Actress who become beggars: ಚಿತ್ರರಂಗದಲ್ಲಿ ಅತಿ ಅಗತ್ಯವಾಗಿ ಬೇಕಾಗಿರುವುದು ಗ್ಲಾಮರ್.‌ ಆದರೆ ಇತ್ತೀಚಿನ ದಿನಗಳಲ್ಲಿ ಅಂದ-ಚಂದವಷ್ಟೇ ಅಲ್ಲ... ಪ್ರತಿಭೆಗೂ ಬೆಲೆ ಇದೆ ಎಂಬುದನ್ನು ಕನ್ನಡ ಸೇರಿದಂತೆ ಕೆಲವೊಂದು ಸಿನಿರಂಗಗಳು ತೋರಿಸಿಕೊಟ್ಟಿವೆ. ಆದರೆ ಬಾಲಿವುಡ್ ಮಾತ್ರ ಇಂದಿಗೂ ಅದೇ ಗ್ಲಾಮರ್ ಲೋಕವನ್ನು ಕಾಯ್ದುಕೊಂಡು ಬಂದಿರುವುದು ವಿಪರ್ಯಾಸ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನನಗೆ ಕಾಜೋಲ್ ಜೊತೆ ಆ ಕೆಲಸ ಮಾಡುವ ಆಸೆ..! ಬಯಕೆ ಬಿಚ್ಚಿಟ್ಟ ದುಲ್ಕರ್‌, ಫ್ಯಾನ್ಸ್‌ ಶಾಕ್‌...


ಇನ್ನು ಅನೇಕರಿಗೆ ನಟ-ನಟಿಯರಾಗುವ ಆಸೆ ಇರುತ್ತದೆ. ಆದರೆ ಅಲ್ಲಿ ಅಗತ್ಯವಾಗಿ ಬೇಕಾಗಿರುವ ಗ್ಲಾಮರ್ ಅನ್ನು ನಿಭಾಯಿಸುವುದು ಸಾಧ್ಯವಾಗುವುದಿಲ್ಲ. ಮುಂಬೈ ಚಲನಚಿತ್ರಗಳ ನಗರವಾಗಿದ್ದು, ಇಲ್ಲಿ ಪ್ರತಿ ವರ್ಷ ಸಾವಿರಾರು ಜನರು ನಟನಾಗುವ ಕನಸನ್ನು ಹೊತ್ತು ಆಗಮಿಸುತ್ತಾರೆ. ಇಲ್ಲಿ ಯಶಸ್ಸನ್ನು ಸಾಧಿಸುವುದು ಹೇಳಿದಷ್ಟು ಸುಲಭದ ಮಾತಲ್ಲ.
 
ಕೆಲವರಂತೂ ಹೇಳತೀರದಷ್ಟು ಸೋಲನುಭವಿಸುವವರಿದ್ದಾರೆ. ಈ ಸೋಲು ಎಷ್ಟು ತೀವ್ರವಾಗಿರುತ್ತದೆ ಎಂದರೆ ಅದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಿರಲ್ಲ, ಇಂತಹ ಘಟನೆಗಳ ನಂತರ ಅವರ ಜೀವನವು ಮೊದಲಿನಂತೆಯೇ ಇರುವುದಿಲ್ಲ. ದಿನದಿಂದ ದಿನಕ್ಕೆ ಹದಗೆಡಲಿ ಪ್ರಾರಂಭವಾಗುತ್ತದೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಅಂತಹದ್ದೇ ನಟಿಯರ ಕಥೆಯನ್ನು.


ಸಿನಿಉದ್ಯಮದಲ್ಲಿ ಸೋತು ಆ ಬಳಿಕ ಬೀದಿಗಳಲ್ಲಿ ಭಿಕ್ಷಾಟನೆ ಮತ್ತು ಕಳ್ಳತನಕ್ಕೆ ಬಿದ್ದು, ಸಿಕ್ಕಿಬೀಳುವ ಪರಿಸ್ಥಿತಿಯನ್ನು ಎದುರಿಸಿದ ಆ ನಟಿ ಯಾರೆಂದು ತಿಳಿಯೋಣ.


ಮುಂಬೈನಲ್ಲಿ ಕೆಲವು ಚಿತ್ರಗಳು ಮತ್ತು ಮಾಡೆಲಿಂಗ್ ಮಾಡಿದ ಮಿಥಾಲಿ ಶರ್ಮಾಗೆ ಹಲವಾರು ತಿಂಗಳುಗಳವರೆಗೆ ಉತ್ತಮ ಆಫರ್‌ಗಳು ಸಿಗಲಿಲ್ಲ. ಈ ಅವಧಿಯಲ್ಲಿ ಆಕೆ ಕೈಗೆ ಸಿಕ್ಕ ಸಿನಿಮಾಗಳನ್ನು ಮಾಡಿದ್ದರು. ಆದರೂ ಉತ್ತಮ ಆಫರ್‌ಗಳು ಸಿಗದ ಕಾರಣ, ಹಣದ ಕೊರತೆ ಎದುರಿಸಲಾರಂಭಿಸಿದರು. ಇದೇ ನೋವಿನಿಂದ ಕ್ರಮೇಣ ಅವರು ಖಿನ್ನತೆಗೆ ಒಳಗಾಗಿದ್ದರು.


