ಬೆಸ್ಟ್ ಫ್ರೆಂಡ್ ಗಂಡನನ್ನೇ ಮದುವೆಯಾದ ಖ್ಯಾತ ನಟಿ !
ಸೌತ್ ಸಿನಿರಂಗದ ಸ್ಟಾರ್ ನಟಿ ಈಕೆ. ತಮಿಳು, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಾಯಕಿ. ತನ್ನ ಆತ್ಮೀಯ ಸ್ನೇಹಿತೆಯ ಮಾಜಿ ಪತಿಯನ್ನು ಮದುವೆಯಾಗಿದ್ದಾರೆ.
ಈ ಜನಪ್ರಿಯ ನಟಿ ಬಾಲಿವುಡ್‌ನಲ್ಲಿ ಸ್ಟಾರ್ ಹೀರೋ ಹೃತಿಕ್ ರೋಷನ್ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೆಮಸ್ ಆಗಿದ್ದ ಈ ನಟಿ ಬಾಲಿವುಡ್ ಸಿನಿಮಾಗಳ ಮೂಲಕ ಯಶಸ್ಸನ್ನು ಪಡೆದರು. ಬಳಿಕ ಸೌತ್‌ಸಿನಿರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದರು.
ಹನ್ಸಿಕಾ ಮೋಟ್ವಾನಿ... ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ಫೇಮಸ್ ನಟಿ. ಚಿಕ್ಕ ವಯಸ್ಸಿನಲ್ಲೇ ಒಳ್ಳೆ ಕ್ರೇಜ್ ಪಡೆದಿದ್ದರು. 15 ನೇ ವಯಸ್ಸಿನಲ್ಲಿ ಪೂರಿ ಜಗನ್ನಾಥ್ ಮತ್ತು ಅಲ್ಲು ಅರ್ಜುನ್ ಅವರ 'ದೇಶಮುದುರು' ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ ಸೂಪರ್ ಹಿಟ್ ಆಗಿ ಹನ್ಸಿಕಾ ರಾತ್ರೋರಾತ್ರಿ ಸ್ಟಾರ್ ಆದರು. ಆ ನಂತರ ಆಕೆಗೆ ಸತತ ಸಿನಿಮಾ ಆಫರ್ ಬಂದವು.ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’... ಕಿಚ್ಚನ ಜನ್ಮದಿನದಂದು ಮ್ಯಾಕ್ಸ್ ಮಾಸ್ ಸಾಂಗ್ ಔಟ್!
ಹನ್ಸಿಕಾ ಮೋಟ್ವಾನಿ ತಮ್ಮ ವೃತ್ತಿಜೀವನವನ್ನು ಬಾಲ ಕಲಾವಿದೆಯಾಗಿ ಪ್ರಾರಂಭಿಸಿದರು. ಮೊದಲು ದೂರದರ್ಶನ ಕಾರ್ಯಕ್ರಮ ಶಕ ಲಕ ಬೂಮ್ ಬೂಮ್‌ನಲ್ಲಿ ನಟಿಸಿ ಪ್ರಸಿದ್ಧರಾದರು. ನಂತರ ಕರಿಷ್ಮಾ ಕಾ ಕರಿಷ್ಮಾ, ಸನ್ ಪ್ಯಾರಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ದೇಶ್ ಮೇ ನಿಕ್ಲಾ ಹೋಗಾ ಚಾಂದ್ ಸೇರಿದಂತೆ ಇತರ ಧಾರಾವಾಹಿಗಳಲ್ಲಿ ನಟಿಸಿದರು.
ಹನ್ಸಿಕಾ 2003 ರಲ್ಲಿ ಹೃತಿಕ್ ರೋಷನ್ ಅವರ 'ಕೋಯಿ ಮಿಲ್ ಗಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಹೃತಿಕ್ ಅವರ ಸ್ನೇಹಿತರಲ್ಲಿ ಒಬ್ಬರಾಗಿ ನಟಿಸಿದ್ದಾರೆ. ಆ ನಂತರ ಜಾಗೋ, ಅಬ್ರ ಕಾ ದಬ್ರಾ ಸೇರಿದಂತೆ ಇತರೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಆಪ್ ಕಾ ಸುರೂರ್’ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದರು.
ಹನ್ಸಿಕಾ ಮೋಟ್ವಾನಿ ಅವರು ತಮ್ಮ ಆಪ್ತ ಸ್ನೇಹಿತೆ ರಿಂಕಿ ಎಂಬುವವರ ಮಾಜಿ ಪತಿ ಸೋಹೆಲ್ ಅವರನ್ನು ವಿವಾಹವಾಗಿದ್ದಾರೆ. ಡಿಸೆಂಬರ್ 4, 2022 ರಂದು ಜೈಪುರದ ಮುಂಡೋಟಾ ಕೋಟಾ ಅರಮನೆಯಲ್ಲಿ ಹನ್ಸಿಕಾ ಮೋಟ್ವಾನಿ ಮದುವೇ ಅದ್ಧೂರಿಯಾಗಿ ನಡೆಯಿತು.
ತನ್ನ ಆತ್ಮೀಯ ಸ್ನೇಹಿತೆಯ ಮೂಲಕ ಸೋಹೆಲ್‌ನನ್ನು ಭೇಟಿಯಾದೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹನ್ಸಿಕಾ ಮೋಟ್ವಾನಿ ಹೇಳಿದ್ದಾರೆ. ಈ ಮದುವೆಗೆ ಹನ್ಸಿಕಾ ಸ್ನೇಹಿತೆ ರಿಂಕಿ ಕೂಡ ಆಗಮಿಸಿದ್ದರು ಎಂದು ಹೇಳಲಾಗುತ್ತದೆ. ಸೊಹೇಲ್ ಒಬ್ಬ ಉದ್ಯಮಿ. ಸೊಹೈಲ್ 2016 ರಲ್ಲಿ ರಿಂಕಿ ಅವರೊಂದಿಗೆ ಮೊದಲ ವಿವಾಹವಾದರು. ಇವರಿಬ್ಬರ ಮದುವೆ ಗೋವಾದಲ್ಲಿ ನಡೆದಿತ್ತು.
ಇದನ್ನೂ ಓದಿ: Sudeep Birthday: ಸುದೀಪ್ ನಟನೆಯ ಮೊದಲ ಸಿನಿಮಾ 'ಸ್ಪರ್ಶ' ಅಲ್ಲ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.