ಬೆಂಗಳೂರು: ಕನ್ನಡಿಗರ 'ಕೆಜಿಎಫ್ ಚಾಪ್ಟರ್-2'‌ ಹವಾ ಹೇಗಿದೆ ಅಂದ್ರೆ ಉತ್ತರ ಭಾರತದ ಹತ್ತಾರು ಸ್ಕ್ರೀನ್‌ಗಳಲ್ಲಿ ಈಗಲೂ 'ಕೆಜಿಎಫ್-2'‌ ಅದ್ಧೂರಿ ಪ್ರದರ್ಶನ ಕಾಣ್ತಿದೆ. ಅದರಲ್ಲೂ ಬಾಲಿವುಡ್‌ ಸ್ಟಾರ್‌ ನಟರೇ ಕನ್ನಡ ಸಿನಿಮಾ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಅದರಲ್ಲೂ 'ಕೆಜಿಎಫ್'‌ ಹೀರೋ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಗೆ ಸ್ವತಃ ಬಾಲಿವುಡ್‌ ನಟರೇ ಫಿದಾ ಆಗಿದ್ದಾರೆ. ಈಗ ಆ ಪಟ್ಟಿಗೆ ಮತ್ತೊಬ್ಬ ಸ್ಟಾರ್‌ ಸೇರ್ಪಡೆಯಾಗಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ 'ಬಾಲಿವುಡ್‌ ಬಾದ್‌ ಷಾ' ಎಂಬ ಬಿರುದು ನೀಡಿದ್ದಾರೆ.


COMMERCIAL BREAK
SCROLL TO CONTINUE READING

'ಕೆಜಿಎಫ್-2'‌ ಇಂಡಿಯನ್‌ ಬಾಕ್ಸ್‌ ಆಫಿಸ್‌ನಲ್ಲಿ ದಾಖಲೆ ಬರೆದ ಕನ್ನಡಿಗರ ಸಿನಿಮಾ. ₹500 ಕೋಟಿ ಗಡಿ ದಾಟುವುದೇ ಸಾಹಸ ಎಂಬ ಪರಿಸ್ಥಿತಿ ಇರುವಾಗ ಕನ್ನಡಿಗರ ಸಿನಿಮಾ ಸಾವಿರ ಕೋಟಿ ಕ್ಲಬ್‌ ಸೇರಿದ್ದಾಗಿದೆ. ಬಾಕ್ಸ್‌ ಆಫಿಸ್‌ನಲ್ಲಿ ₹1300 ಕೋಟಿ ಬಾಚಿರುವ 'ಕೆಜಿಎಫ್-2'‌‌ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗೋಲ್ಡ್.‌ ಇಂತಹ ಸಿನಿಮಾ ಕುರಿತಾಗಿ ಬಾಲಿವುಡ್‌ ಸ್ಟಾರ್‌ ಶಾಹಿದ್ ಕಪೂರ್ ಮುಕ್ತವಾಗಿ ಮಾತನಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಟ ಯಶ್‌ ಬಾಲಿವುಡ್‌ ಪಾಲಿಗೆ ನಂಬರ್‌ 1 ನಟ ಎಂದಿದ್ದಾರೆ ಶಾಹಿದ್.


ಇದನ್ನೂ ಓದಿ: ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ: ಅಶ್ವತ್ಥ ನಾರಾಯಣ


ಕನ್ನಡ ಶೈನಿಂಗ್..!
ಕನ್ನಡ ಸಿನಿಮಾಗಳ ತಾಕತ್ತು ಏನೆಂಬುದು ಜಗತ್ತಿಗೇ ಗೊತ್ತು. ಇನ್ನೇನು 100 ವರ್ಷ ಪೂರೈಸಲಿರುವ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಇತಿಹಾಸವಿದೆ. ಆದರೆ ಇದು ಬಾಲಿವುಡ್‌ ಮಂದಿಗೆ ಗೊತ್ತಿದ್ದೂ, ಗೊತ್ತಿಲ್ಲದಂತೆ ನಾಟಕವಾಡಿ ಅಭ್ಯಾಸವಾಗಿತ್ತು. 'ಕೆಜಿಎಫ್-1'‌ & 'ಕೆಜಿಎಫ್-2'‌ ರಿಲೀಸ್‌ ಆದ ಬಳಿಕ ಇಂತಹ ಸೀಮಿತ ಯೋಚನೆಗಳು ಕಳಚಿಬಿದ್ದವು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಯುಗವೇ ಆರಂಭವಾಗಿ ಹೋಗಿತ್ತು.


Tumkur Accident Case: ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ


ಇತ್ತೀಚೆಗೆ ಬಾಲಿವುಡ್‌ ಸಾಲು ಸಾಲು ಸೋಲು ಕಾಣುತ್ತಿದೆ. ಸ್ವತಃ ಶಾಹಿದ್ ಕಪೂರ್ ಸಿನಿಮಾ ಕೂಡ ಹೀನಾಯ ಸೋಲು ಕಂಡಿತ್ತು. ಶಾಹಿದ್ ನಟಿಸಿದ್ದ 'ಜೆರ್ಸಿ'‌ ಸಿನಿಮಾ 'ಕೆಜಿಎಫ್-2'‌ ಜೊತೆ ರಿಲೀಸ್‌ ಆಗಬೇಕಿತ್ತು. ಆದ್ರೆ 'ಕೆಜಿಎಫ್-2'‌ ಅಬ್ಬರ ಕಂಡು ಬೆಚ್ಚಿದ್ದ 'ಜೆರ್ಸಿ'‌ ಟೀಂ ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಿತ್ತು. ಅದಕ್ಕೂ ಮೊದಲು 'ಜೆರ್ಸಿ'‌ ಸಿನಿಮಾವನ್ನ 'ಕೆಜಿಎಫ್-2'‌‌ ಬಿಡುಗಡೆಯಾಗಿದ ದಿನದಂದು ಅಂದರೆ ಏಪ್ರಿಲ್‌ 14ಕ್ಕೆ ರಿಲೀಸ್‌ ಮಾಡಲು ಯೋಜಿಸಿದ್ದರು. ಆದ್ರೆ 'ಕೆಜಿಎಫ್-2'‌ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾದಾಗ ಬೆಚ್ಚಿಬಿದ್ದಿದ್ದರು ಜೆರ್ಸಿ ನಿರ್ಮಾಪಕರು. ಹೀಗಾಗಿ 2022ರ ಏಪ್ರಿಲ್‌ 22ರಂದು 'ಜೆರ್ಸಿ'‌ ಸಿನಿಮಾ ರಿಲೀಸ್‌ ಆಗಿತ್ತು. ಅಂದರೆ 'ಕೆಜಿಎಫ್-2'‌‌ ರಿಲೀಸ್‌ ಆದ ಒಂದು ವಾರದ ಬಳಿಕ. ಆದರೂ ನಟ ಶಾಹಿದ್ ಕಪೂರ್ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಮಕಾಡೆ ಮಲಗಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.