Prabhas: ಒಂದೆಡೆ, ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಹಿಟ್ ಗಳಿಸುತ್ತಿದ್ದಾರೆ ಎಂದು ಸಂತೋಷಪಡಬೇಕೋ? ಅಥವಾ ಅವರ ಮದುವೆ ಆಗುವುದಿಲ್ಲ ಎಂದು ಬೇಸರಪಡಬೇಕೋ ಅಭಿಮಾನಿಗಳಿಗೆ ಅರ್ಥವಾಗುತ್ತಿಲ್ಲ.. ಟಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪಟ್ಟಿಯಲ್ಲಿ ಪ್ರಭಾಸ್ ಮೊದಲ ಸ್ಥಾನದಲ್ಲಿದ್ದಾರೆ. ಸದ್ಯ ಪ್ರಭಾಸ್ ಗೆ 44 ವರ್ಷ. ಅವರ ಸಹ ನಟರು ಎರಡು ಅಥವಾ ಮೂರು ಮಕ್ಕಳನ್ನು ಹೊಂದಿದ್ದು ಸಂತೋಷದ ಜೀವನ ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಪ್ರೇಕ್ಷಕರನ್ನು ರಂಜಿಸಲು ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದರೂ ಮದುವೆ ಬಗ್ಗೆ ಕೇಳಿದರೆ ಸಣ್ಣಗೆ ಮುಗುಳ್ನಗೆ ಬೀರಿ ಮುಖ ತಿರುಗಿಸುತ್ತಾರೆ.


ಇದನ್ನೂ ಓದಿ-ಆರು ವರ್ಷ ಪೂರೈಸಿದ ನವರಸ ನಟನ ಅಕಾಡೆಮಿ :ಜು. 20 ರಿಂದ ಹೊಸ ಬ್ಯಾಚ್ ಶುರು


ರೆಬೆಲ್ ಸ್ಟಾರ್ ಕೃಷ್ಣಂ ರಾಜು ಕೂಡ ಪ್ರಭಾಸ್ ಮದುವೆಯ ಬಗ್ಗೆ ಇದ್ದಷ್ಟು ದಿನ ಯೋಚಿಸುತ್ತಿದ್ದರು. ಇದನ್ನು ಅವರೇ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಪ್ರಭಾಸ್ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಪ್ಲಾನ್ ಮಾಡಿದ್ದು, ಆ ಆಸೆ ಈಡೇರುವ ಮೊದಲೇ ಮರಳಿ ಬಾರದ ಲೋಕಕ್ಕೆ ತೆರಳಿದರು..


ಇದನ್ನೂ ಓದಿ-ಸಿಂಪಲ್‌ಸ್ಟಾರ್‌ಗೆ ತಪ್ಪದ ಸಂಕಷ್ಟ.. ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಮೇಲೆ ಮತ್ತೊಂದು ದೂರು ದಾಖಲು!


ಪ್ರಭಾಸ್ ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣವಿದೆ. ಸ್ಟಾರ್ ಆ್ಯಂಕರ್ ಕಮ್ ಹೀರೋಯಿನ್ ಸುಮಾ ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರಭಾಸ್ ಅವರನ್ನು ಭೇಟಿಯಾದಾಗ ಮದುವೆ ಬಗ್ಗೆ ಕೇಳಿದ್ದೆ.. ಮದುವೆ ಆಗದೇ ಇರುವುದಕ್ಕೆ ಕಾರಣ ಹೇಳಿ ಎಂದೇ "ನನ್ನ ಲೇಡಿ ಫ್ಯಾನ್ಸ್ ಮನಸು ಒಡೆಯಲು ಇಷ್ಟವಿಲ್ಲದ ಕಾರಣ ನಾನು ಇನ್ನೂ ಮದುವೆಯಾಗಿಲ್ಲ" ಎಂದಿದ್ದರಂತೆ ಪ್ರಭಾಸ್‌..  


ಸದ್ಯ ಪ್ರಭಾಸ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.. ಕಳೆದ ವರ್ಷ ಸಲಾರ್ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಪ್ರಭಾಸ್, ಕಲ್ಕಿ ಸಿನಿಮಾ ಮೂಲಕ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.