ನವದೆಹಲಿ: ಈ ಮುಂಬೈ ಬೆಡಗಿ ಹಾಗೂ ಮಿಸ್ ಯುನಿವರ್ಸ್ 2018 ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನೆಹಾಲ್ ಚುಡಾಸಮಾಗೆ ಐಎಎಸ್ ಅಧಿಕಾರಿಯಾಗುವ ಆಸೆಯಂತೆ,ಆದ್ದರಿಂದ ಈ ಸ್ಪರ್ಧೆ ಮುಗಿದ ನಂತರ ಪರೀಕ್ಷೆಗೆ ತಯಾರಿ ನಡೆಸುವುದಾಗಿ ತಿಳಿಸಿದ್ದಾಳೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನೆಹಾಲ್ "ನನ್ನ ಸ್ಪರ್ಧೆಯ ನಂತರ ನಾನು ಭಾರತೀಯ ನಾಗರಿಕ ಸೇವೆಯಲ್ಲಿರಲು ಬಯಸುತ್ತಿದ್ದೇನೆ.ಈಗ ಬಾಲಿವುಡ್ ನ ಯಾವುದೇ ಪ್ಲಾನ್ ಇಲ್ಲ ಎಂದು ತಿಳಿಸಿದ್ದಾರೆ. ಶುಕ್ರವಾರದಂದು ನೆಹಾಲ್ ಮಿಸ್ ದಿವಾ ಯುನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಕಿರಿಟವನ್ನು ಮುಡಿಗೆರಿಸಿಕೊಂಡಿದ್ದರು.


ನೆಹಾಲ್ ತಮಗೆ ಸ್ಪೂರ್ತಿ ನೀಡಿದ ವಿಷಯಗಳ ಬಗ್ಗೆ ತಿಳಿಸುತ್ತಾ ತಮಗೆ ಲಾರಾದತ್ತ ಸ್ಫೂರ್ತಿ ಎಂದು ತಿಳಿಸಿದರು, ಭಾರತಕ್ಕೆ ಕಳೆದ 18 ವರ್ಷಗಳಿಂದ ಮಿಸ್ ಯುನಿವರ್ಸ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿಲ್ಲ,ಈಗ ಪ್ರಶಸ್ತಿ ಪಡೆಯುವ ಹುಮ್ಮಸ್ಸಿನೊಂದಿಗೆ ಡಿಸೆಂಬರ್ ನಲ್ಲಿ ಬ್ಯಾಂಕಾಂಕ್ ಗೆ ಹಾರಲಿದ್ದಾರೆ.