ಮುಂಬೈ: ತಮಿಳು ನಟ ಜಯರಾಂ ರವಿ ಅಭಿನಯದ  'ಟಿಕ್ ಟಿಕ್ ಟಿಕ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು,ಇದು  ಬಾಹ್ಯಾಕಾಶ ಕುರಿತಾಗಿ ನಿರ್ಮಿಸಿದ ಭಾರತದ  ಮೊದಲ ಸಿನಿಮಾ ಎಂಬ ಖ್ಯಾತಿಯೊಂದಿಗೆ  ಬೆಳ್ಳಿ ಪರದೆಗೆ ಬರಲಿರುವ ಈ ಸಿನಿಮಾ ಈಗ ತನ್ನ ಟ್ರೈಲರ್ ಮೂಲಕ ಯುಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಈಗಾಗಲೇ ಸುಮಾರು 29 ಲಕ್ಷ ಬಾರಿ ಈ ಟ್ರೈಲರ್ ನೋಡಲ್ಪಟ್ಟಿದ್ದು ಇದರಿಂದ ಚಿತ್ರ ರಸಿಕರು ಈ ಚಿತ್ರ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. 


COMMERCIAL BREAK
SCROLL TO CONTINUE READING


ಶಕ್ತಿ ಸುಂದರ್ ರಾಜನ್ ನಿರ್ದೇಶಿಸಿರುವ  ಈ ಚಿತ್ರ ಬಾಹ್ಯಾಕಾಶದ ಅದ್ಭುತಲೋಕವನ್ನು  ಹಿಂದೆಂದು ಭಾರತೀಯ ಸಿನೆಮಾ ಕಂಡರಿಯದ ಹಾಗೆ ಚಿತ್ರಿಸಲಾಗಿದೆ ಎಂದು ತಿಳಿದು ಬಂದಿದೆ.ಈ ಚಿತ್ರದ ತಾರಾಗಣದಲ್ಲಿ ನಿವೇದಿತಾ ಪೆತುರಾಜ್, ಆರೋನ್ ಅಜೀಜ್, ಆರಾವ್ ರವಿ,ಜಯಪ್ರಕಾಶ್,ವಿನ್ಸೆಂಟ್ ಅಶೋಕನ್ ,ರಮೇಶ್ ತಿಲಕ್ ಮತ್ತು ಅರ್ಜುನನ್ ಮುಂತಾದವರು ಚಿತ್ರದಲ್ಲಿದ್ದಾರೆ.