`ಲತಾ ಮಂಗೇಶ್ಕರ್`ಗೆ ಇಂದು ಜನ್ಮದಿನ
88 ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಗಾಯಕಿ ಲತಾ ಮಂಗೇಶ್ಕರ್
ನವ ದೆಹಲಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು 88ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಸದಾ ತಮ್ಮ ಸುಮಧುರ ಕಂಠದಿಂದ ಎಲ್ಲರ ಹೃದಯವನ್ನು ಗೆದ್ದಿರುವ ಅವರು 'ಎವರ್ ಗ್ರೀನ್' ಗಾಯಕರಾಗಿ ಎಲ್ಲೆಡೆ ಮನೆ ಮಾತಾಗಿದ್ದಾರೆ.
ಏಳು ದಶಕಗಳ ಹಿಂದೆ ವೃತ್ತಿಜೀವನವನ್ನು ಆರಂಭಿಸಿದ 'ಗಾನ ಕೋಗಿಲೆ' ಪ್ರತಿಷ್ಠಿತ ಭಾರತ ರತ್ನ ಪುರಸ್ಕೃತರು. ಲತಾ ಮಂಗೇಶ್ಕರ್ ಎನ್ನುವ ಹೆಸರೇ ತಲೆಮಾರಿನಿಂದ ಗಾಯಕರನ್ನು ಉತ್ತೇಜಿಸುತ್ತಿರುವುದನ್ನು ನೆನಪಿಸುತ್ತದೆ.
ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿರುವ ಇವರು 1967 ರಲ್ಲಿ ಬಿಡುಗಡೆಯಾದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ" ಎಂಬ ಕನ್ನಡ ಚಲನಚಿತ್ರದಲ್ಲಿ "ಬೆಳ್ಳನೆ ಬೆಳಗಾಯಿತು" ಎಂಬ ಹಾಡನ್ನು ಹಾಡಿದ್ದಾರೆ. ಒಟ್ಟು 36 ಭಾಷೆಗಳಲ್ಲಿ 30,000 ಕ್ಕೂ ಹೆಚ್ಚು ಹಾಡುಗಳನ್ನು ಲತಾ ಹಾಡಿದ್ದಾರೆ.
ವಿಶ್ವ ಕರ್ನಾಟಕ ಸುದ್ದಿಸಂಪಾದಕರಾದ 'ವಸಂತ ನಾಡಿಗೇರ್' ಅವರು ಲತಾ ಮಂಗೇಶ್ಕರ್ ರವರ ಜೀವನ ಚರಿತ್ರೆ- 'ಹಾಡುಹಕ್ಕಿಯ ಹೃದಯಗೀತೆ' ಪುಸ್ತಕವನ್ನು 2009ರಲ್ಲಿ ಬಿಡುಗಡೆ ಮಾಡಿದ್ದಾರೆ.