ಉಪ್ಪಿಯ UI The Movie ಗೆ ಮನಸೋತ ಜಗತ್ತಿನ ಶ್ರೇಷ್ಠ ಸಂಗೀತ ನಿರ್ದೇಶಕ...!
ಇತ್ತೀಚಿಗೆ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಉಪೇಂದ್ರ ನಿರ್ದೇಶನದ ಯು-ಐ ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.ಈ ಚಿತ್ರದ ಕುರಿತಾಗಿ ಸಿನಿಮಾ ವಿಮರ್ಶಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಇತ್ತೀಚಿಗೆ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಉಪೇಂದ್ರ ನಿರ್ದೇಶನದ ಯು-ಐ ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.ಈ ಚಿತ್ರದ ಕುರಿತಾಗಿ ಸಿನಿಮಾ ವಿಮರ್ಶಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಮಾರು 9 ವರ್ಷಗಳ ನಂತರ ನಿರ್ದೇಶನಕ್ಕೆ ಇಳಿದಿರುವ ನಟ-ನಿರ್ದೇಶಕ ಉಪೇಂದ್ರ ಯಾವಾಗಲೂ ಭಿನ್ನ ಚಿಂತನೆಗಳಿಗೆ ಹೆಸರಾದವರು, ಅದರಂತೆಯ ಅವರ ಸಿನಿಮಾಗಳೂ ಸಹ ಇವೆ.ಈಗ ಯು ಐ ಸಿನಿಮಾ ಕೂಡ ಒಂದು ರೀತಿ ವಿಭಿನ್ನ ಪ್ರಯೋಗದ ಭಾಗ ಎಂದೇ ಹೇಳಬಹುದು.ಇಂದಿನ ಆಧುನಿಕ ತಂತ್ರಜ್ಞಾನ ವನ್ನು ಬಳಸಿಕೊಂಡು ನಿರ್ಮಿಸಿರುವ ಸಿನಿಮಾ ನಮಗೆ ಒಂದು ರೀತಿ ಹಾಲಿವುಡ್ ಸಿನಿಮಾ ನೋಡಿದಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ಈ ರೀತಿಯ ವಿಷಯವನ್ನು ಇಟ್ಟುಕೊಂಡು ಬಹುಶಃ ಯಾವ ನಿರ್ದೇಶಕನು ಭಾರತೀಯ ಚಿತ್ರರಂಗದಲ್ಲಿ ಚಿತ್ರವನ್ನು ನಿರ್ಮಿಸಿಲ್ಲ. ಈಗ ಅಂತಹ ಸಾಹಸವನ್ನು ನಮ್ಮ ಕನ್ನಡದ ಹೆಮ್ಮೆಯ ನಿರ್ದೇಶಕ ಉಪೇಂದ್ರ ಮಾಡಿದ್ದಾರೆ.
ಇದನ್ನೂ ಓದಿ: ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಚರ್ಚೆ ಮಾಡುವುದು ಸರಿಯಲ್ಲ: ಗೃಹ ಸಚಿವ ಪರಮೇಶ್ವರ
ಬಂಡೀಪುರದಲ್ಲಿ ಕಿಮೀಗಟ್ಟಲೇ ಟ್ರಾಫಿಕ್ ಜಾಂ!; ವಾರಾಂತ್ಯದ ಖುಷಿಯಲ್ಲಿದ್ದವರಿಗೆ ಟ್ರಾಫಿಕ್ ಬಿಸಿ!!
ಇನ್ನೊಂದೆಡೆಗೆ ಈ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಅಂತರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಟ್ವೀಟ್ ಮಾಡಿ "ಸಂಪೂರ್ಣವಾಗಿ ಅದ್ಭುತ ಸಿನಿಮಾ ಆಗಿದ್ದು!! #UiTheMovie ಅಪೋಕ್ಯಾಲಿಪ್ಸ್ ನಂತರದ ಜಗತ್ತಿನಲ್ಲಿ ನಿರ್ಮಿಸಲಾದ ಬ್ಲಾಕ್‌ಬಸ್ಟರ್ ಚಲನಚಿತ್ರವಾಗಿದೆ. ಅತ್ಯಂತ ವಿಶಿಷ್ಟ ಮನರಂಜನೆ ಮತ್ತು ಚಿಂತನೆಯನ್ನು ಪ್ರಚೋದಿಸುವ ಈ ಚಿತ್ರವನ್ನು ನೀವು ನೋಡಲೇಬೇಕು' ಎಂದು ಅವರು ಟ್ವೀಟ್ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.