ಮಿಥಾಲಿ ಶರ್ಮಾ, ಒಂದು ಕಾಲದಲ್ಲಿ ಭೋಜ್‌ಪುರಿ ಚಿತ್ರರಂಗದಲ್ಲಿ ಖ್ಯಾತ ನಟಿ. ಭೋಜ್‌ಪುರಿ ಚಲನಚಿತ್ರ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದ ಸಮಯವಿತ್ತು. ಆದರೆ ನಂತರ ಕಾಲಕ್ರಮೇಣ ಮಿಥಾಲಿ ಶರ್ಮಾ ಜೀವನ ಸಂಪೂರ್ಣ ಬದಲಾಯಿತು. ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಲು ಪ್ರಾರಂಭಿಸಿದವು. ಅಲ್ಲಿಂದ ಚಲನಚಿತ್ರ ನಿರ್ಮಾಪಕರು ಕೂಡ ಆಕೆಯನ್ನು ದೂರವಿಡಲು ಪ್ರಾರಂಭಿಸಿದರು.


ತನ್ನ ವೃತ್ತಿಜೀವನ ನಾಶವಾದುದನ್ನು ಕಂಡು ಮಿಥಾಲಿ ಖಿನ್ನತೆಗೆ ಒಳಗಾಗಿದ್ದಳು. ವರದಿಗಳ ಪ್ರಕಾರ, ಮಿಥಾಲಿ ಬದುಕು ಸಾಗಿಸುವ ಕಾರಣದಿಂದ ಮುಂಬೈನ ಲೋಖಂಡವಾಲಾ ಬೀದಿಗಳಲ್ಲಿ ಭಿಕ್ಷೆ ಬೇಡಲು ಆರಂಭಿಸಿದ್ದರಂತೆ.


ಮುಂಬೈನ ಲೋಖಂಡವಾಲಾ ರಸ್ತೆಯಲ್ಲಿ ಮಿಥಾಲಿ ಶರ್ಮಾ ಕಳ್ಳತನ ಮಾಡಿ ಸಿಕ್ಕಿಬಿದ್ದ ಸಂದರ್ಭ ಕೂಡ ಬಂದಿತ್ತು. ಈ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಂದು ಆಕೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು ಎನ್ನಲಾಗಿದೆ. ಮಹಿಳಾ ಪೊಲೀಸರು ಕೈಕೋಳ ಹಾಕಲು ಮುಂದಾದಾಗ ಮಿಥಾಲಿ ಮೊದಲು ಅವರ ಜತೆ ಮಾತಿನ ಚಕಮಕಿ ನಡೆಸಿ ನಂತರ ಓಡಿಹೋಗಲು ಯತ್ನಿಸಿದ್ದರು ಎನ್ನಲಾಗಿದೆ.


ಅವರ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಅವರನ್ನು ಠಾಣೆಯ ಮಾನಸಿಕ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಅಲ್ಲಿನ ವೈದ್ಯರು ಅವರಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ತಿಳಿಸಿದ್ದು, ನಿಗಾದಲ್ಲಿ ಇರಿಸಲಾಗಿದೆ. ಇನ್ನು ಮಿಥಾಲಿ ದೆಹಲಿ ನಿವಾಸಿಯಾಗಿದ್ದು, ಎಲ್ಲವನ್ನೂ ತೊರೆದು ಮುಂಬೈಗೆ ಬಂದು ಅದೃಷ್ಟ ಪರೀಕ್ಷೆಗೆ ಇಳಿದಿದ್ದರಂತೆ. ಆದರೆ ಆಕೆಗೆ ಒಮ್ಮೆ ಕೈಹಿಡಿದಿದ್ದ ಅದೃಷ್ಟ ಕೆಲವೇ ದಿನಗಳಲ್ಲಿ ದೂರವಾಗಿತ್ತು ಎನ್ನಬಹುದು.


ಇದನ್ನೂ ಓದಿ: 61 ವರ್ಷದ ಮುದುಕನೇ ಬೇಕೆಂದು ಪಟ್ಟು ಹಿಡಿದು ಮದುವೆಯಾದ 18ರ ಯುವತಿ; ಕಣ್ಣೀರು ಹಾಕಿದ ಸಿಂಗಲ್ಸ್‌..!


ಇನ್ನು ಇವರಂತೆಯೇ ನಿಶಾ ನೂರ್ ಎಂಬ ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟಿಯನ್ನು ನಿರ್ಮಾಪಕರು ವೇಶ್ಯೆಯನ್ನಾಗಿ ಮಾಡಿದರೆಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಯಾವುದೇ ಕಲಾವಿದರು ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತಿರಲಿಲ್ಲ. ಆದರೆ ಅದಕ್ಕೂ ಮುಂಚೆ, ತಮಿಳು, ತೆಲುಗು, ಮಲಯಾಳಂ ಮಾತ್ರವಲ್ಲದೆ, ಕನ್ನಡದಲ್ಲೂ ನಟಿಸಿದ ಈಕೆ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಂತಹ ನಟರೊಂದಿಗೆ ಕೂಡ ಕೆಲಸ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