ಈ ಚುನಾವಣಾ ಗೀತೆಯನ್ನು ನೀವು ಕೇಳಿದ್ದೀರಾ!
ಪ್ರಸ್ತುತ ಸಂದರ್ಭಕ್ಕೆ ಬಹಳ ಹತ್ತಿರದಲ್ಲಿರುವ ಈ ಗೀತೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ.
ಬೆಂಗಳೂರು: ಖ್ಯಾತ ನಿರ್ದೇಶಕ ನಾಗಾಭರಣ ನಿರ್ದೇಶಿಸಿರುವ, ಶ್ರುತಾಲಯ ಫಿಲಂಸ್ ನಿರ್ಮಾಣದಲ್ಲಿ ಮೂಡಿಬಂದಿರುವ 'ಕಾನೂರಾಯಣ' ಚಿತ್ರದ ಎಲೆಕ್ಷನ್ ಗೀತೆಯೊಂದನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಈ ಚುನಾವಣಾ ಗೀತೆ ಈಗ ವೈರಲ್ ಆಗುತ್ತಿದೆ.
ಚಿತ್ರಕತೆಯಲ್ಲಿ ಬರುವ ಗ್ರಾಮ ಪಂಚಾಯತ್ ಚುನಾವಣಾ ಪ್ರಚಾರಕ್ಕಾಗಿ ಸೃಷ್ಟಿಸಿರುವ ಈ ಗೀತೆ, ಪ್ರಸ್ತುತ ಸನ್ನಿವೇಶಕ್ಕೆ ಬಹಳ ಹತ್ತಿರದಲ್ಲಿದ್ದು ಭಾರೀ ಜನಪ್ರಿಯತೆ ಪಡೆಯುತ್ತಿದೆ.
ಈ ಗೀತೆಯನ್ನೊಮ್ಮೆ ನೀವೂ ಕೇಳಿ...