ನವದೆಹಲಿ: ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಕನ್ನಡದ ಬೆಡಗಿ ಪೂಜಾ ಹೆಗ್ಡೆ ಅಭಿಯಾನದ ಚಿತ್ರ 'ಅಲಾ ವೈಕುಂಠಪುರಂಲೋ' ಶನಿವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರ ಪ್ರೇಕ್ಷಕರಿಗೆ ಎಷ್ಟು ಇಷ್ಟವಾಗಿದೆ ಎಂದರೆ, ಬಿಡುಗಡೆಯಾದ ಮೊದಲನೇ ದಿನವೇ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 'ಬಾಹುಬಲಿ' ಚಿತ್ರ ನಿರ್ಮಿಸಿದ ದಾಖಲೆಯನ್ನು ಮುರಿದು ಹಾಕಿದೆ. ಹೌದು, ಬಾಕ್ಸ್ ಆಫೀಸ್ ವರದಿಗಳ ಪ್ರಕಾರ ಮೊದಲ ದಿನವೇ ಅತ್ಯಂತ ಹೆಚ್ಚು ಗಳಿಕೆ ಕಂಡ ಭಾರತದ ಮೊದಲ ಚಿತ್ರವಾಗಿ ಹೊರಹೊಮ್ಮಿದೆ.


COMMERCIAL BREAK
SCROLL TO CONTINUE READING

ದೇಶೀಯ ಮಾರುಕಟ್ಟೆಯನ್ನು ಹೊರತುಪಡಿಸಿದರೆ, USA ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಮೇರಿಕಾದ ಬಾಕ್ಸ್ ಆಫೀಸ್ ನಲ್ಲಿ 'ಬಾಹುಬಲಿ' ನಿರ್ಮಿಸಿರುವ ದಾಖಲೆಗೆ ಈ ಚಿತ್ರ ಪೆಟ್ಟು ನೀಡಿದ್ದು, ದಾಖಲೆಯನ್ನೇ ನಿರ್ಮಿಸಿದೆ. ಟ್ರೇಡ್ ಎನಾಲಿಸ್ಟ್ ರಮೇಶ್ ಬಾಲಾ ಪ್ರಕಾರ, ಪ್ರಿಮಿಯರ್ ದಿನದಂದು ಈ ಚಿತ್ರದ ಸುಮಾರು 60,000 ಕ್ಕೂ ಅಧಿಕ ಟಿಕೆಟ್ ಗಳು ಮಾರಾಟವಾಗಿದ್ದು, ಚಿತ್ರಕ್ಕೆ ದೊರೆತ ಸಕಾರಾತ್ಮಕ ಪ್ರತಿಕ್ರಿಯೆ ಇದಾಗಿದ್ದು, ಈ ಚಿತ್ರ ಇನ್ನೂ ಉತ್ತಮ ಪ್ರದರ್ಶನ ನೀಡಲಿದೆ ಎಂಬುದನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ.



ಇತ್ತೀಚೆಗಷ್ಟೇ ಬಾಲಿವುಡ್ ಲೈಫ್ ಡಾಟ್ ಕಾಮ್ ನೀಡಲಾದ ಸಂದರ್ಶನದಲ್ಲಿ ಅಲ್ಲು ಅರ್ಜುನ್ ಅವರಿಗೆ, "ಈ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ತಬ್ಬು, ಪೂಜಾ ಹೆಗ್ಡೆ ಅವರ ಜೊತೆಗೆ ಸಂಗೀತಕಾರ ಅರಮಾನ್ ಮಲಿಕ್ ಹಾಗೂ ಶ್ರೀಯಾ ಘೋಶಾಲ್ ಅವರ ಹಾಡುಗಳಿದ್ದು, ಇದು ಬಾಲಿವುಡ್ ಗೆ ಹತ್ತಿರವಾಗುವ ನಿಮ್ಮ ಪ್ರಯತ್ನ ಎಂದು ಪರಿಗಣಿಸಬಹುದೇ?" ಎಂದು ಪ್ರಶ್ನಿಸಲಾಗಿತ್ತು. 


ಇದಕ್ಕೆ ಉತ್ತರಿಸಿದ್ದ ಅಲ್ಲು ಅರ್ಜುನ್ "ಬಾಲಿವುಡ್ ನ ಕೆಲ ಕಲಾವಿದರು ಉತ್ತಮ ಪಾತ್ರ ನಿರ್ವಹಿಸುತ್ತಾರೆ ಹಾಗೂ ನಮ್ಮ ಚಿತ್ರಗಳಲ್ಲಿ ನಾವಿನ್ಯತೆ ತರಲು ನಮಗೆ ಬೇರೆ ಚಿತ್ರರಂಗಗಳತ್ತ ಮುಖ ಮಾಡುವ ಅಗತ್ಯತೆ ಇರುವ ಕಾರಣ ಈ ಚಿತ್ರದಲ್ಲಿ ಮುರಳಿ ಶರ್ಮಾ ಹಾಗೂ ಸಚಿನ್ ಖೇಡೆಕರ್ ಅವರಂತಹ ಕಲಾವಿದರೂ ಕೂಡ ಇದರಲ್ಲಿ ಅಭಿನಯಿಸಿದ್ದಾರೆ" ಎಂದು ಹೇಳಿದ್ದರು.


ನಿಮಗೆ ಎಂದಾದರೂ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಬೇಕು ಎಂದು ಅನಿಸುತ್ತದೆಯೇ? ಎಂದು ಪ್ರಶ್ನಿಸಿದಾಗ, ಈ ಪ್ರಶ್ನೆಗೆ ಉತ್ತರಿಸಿದ ಅವರು, "ಹಿಂದಿ ಚಿತ್ರಗಳಲ್ಲಿ ನನಗೆ  ತುಂಬಾ ಆಸಕ್ತಿ ಇದೆ, ನನಗಷ್ಟೇ ಅಲ್ಲ ದಕ್ಷಿಣ ಭಾರತದಲ್ಲಿ ಅಭಿನಯಿಸುವ ಎಲ್ಲರಿಗೂ ಕೂಡ ಹೀಗೆ ಅನಿಸುತ್ತದೆ. ಇಂದು ಬಾಲಿವುಡ್ ಭಾರತದಲ್ಲಿಯೇ ಅತಿ ದೊಡ್ಡ ಉದ್ಯಮಗಳಲ್ಲಿ ಒಂದಾಗಿದ್ದು, ಈ ಉದ್ಯಮದಲ್ಲಿ ಯಾರಿಗಾದರೂ ಕೂಡ ಕರಿಯರ್ ಮಾಡುವ ಆಸೆ ಇರುತ್ತದೆ" ಎಂದಿದ್ದಾರೆ.