್ ಡೈಲಾಗ್ ಕೊಡುತ್ತಾರೆ ಕಿಚ್ಚ್ ಸುದೀಪ್. ಅಕ್ಟೋಬರ್ 1 ರಂದು ಬಿಡುಗಡೆಯಾಗಿರುವ ಚಿತ್ರದ ಟೀಸರ್ ಈಗ ಯುಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ಅಚ್ಚರಿಯ ಸಂಗತಿಯೆಂದರೆ ಈ ಟಿಸರ್ ಬಿಡುಗಡೆಯಾಗಿ 24 ಗಂಟೆಯಲ್ಲಿ 12 ಲಕ್ಷಕ್ಕೂ ಅಧಿಕ ಜನರು ಇದನ್ನು ವಿಕ್ಷಿಸಿದ್ದಾರೆ.


ಇದೆ ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ದಕ್ಷಿಣ ಭಾರತದಲ್ಲಿ ಅತಿ ಕೂತುಹಲದಿಂದ ಎದುರು ನೋಡುತ್ತಿರುವ ಚಿತ್ರ ಎನ್ನಲಾಗುತ್ತಿದೆ. ಇದೆ ಮೊದಲ ಬಾರಿಗೆ  ತೆರೆಯ ಮೇಲೆ ಒಟ್ಟಾಗಿ ಕಾಣಸಿಕೊಳ್ಳುತ್ತಿರುವ ಶಿವರಾಜ್ ಕುಮಾರ್  ಮತ್ತು ಸುದೀಪ್ ಇಬ್ಬರು ಸಹಿತ ಪೈಪೋಟಿಗೆ ಬಿದ್ದಂತೆ ತಮ್ಮ ನಟನಾ ಚಾತುರ್ಯವನ್ನು ತೋರಿಸಿದ್ದಾರೆ.