ದಶಕದ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ ಈ ಅಣ್ಣ-ತಂಗಿ ಜೋಡಿ
ಚಂದನವನದಲ್ಲಿ ಬಹಳ ದಿನಗಳಿಂದ ಮೌನವಾಗಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಕಾಂಬಿನೇಶನ್ ನ ಅಣ್ಣ-ತಂಗಿ ಜೋಡಿ ಕನ್ನಡಿಗರನ್ನು ಮತ್ತೆ ಮೋಡಿ ಮಾಡಲಿದೆ.
ಹೌದು ಶಿವಣ್ಣ-ರಾಧಿಕಾ ಅಣ್ಣ-ತಂಗಿಯಾಗಿ ಈ ಮೊದಲೂ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಜೋಡಿಯ ಕಾಂಬಿನೇಶನ್ ಎಂದ ಕೂಡಲೇ ತಟ್ಟನೆ ನೆನಪಾಗೋದು ಓಂ ಸಾಯಿ ಪ್ರಕಾಶ್ ಅವರ 'ತವರಿಗೆ ಬಾ ತಂಗಿ', 'ಅಣ್ಣ-ತಂಗಿ' ಸಿನಿಮಾಗಳು.
ಈ ಚಿತ್ರದ ವಿಶೇಷತೆ ಎಂದರೆ, ಸದಾ ಕೌಟುಂಬಿಕ ಚಿತ್ರಗಳಿಗೆ ಹೆಸರುವಾಸಿಯಾದ ಕನ್ನಡದ ಹಿರಿಯ ಹಾಗೂ ತವರಿಗೆ ಬಾ ತಂಗಿ ಮತ್ತು ಅಣ್ಣ-ತಂಗಿ ಚಿತ್ರದ ನಿರ್ದೇಶಕರಾದ ಓಂ ಸಾಯಿ ಪ್ರಕಾಶ್ ಅವರೇ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವು ಮಾರ್ಚ್ ತಿಂಗಳಲ್ಲಿ ಸೆಟ್ ಏರಲಿದೆ ಎಂದು ಚಿತ್ರತಂಡ ತಿಳಿಸಿದೆ.