ಬೆಂಗಳೂರು: ಮೀಟೂ ಅಭಿಯಾನ ದುರ್ಬಳಕೆ ಆಗುತ್ತಿರುವುದರ ಬಗ್ಗೆ ಕಿಡಿಕಾರಿರುವ ನಟಿ ಹರ್ಷಿಕಾ ಪೂಣಚ್ಚ ಗಂಡಸರಿಗೂ ಸಹ #WeToo ಅಭಿಯಾನ ಪ್ರಾರಂಭ ಮಾಡಲು ಇದು ಸೂಕ್ತ ಸಮಯ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ನಟಿ ಹರ್ಷಿಕಾ" ನಾನು ಚಿತ್ರರಂಗದಲ್ಲಿ ಕಳೆದ ೧೦ ವರ್ಷಗಳಿಂದ ಇದ್ದೇನೆ,ಮತ್ತು ಎಲ್ಲವನ್ನು ವೈಯಕ್ತಿಕವಾಗಿ ನನ್ನ ಕಣ್ಣುಗಳಿಂದಲೇ ನೋಡಿದ್ದೇನೆ.ಈ ದೊಡ್ಡ ದೊಡ್ಡ ಹೋರಾಟಗಾರ್ತಿ ನಟಿಯರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ತಮಗೆ ಬೇಕಾದ್ದನ್ನ ಪಡೆಯೋಕೆ ಈಗ ತಮ್ಮ ಸ್ವಾರ್ಥಕ್ಕಾಗಿ ಅವರು ಯಾರ ವಿರುದ್ದ ಆರೋಪಿಸುತ್ತಿದ್ದಾರೋ ಆ ಗಂಡಸರಿಗೆನೆ ಎಲ್ಲಾ ಸ್ವಾತಂತ್ರವನ್ನುಕೊಟ್ಟು ಮಾಡುತ್ತಾರೆ ಎಂದು ಮೀಟೂ ಅಭಿಯಾನದ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ನಟಿಯರಿಗೆ ಟಾಂಗ್ ಕೊಟ್ಟಿದ್ದಾರೆ.




ಇನ್ನು ಮುಂದುವರೆದು ಕೆಲವು ಗಂಡಸರು ಕೆಟ್ಟವರಿದ್ದಾರೆ ಮತ್ತು ಮಹಿಳೆಯರಿಗೆ ಕೆಲಸ ಕೊಡಲು ತಮ್ಮ ಅನುಕೂಲಗಳಿಗೆ ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಾರೆ.ಆದ್ರೆ ಯಾರೂ ನೀವು ಇಷ್ಟಪಡದ  ಕೆಲಸವನ್ನು ಮಾಡಿಸಲು  ನಿಮ್ಮ  ಮೇಲೆ ಹಲ್ಲೆ ಮಾಡಲ್ಲ.ನಿಮ್ಮನ್ನ ರೇಪ್ ಮಾಡಲ್ಲ !! ಯಾವಾಗಲು ನೀವು ಗಟ್ಟಿಯಾಗಿ ಆಗಲ್ಲ ಅಂತ ಹೇಳಿ ಅಲ್ಲಿಂದ ಹೊರಟು ಹೋಗಬಹುದು !! ಎರಡು ಕೈಗಳಿಂದ ತಟ್ಟಿದರಷ್ಟೇ ಚಪ್ಪಾಳೆ ಆಗುತ್ತದೆ.ಹೀಗಾಗಿ ಎಲ್ಲಾ ಹೋರಾಟಗಾರ್ತಿ ನಟಿಯರಿಗೂ ಚಿತ್ರರಂಗದಲ್ಲಿರುವ  ಎಲ್ಲಾ ಮಹಿಳೆಯರಿಗೂ ನನ್ನ ಮನವಿ ,ನೀವು ರಿಯಲ್ ಆಗಿರಿ.ಇದು ಗಂಡಸರಿಗೂ #wetoo ಅಭಿಯಾನ ಶುರು ಮಾಡಲು ಸರಿಯಾದ ಸಮಯ ಎಂದು ಆವರು ಟ್ವೀಟ್ ಮೂಲಕ ತಿಳಿಸಿದ್ದಾರೆ.


ಬಾಲಿವುಡ್ ನಲ್ಲಿ  ತನುಶ್ರೀ ದತ್ತಾ ರವರು ನಾನಾ ಪಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದ ನಂತರ ಚಿತ್ರರಂಗ ಪತ್ರಿಕೋಧ್ಯಮ ಹೀಗೆ ವಿವಿದ ವಲಯಗಳಲ್ಲಿ ಭಾರಿ ಸುದ್ದಿ ಮಾಡಿದೆ, ಈಗ ಅದು ಕನ್ನಡದ ಚಂದನವನದಲ್ಲಿ ಶೃತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡುವುದರ ಮೂಲಕ ಕಾಲಿಟ್ಟಿದೆ.ಈ ಪ್ರಕರಣ ಈಗ ಕಾನೂನು ಹೋರಾಟದ ರೂಪವನ್ನು ಪಡೆದುಕೊಂಡಿದೆ.