ಇಂದಿನಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಚಲನಚಿತ್ರ ಕಪ್ ಕಲರವ!
ಇಂದಿನಿಂದ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಕಪ್ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬೆಂಗಳೂರು: ಇಂದಿನಿಂದ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಕಪ್ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಕಪ್ ನ ವಿಶೇಷವೆಂದರೆ ಇಲ್ಲಿ ಸೆಹವಾಗ್,ಲ್ಯಾನ್ಸ್ ಕ್ಲೂಸನರ್, ಗಿಬ್ಸ್,ದಿಲ್ಶಾನ್ ನಂತಹ ಅತಿರಥ ಮಹಾರಥ ಕ್ರಿಕೆಟ್ ತಾರೆಯರು ಚಂದನವನದ ತಾರೆಯರ ಜೊತೆ ಕ್ರಿಕೆಟ್ ಆಡಲಿದ್ದಾರೆ.
ಸೆಪ್ಟೆಂಬರ್ 8 ಮತ್ತು 9 ರಂದು ನಡೆಯಲಿರುವ ಈ ಈ ಕಪ್ ಹತ್ತು ಓವರ್ ಗಳ ಪಂದ್ಯಾವಳಿಯನ್ನು ಒಳಗೊಂಡಿರುತ್ತದೆ.
ಈಗಾಗಲೇ ಚಿನ್ನಸ್ವಾಮಿ ಮೈದಾನ ಈಗ ಇಂತಹ ಅಭೂತಪೂರ್ವ ಕಪ್ ಗೆ ಸಜ್ಜಾಗಿದೆ.ಈ ಕುರಿತು ಟ್ವೀಟ್ ಮಾಡಿರುವ ಸುದೀಪ" ಅಂತಿಮವಾಗಿ ಇದು ನಾಳೆಯಿಂದ ನಡೆಯುತ್ತಿದೆ.ಇದಕ್ಕೆಲ್ಲ ಶ್ರಮವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಈ ಪಂದ್ಯಾವಳಿಯಲ್ಲಿ ಚಂದನವನದ ತಾರೆಯರುಗಳಾದ ಗಣೇಶ್,ಪುನೀತ್ ರಾಜ್ ಕುಮಾರ್.ಸುದೀಪ್,ಶಿವರಾಜ ಕುಮಾರ್ ,ಉಪೇಂದ್ರ,ಯಶ್, ತಂಡಗಳ ನಾಯಕರಾಗಿರುತ್ತಾರೆ.