ತನ್ನ ಈ ಹಾಡಿನ ಮೂಲಕ ಪಡ್ಡೆ ಹೈಕಳ ಕನಸಿಗೆ ಕಿಚ್ಚೆರಚಿದ್ದಾಳೆ ದಿಶಾ ಪಾಟ್ನಿ
ಈ ಚಿತ್ರದ ಚಿತ್ರೀಕರಣ ಮಾರಿಷೆಸ್, ಗೋವಾ ಹಾಗೂ ಮುಂಬೈನ ಕೆಲ ಪ್ರಾಂತ್ಯಗಳಲ್ಲಿ ನಡೆಸಲಾಗಿದೆ.
ನವದೆಹಲಿ: ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿ ಹಾಗೂ ಆದಿತ್ಯರಾಯ್ ಕಪೂರ್ ಇತ್ತೀಚಿಗೆ ತಮ್ಮ ಬಹುನಿರೀಕ್ಷಿತ ಚಿತ್ರ 'ಮಲಂಗ್' ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ತೊಡಗಿದ್ದಾರೆ. ಈ ಚಿತ್ರದಲ್ಲಿ ದಿಶಾ ಪಾಟ್ನಿ ಹಾಗೂ ಆಧಿತ್ಯ ರಾಯ್ ಕಪೂರ್ ಜೊತೆಗೆ ಅನಿಲ್ ಕಪೂರ್ ಹಾಗೂ ಕುನಾಲ್ ಖೇಮು ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೆ ಬಿಡುಗಡೆಯಾಗಿರುವ ಎಲ್ಲ ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಇದೀಗ ಈ ಚಿತ್ರದ ಮತ್ತೊಂದು ಹಾಡು 'ಹುಯಿ ಮಲಂಗ್' ಬಿಡುಗಡೆಯಾಗಿದ್ದು, ಈ ಹಾಡು ಪಡ್ಡೆ ಹೈಕಳ ಕನಸಿಗೆ ಕಿಚ್ಚೇರಚಿದೆ.
ಈ ಹಾಡಿನಲ್ಲಿನ ದಿಶಾ ಪಾಟ್ನಿ ಅವರ ಅವತಾರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಹಾಡಿಗೆ ಅಸೀಮ್ ಕೌರ್ ತಮ್ಮ ಧ್ವನಿ ನೀಡಿದ್ದಾರೆ ಹಾಗೂ ವೇದ ಶರ್ಮಾ ಸಂಗೀತ ನೀಡಿದ್ದಾರೆ. ಕುನಾಲ್ ವರ್ಮಾ ಹಾಗೂ ಹರ್ಷ್ ಲಿಂಬಾಚಿಯಾ ಈ ಹಾಡನ್ನು ಜಂಟಿಯಾಗಿ ರಚಿಸಿದ್ದಾರೆ. ಈ ಹಾಡಿನ ಲೀಡ್ ರೋಲ್ ನಲ್ಲಿ ದಿಶಾ ಕಾಣಿಸಿಕೊಂಡಿದ್ದಾರೆ. ಬನ್ನಿ ಹಾಗಾದರೆ ನೀವು ವಿಕ್ಷೀಸಿ ಈ ಹಾಡನ್ನು.
ಫೆಬ್ರುವರಿ 7, 2020ಕ್ಕೆ ಬೆಳ್ಳಿ ಪರದೆಗೆ ಅಪ್ಪಳಿಸಲಿರುವ ಈ ಚಿತ್ರವನ್ನು ಮಾರಿಷೆಸ್, ಗೋವಾ ಹಾಗೂ ಮುಂಬೈನ ಕೆಲ ಪ್ರಾಂತ್ಯಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಟ್ರೈಲರ್ ನಲ್ಲಿ ಜಬರ್ದಸ್ತ್ ಸಸ್ಪೆನ್ಸ್ ಹಾಗೂ ಲವ್ ತೋರಿಸಲಾಗಿದೆ. ಮೋಹಿತ್ ಸೂರಿ ನಿರ್ದೇಶನದಡಿ ಮೂಡಿಬಂದಿರುವ ಈ ಚಿತ್ರವನ್ನು ಟಿ-ಸೀರೀಜ್ ನ ಭೂಷಣ್ ಕುಮಾರ್, ಕೃಷ್ಣಾ ಕುಮಾರ್, ಲವ್ ಫಿಲಂಸ್ ನ ಲವ್ ರಂಜನ್, ಅಂಕುರ್ ಗರ್ಗ್ ಹಾಗೂ ನಾರ್ದನ್ ಲೈಟ್ಸ್ ಎಂಟರ್ಟೈನ್ಮೆಂಟ್ ನ ಕೆ.ಜೆ. ಶೇವಕ್ರಮಣಿ ನಿರ್ಮಿಸಿದ್ದಾರೆ.