Thotapalli Madhu: ನಟಿ ಶ್ರೀದೇವಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿನ ಸುಂದರ ನಟಿ ಎಂದರೆ ತಪ್ಪಾಗಲಾರದು. ಸೌಂದರ್ಯವನ್ನೆ ನಾಚಿಸುವಂತಹ ಅಂದ ಅವರದ್ದು, ತೆಲುಗು, ತಮಿಳು, ಹಿಂದಿ ಹೀಗೆ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆದರೆ, ಇಂದಿಗೂ ಕೂಡ ಅವರ ಅಭಿಮಾನಿಗಳಿಗೆ ಅವರ ಸಾವಿನ ಸತ್ಯವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ.


COMMERCIAL BREAK
SCROLL TO CONTINUE READING

ತಮ್ಮ ನಟನೆ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದ ಮೂಲಕವೂ ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದ, ಶ್ರೀದೇವಿ ಅವರ ಅಕಾಲಿಕ ಮರಣ ಇಂಡಸ್ಟ್ರಿಗೆ ಅರಗಿಸಿಕೊಳ್ಳಲಾಗದ ನಷ್ಟವನ್ನು ಉಂಟು ಮಾಡಿತ್ತು. ಸದ್ಯ ನಟಿ ನಮ್ಮನ್ನೆಲ್ಲಾ ತೊರೆದು ಆರು ವರ್ಷಗಳು ಕಳೆದಿದೆ. ಇದರ ಮಧ್ಯೆ ಲೇಖಕಿಯೊಬ್ಬರು ಅವರ ಸಾವಿನ ಕುರಿತು ಅಚ್ಚರಿಯ ಸಂಗತಿಗಳನ್ನು ಬರೆದಿದ್ದು,ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಇದು ಸಂಚಲನ ಸೃಷ್ಟಿಸಿದೆ. 


ನಟಿ ಶ್ರೀದೇವಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದ್ದರು, ತೆಲುಗಿ ಸಿನಿಮಾ ಅಷ್ಟೆ ಅಲ್ಲದೆ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಈಕೆಯ ಅದ್ಭುತವಾದ ನಟನೆಗೆ ಮನಸೋಲದವರೇ ಇಲ್ಲ. ನಟಿ ಶ್ರೀದೇವಿ ನಮ್ಮನ್ನೆಲ್ಲಾ ತೊರೆದು ಈಗಾಗಲೆ ಆರು ವರ್ಷಗಳು ಕಳೆದುಹೋಗಿದೆ. ಆದರೆ, ಇತ್ತೀಚೆಗೆ ಲೇಖಕರೊಬ್ಬರು ಶ್ರೀದೇವಿ ಅವರ ಸಾವಿನ ಕುರಿತು ಮಾಡಿರುವ ಕಾಮೆಂಟ್‌ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.


ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಶ್ರೀದೇವಿ ಸಾವಿನ ಬಗ್ಗೆ ಸಂವೇದನಾಶೀಲ ಕಾಮೆಂಟ್‌ಗಳನ್ನು ಮಾಡಿದ್ದರು. ಸಿನಿಮಾ ಒಂದು ಬಣ್ಣದ ಲೋಕ. ಒಮ್ಮೆ ಮೇಕಪ್ ಹಾಕಿಕೊಂಡರೆ ಅದರಿಂದ ಹೊರಬರುವುದು ಕಷ್ಟ. ಅವರಲ್ಲಿ ಶ್ರೀದೇವಿಯೂ ಒಬ್ಬರು ಮತ್ತು ಅವರು ಹಲವಾರು ಚಿತ್ರಗಳಲ್ಲಿ ನಟಿಸಿ ಉತ್ತಮ ಖ್ಯಾತಿಯನ್ನು ಗಳಿಸಿದ್ದಾರೆ. ಆದರೆ ಅನಾರೋಗ್ಯದ ಕಾರಣ 55 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಂದ ಬಳತ್ತಿದ್ದರು. ಶ್ರೀದೇವಿ ಸೌಂದರ್ಯಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು, ಜೊತೆಗೆ ಸರಿಯಾಗಿ ಆಹಾರವನ್ನು ಕೂಡ ಸೇವಿಸದ ಅವರು, ಅತಿಯಾದ ಕುಡಿತದ ಚಟಕ್ಕೆ ಬಿದ್ದಿದ್ದರು ಎಂದು ಕಾಮೆಂಟ್‌ ಮಾಡಿದ್ದಾರೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.