ನವದೆಹಲಿ: ಕಾರ್ತಿಕ್ ಆರ್ಯನ್, ಅನನ್ಯ ಪಾಂಡೆ ಹಾಗೂ ಭೂಮಿ ಪೇಡ್ನೆಕರ್ ಮುಖ್ಯ ಭೂಮಿಕೆಯಲ್ಲಿರುವ ಬಾಲಿವುಡ್ ಚಿತ್ರ 'ಪತಿ ಪತ್ನಿ ಔರ್ ವೋ', ಬಾಕ್ಸ್ ಆಫೀಸ ಮೇಲೆ ಭರ್ಜರಿ ಅಂದಾಜ್ ನಲ್ಲಿ ತನ್ನ ಕಬ್ಜಾ ಜಮಾಯಿಸಿದೆ. ಒಂದೆಡೆ ಬಂಬಾಟ್ ಒಪನಿಂಗ್ ಮೂಲಕ ತೆರೆಕಂಡ ಈ ಚಿತ್ರ, ಬಿಡುಗಡೆಯಾದ ಕೇವಲ ಆರೇ ದಿನಗಳಲ್ಲಿ 50 ಕೋಟಿ ರೂ. ಸಂಪಾದನೆಯ ಅಂಕಿ ದಾಟಿದೆ.


COMMERCIAL BREAK
SCROLL TO CONTINUE READING

ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ ಪ್ರಕಾರ ಚಿತ್ರ ಬಿಡುಗಡೆಯಾದ ಮೊದಲ ದಿನ ಅಂದರೆ ಶುಕ್ರವಾರ 9.10 ಕೋಟಿ ರೂ. ಗಳಿಕೆ ಮಾಡಿದೆ. ಶನಿವಾರ 12.33 ಕೋಟಿ ರೂ., ರವಿವಾರ 14.51 ಕೋಟಿರೂ. ಹಾಗೂ ಸೋಮವಾರ 5.17 ಕೋಟಿ ರೂ. ಮತ್ತು 5.35 ಕೋಟಿ ರೂ.ಗಳ ಜಬರ್ದಸ್ತ್ ಕಮಾಯಿ ಮಾಡಿದೆ. ಬುಧವಾರ ಈ ಚಿತ್ರ 4.62 ಕೋಟಿ ರೂ. ಸಂಪಾದಿಸಿದ್ದು, ಇದುವರೆಗೆ ಚಿತ್ರ ಗಳಿಕೆ ಮಾಡಿದ ಒಟ್ಟು ಮೊತ್ತ 51. 61 ಕೋಟಿ ರೂ. ತಲುಪಿದೆ.



ಎಲ್ಲರ ಅಭಿನಯ ಅದ್ಭುತ
ಚಿತ್ರದಲ್ಲಿ ಕಲಾವಿದರ ಅಭಿನಯದ ಕುರಿತು ಮಾತನಾಡುವುದಾದರೆ, ಕಾರ್ತಿಕ್ ಆರ್ಯನ್ ಈ ಹಿಂದೆ ಬಿಡುಗಡೆಯಾದ ತಮ್ಮ ಪ್ರತಿಯೊಂದು ಚಿತ್ರಗಳಲ್ಲಿ ಅಭಿನಯದಲ್ಲಿ ಸುಧಾರಣೆ ಮಾಡುತ್ತಾ ಬಂದಿದ್ದಾರೆ. ಚಿತ್ರದಲ್ಲಿ ಅನನ್ಯ ಪಾಂಡೆ ತುಂಬಾ ಗ್ಲಾಮರಸ್ ಆಗಿ ಕಂಡುಬಂದಿದ್ದಾರೆ. ಅವರ ಮೊದಲ ಚಿತ್ರದ ತುಲನೆಯಲ್ಲಿ ಅನನ್ಯ ಪಾಂಡೆ ಈ ಚಿತ್ರದಲ್ಲಿ ತುಂಬಾ ಕಾನ್ಫಿಡೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತ ಮುದಸ್ಸರ್ ಅಜೀಜ್ ಅವರ ನಿರ್ದೇಶನ ಕೂಡ ಚಿತ್ರಕ್ಕೆ ಜೀವ ತುಂಬಿದೆ.



1978ರಲ್ಲಿ ಬಿಡುಗಡೆಯಾದ ಬಿ.ಆರ್. ಚೋಪ್ರಾ ನಿರ್ದೇಶನದ 'ಪತಿ ಪತ್ನಿ ಔರ್ ವೋ' ಚಿತ್ರದ ರಿಮೇಕ್ ಆಗಿದೆ. ಇತ್ತೀಚೆಗಷ್ಟೇ ಟಿ-ಸಿರೀಸ್ ಪ್ರೊಡಕ್ಷನ್ ಹೌಸ್ ಹಾಗೂ ಬಿ.ಆರ್. ಸ್ಟುಡಿಯೊಸ್ ಕರಾರೊಂದನ್ನು ಮಾಡಿಕೊಂಡಿವೆ. 70ರ ದಶಕದ ಈ ಸುಪರ್ ಹಿಟ್ ಕಾಮಿಡಿ ಚಿತ್ರದಲ್ಲಿ ಸಂಜೀವ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇನ್ನೊಂದೆಡೆ ಅವರ ಪತ್ನಿಯಾಗಿ ವಿದ್ಯಾ ಸಿನ್ಹಾ ಹಾಗೂ ಸೆಕ್ರೆಟರಿಯಾಗಿ ರಂಜಿತಾ ಕೌರ್ ನಟಿಸಿದ್ದರು.