ನವದೆಹಲಿ: ಬಾಲಿವುಡ್ ತಾರೆಗಳಾದ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಡುವೆ ಏನೋ ನಡೆಯುತ್ತಿದೆ ಎನ್ನುವ ಸಂಶಯ ಈಗ ಅಭಿಮಾನಿಗಳಲ್ಲಿ ಮೂಡಿದೆ.


COMMERCIAL BREAK
SCROLL TO CONTINUE READING

ಹೃತಿಕ್ (Hrithik Roshan) ಭಾನುವಾರ (ಜನವರಿ 10) 47 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ದೀಪಿಕಾ ಅವರು ಡಬಲ್ ಆಚರಣೆ ಕುರಿತು ಮಾತನಾಡಿದರು.ಇದಕ್ಕೆ ಹೃತಿಕ್ ಮೌನ ಎಮೋಜಿಯೊಂದಿಗೆ ಉತ್ತರಿಸಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.


Deepika Padukone ಫೇಸ್ ಬುಕ್, ಇನ್ ಸ್ಟಾ, ಟ್ವಿಟರ್ ನ ಎಲ್ಲಾ ಪೋಸ್ಟ್ ಡಿಲೀಟ್


ಹೃತಿಕ್ ಜನವರಿ 5 ರಂದು ದೀಪಿಕಾ ಅವರ ಜನ್ಮದಿನದ ಶುಭಾಶಯ ಕೋರಿದ ನಂತರ ರಹಸ್ಯವಾದ ಟ್ವಿಟರ್ ಪೋಸ್ಟ್‌ಗಳು ಪ್ರಾರಂಭವಾದವು 'ಜನ್ಮದಿನದ ಶುಭಾಶಯಗಳು ಡಿಯರ್ ದೀಪಿಕಾ ಪಡುಕೋಣೆ (Deepika Padukone) ! ನಿಮ್ಮ ಜಗತ್ತನ್ನು ಇನ್ನೊಮ್ಮೆ ಬೆಳಗಿಸಿ ಮತ್ತು ಬೆರಗುಗೊಳಿಸುತ್ತಿರಿ. ಶುಭಾಶಯಗಳು, ಎಂದು ಟ್ವೀಟ್ ಮಾಡಿದ್ದಾರೆ.


ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ


ಇದಕ್ಕೆ ದೀಪಿಕಾ ಪ್ರತಿಕ್ರಿಯಿಸಿ 'ತುಂಬಾ ಧನ್ಯವಾದಗಳು ಎಚ್ಆರ್! ಈಗ ಒಂದೆರಡು ದಿನಗಳಲ್ಲಿ ಮತ್ತೊಂದು ದೊಡ್ಡ ಆಚರಣೆಗೆ ಬರಲಿದೆ ...! ಎಂದು ಹೇಳಿದ್ದಾರೆ. ಇನ್ನು ಮುಂದುವರೆದು Err....or Two!? #double #celebration ಎಂದು ಬರೆದುಕೊಂಡಿದ್ದಾರೆ.ಈ ವಿನಿಯಮಕ್ಕೆ ಅಭಿಮಾನಿಗಳು ಪ್ರತಿಕ್ರಿಯಿಸಿ ಅವನೊಂದಿಗೆ ಒಂದು ಸಿನಿಮಾ ಮಾಡಿ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಜಾಕ್ವೆಲಿನಾಗೆ ನರೇಗಾ ಉದ್ಯೋಗ ಕಾರ್ಡ್...!


ಹೃತಿಕ್ ಅವರು ಕೊನೆಯ ಬಾರಿಗೆ 2019 ರಲ್ಲಿ 'ವಾರ್ ಮತ್ತು  ಸೂಪರ್ 30 ಚಿತ್ರಗಳಲ್ಲಿ ಕಾಣಿಸಿಕೊಂಡಾಗಿನಿಂದ ತಮ್ಮ ಮುಂದಿನ ಯೋಜನೆಯನ್ನು ಪ್ರಕಟಿಸಿಲ್ಲ. ಏತನ್ಮಧ್ಯೆ, ಪತಿ, ನಟ ರಣವೀರ್ ಸಿಂಗ್ ಅವರೊಂದಿಗೆ ರಣಥಂಬೋರ್‌ನಲ್ಲಿ ಹೊಸ ವರ್ಷ ಕಳೆದ ದೀಪಿಕಾ, ನಿರ್ದೇಶಕ ಶಕುನ್ ಬಾತ್ರಾ ಅವರ ಮುಂದಿನ ಚಿತ್ರೀಕರಣದಲ್ಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.