VIRAL VIDEO: ವಿರಾಟ್ ಕೊಹ್ಲಿಗೆ ಜಬರ್ದಸ್ತ್ ಟಕ್ಕರ್ ನೀಡಿದ ಐರಾವತ್ ಬೆಡಗಿ
ಕೊಹ್ಲಿ ವೀಡಿಯೊ ಜೊತೆಗೆ ಇದೀಗ ಊರ್ವಶಿ ರೌತೆಲಾ ವೀಡಿಯೊ ಕೂಡ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಲಾರಂಭಿಸಿದೆ.
ನವದೆಹಲಿ: ಟೀಮ್ ಇಂಡಿಯಾದಲ್ಲಿ ಕಳೆದ ಕೆಲ ವರ್ಷಗಳಿಂದ ಆಗಿರುವ ದೊಡ್ಡ ಬದಲಾವಣೆಗಳೇ ಆಗಿದ್ದು, ಇದರಲ್ಲಿ ತಂಡದ ಫಿಟ್ನೆಸ್ ಕೂಡ ಮಹತ್ವದ ಪಾತ್ರ ವಹಿಸಿದೆ. ಸದ್ಯ ಟೀಮ್ ಇಂಡಿಯಾನಲ್ಲಿ ಬರುತ್ತಿರುವ ಯುವ ಕ್ರಿಕೆಟಿಗರು ಫಿಟ್ನೆಸ್ ವಿಚಾರದಲ್ಲಿ ತಮ್ಮ ಹಿರಿಯ ಆಟಗಾರನ್ನು ಸಹ ಮೀರಿಸಿದ್ದಾರೆ. ವಿಶೇಷವೆಂದರೆ ತಂಡಕ್ಕೆ ನಾಯಕರಾಗಿರುವ ವಿರಾಟ್ ಕೊಹ್ಲಿ, ಫಿಟ್ನೆಸ್ ವಿಚಾರದಲ್ಲಿಯೂ ಕೂಡ ತಂಡದ ಸದಸ್ಯರ ನಾಯಕರಾಗಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವರ್ಕೌಟ್ ಸ್ಟಂಟ್ ನ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೊಹ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆದರೆ, ಇನ್ನೊಂದೆಡೆ ಕೊಹ್ಲಿ ಹಂಚಿಕೊಂಡಿರುವ ಈ ವಿಡಿಯೋ ಅನ್ನು ಖ್ಯಾತ ಬಾಲಿವುಡ್ ತಾರೆ ಊರ್ವಶಿ ರೌತೆಲಾ ಸವಾಲಾಗಿಯೇ ತೆಗೆದುಕೊಂಡಿದ್ದಾರೆ ಎಂಬಂತೆ ಕಂಡುಬರುತ್ತಿದೆ.
ಹೌದು, ಬಾಲಿವುಡ್ ನ ಈ ಖ್ಯಾತ ತಾರೆ ಇದೀಗ ತಾವೂ ನಡೆಸಿರುವ ವರ್ಕ್ಔಟ್ ವಿಡಿಯೋಗಳನ್ನೂ ಕೂಡ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡು ಭಾರಿ ಸುದ್ದಿ ಮಾಡಿದ್ದಾರೆ. ಈ ವಿಡಿಯೋಗಳಲ್ಲಿ ಊರ್ವಶಿ ವರ್ಕ್ಔಟ್ ಸ್ಟಂಟ್ ಗಳನ್ನು ಮಾಡಿರುವುದು ಕಂಡುಬರುತ್ತಿದೆ. ಊರ್ವಶಿ ಮಾಡಿರುವ ಒಂದು ಸ್ಟಂಟ್ ಕೊಹ್ಲಿ ಮಾಡಿರುವ ಸ್ಟಂಟ್ ಗೆ ಮ್ಯಾಚ್ ಆಗಿದ್ದು, ಕೊಹ್ಲಿ ವಿಡಿಯೋ ಜೋತೆಗೆ ಇದೀಗ ಊರ್ವಶಿ ರೌತೆಲಾ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಲಾರಂಭಿಸಿದೆ.
ಊರ್ವಶಿ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಕಳೆದ ವರ್ಷ ನವೆಂಬರ್ ನಲ್ಲಿ ಬಿಡುಗಡೆಯಾಗಿದ್ದ 'ಪಾಗಲ್ ಪಂತಿ' ಚಿತ್ರದಲ್ಲಿ ಊರ್ವಶಿ ಕಾಣಿಸಿಕೊಂಡಿದ್ದರು. ಅದಾದ ಬಳಿದ ಖ್ಯಾತ ಗಾಯಕ ಟೋನಿ ಕಕ್ಕಡ್ ಅವರ 'ಬಿಜಲಿ ಕೀ ತಾರ್' ಮ್ಯೂಸಿಕ್ ವಿಡಿಯೋದಲ್ಲಿ ಊರ್ವಶಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸುದ್ದಿ ಮಾಡಿತ್ತು. 'ಮಿಸ್ ದಿವಾ 2015' ಕಿರಿಟವನ್ನು ಮುಡಿಗೇರಿಸಿಕೊಂಡಿದ್ದ ಊರ್ವಶಿ, 'ಮಿಸ್ ಯುನಿವರ್ಸ್ 2015 ಪೆಜೆಂಟ್'ನಲ್ಲಿಯೂ ಕೂಡ ಭಾರತವನ್ನು ಪ್ರತಿನಿಧಿಸಿದ್ದರು. 2013ರಲ್ಲಿ ತೆರೆಕಂಡ 'ಸಿಂಗ್ ಸಾಹಬ್ ದಿ ಗ್ರೇಟ್'ನಿಂದ ಬಾಲಿವುಡ್ ನಲ್ಲಿ ತನ್ನ ವೃತ್ತಿಜೀವನ ಆರಂಭಿಸಿದ್ದ ಉರ್ವಸಿ, ಬಳಿಕ 'ಸನಮ್ ರೆ', 'ಕಾಬಿಲ್', 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಹಾಗೂ 'ಹೇಟ್ ಸ್ಟೋರಿ' ಚಿತ್ರಗಳಲ್ಲಿ ನಟಿಸಿದ್ದಾರೆ.