ಬೆಂಗಳೂರು: ಇಂದು ಚಂದನವನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಗೆ  ಹುಟ್ಟುಹಬ್ಬದ ಸಂಭ್ರಮ.ಒಂದು ಕಡೆ ಪುನೀತ್ ರಾಜ್ ಕುಮಾರ್ 44 ನೇ ಹುಟ್ಟುಹಬ್ಬಕ್ಕೆ ಕಾಲಿಡುತ್ತಿದ್ದರೆ. ನಟ ಜಗ್ಗೇಶ್ ಅವರು 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಬಹುನಿರೀಕ್ಷಿತ ಯುವರತ್ನ ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.ಇನ್ನೊಂದೆಡೆ ಜಗ್ಗೇಶ್ ಅವರ ಹುಟ್ಟುಹಬ್ಬಕ್ಕೆ ಪ್ರಿಮಿಯರ್ ಪದ್ಮಿನಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.




ಕನ್ನಡ ಸಿನಿಮಾ ರಂಗದಲ್ಲಿ ಜಗ್ಗೇಶ್ ಮತ್ತು ಪುನೀತ್ ರಾಜಕುಮಾರ್ ಇಬ್ಬರು ನಟರು ತಮ್ಮದೇ ಆದ ವಿಭಿನ್ನ ನಟನಾ ಶೈಲಿಯಿಂದಾಗಿ  ಕನ್ನಡ ಪ್ರೇಕ್ಷಕರಲ್ಲಿ ಅಚ್ಚಳಿಯದ ನೆನಪಿನ ಮುದ್ರೆಯನ್ನು ಒತ್ತಿದ್ದಾರೆ.ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರು ನಟರಿಗೆ ಈಗ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.



ಒಂದು ಕಡೆ ಪುನೀತ್ ಅವರು ತಮ್ಮ ಟ್ವೀಟ್ ನಲ್ಲಿ ವಿಡಿಯೋ ಸಂದೇಶದ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಯಾವುದೇ  ಹಾರ ತುರಾಯಿಗಳು ತರುವುದು ಬೇಡ, ಹುಟ್ಟುಹಬ್ಬದ ದಿನದಿಂದ ಅಭಿಮಾನಿಗಳ ಹಾಜರಿಯೇ ತಮಗೆ ನೀಡುವ ಉಡುಗೊರೆ ಎಂದು ವಿನಂತಿಸಿಕೊಂಡಿದ್ದಾರೆ. 


ನಟ ಸಾರ್ವಭೌಮ ಚಿತ್ರದ ನಂತರ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿರುವ ಪುನೀತ್ ರಾಜಕುಮಾರ್ ಈಗ ಮುಂದೆ ಜೇಮ್ಸ್, ಯುವರತ್ನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜಗ್ಗೇಶ್ ಅವರು ಇತ್ತೀಚೆಗಷ್ಟೇ ತಮ್ಮ 8mm ಬುಲೆಟ್ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಲ್ಲಿ ಗಮನ ಸೆಳೆದಿದ್ದರು. ಇದಾದ ನಂತರ ಅವರ ಪ್ರಿಮಿಯರ್ ಪದ್ಮಿನಿ ಚಿತ್ರ ತೆರೆಗೆ ಬರಲಿದೆ.