South Star Actress : ಈ ಸ್ಟಾರ್‌ ನಟಿ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಈ ಸ್ಟಾರ್‌ ನಟಿ 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಸಿನಿರಂಗ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಸಖತ್‌ ಹೆಸರು ಮಾಡಿದ ಈಕೆಯನ್ನು ಮಿಲ್ಕಿ ಬ್ಯೂಟಿ ಎಂದೇ ಜನರು ಕರೆಯುತ್ತಾರೆ. 


COMMERCIAL BREAK
SCROLL TO CONTINUE READING

ನಟಿ ತಮನ್ನಾ ಭಾಟಿಯಾ... 2005 ರಲ್ಲಿ ಹಿಂದಿ ಸಿನಿಮಾ ಚಾಂದ್ ಸಾ ರೋಷನ್ ಚೆಹ್ರಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಅದೇ ವರ್ಷ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. 2006 ರಲ್ಲಿ ಕೇಡಿ ಮೂಲಕ ತಮಿಳು ಸಿನಿಮಾಗೆ ಪ್ರವೇಶಿಸಿದರು. ತಮನ್ನಾ ಭಾಟಿಯಾ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ತಮನ್ನಾ ಕೇವಲ ಸಿನಿಮಾಗಳಿಂದ ಮಾತ್ರವಲ್ಲ ವೈಯಕ್ತಿಕ ಜೀವನದಿಂದಲೂ ಚರ್ಚೆಯಲ್ಲಿರುತ್ತಾರೆ. 


ಇದನ್ನೂ ಓದಿ: ಸಖತ್ ಸೌಂಡ್ ಮಾಡುತ್ತಿರುವ ಪುಷ್ಪಾ-2 ಸಿನಿಮಾವನ್ನು ಈ ಐದು ಕಾರಣಗಳಿಗಾಗಿ ನೋಡಲೇಬೇಕು..!


ನಟಿ ತಮನ್ನಾ ಮತ್ತು ನಟ ವಿಜಯ್ ವರ್ಮಾ ಡೇಟಿಂಗ್‌ ಮಾಡುತ್ತಿರುವ ಸಂಗತಿ ದೃಢಪಟ್ಟಿದೆ. ಇಬ್ಬರೂ ತಮ್ಮ ಸಂಬಂಧವನ್ನು ದೃಢಪಡಿಸಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ತಮನ್ನಾ ಮತ್ತು ವಿಜಯ್ ವರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವೈರಲ್ ಲಿಪ್-ಲಾಕ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದರು. 


ವಿಜಯ್ ವರ್ಮಾಗೂ ಮೊದಲು ತಮನ್ನಾ ಭಾಟಿಯಾ ಹೆಸರು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನಿ ಮಾಜಿ ಕ್ರಿಕೆಟರ್‌ ಅಬ್ದುಲ್ ರಜಾಕ್ ಜೊತೆ ತಳಕು ಹಾಕಿಕೊಂಡಿತ್ತು ಎನ್ನಲಾಗುತ್ತದೆ. ಆದರೆ ಈ ವದಂತಿ ಸುಳ್ಳು ಎಂದು ತಮನ್ನಾ ಹೇಳಿದ್ದಾರೆ.  


ತಮನ್ನಾ ಭಾಟಿಯಾ 120 ಕೋಟಿ ರೂಪಾಯಿ ಆಸ್ತಿಗೆ ಒಡತಿ ಆಗಿದ್ದಾರೆ. ಪ್ರತಿ ಚಿತ್ರಕ್ಕೆ 4-5 ಕೋಟಿ ರೂಪಾಯಿ ಸಂಭಾವನೆ ಪಡೆಯುವ ತಮನ್ನಾ ಭಾಟಿಯಾ, ಜಾಹೀರಾತುಗಳಿಗಾಗಿ 7-8 ಕೋಟಿ ರೂಪಾಯಿ ಚಾರ್ಜ್‌ ಮಾಡುತ್ತಾರೆ. ತಮನ್ನಾ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. 


ಇದನ್ನೂ ಓದಿ: ಮಾಲ್‌ನಲ್ಲಿ ಗೋಡೆ ಒರೆಸುತ್ತಿದ್ದವಳ ಲಕ್‌ ಬದಲಾಯಿಸಿದ ಶಾರುಕ್‌ ಖಾನ್‌.. ಈಕೆ ಇಂದು ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್‌ ನಟಿ!!


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.