ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಡೈಲಾಗ್ ಡೆಲಿವರಿಯಿಂದಲೇ ಗಮನ ಸೆಳೆದಿರುವ ರಜನಿಗೆ 68ನೇ ಇಂದು ಹುಟ್ಟುಹಬ್ಬದ ಸಂಭ್ರಮ.ಈ ಸಂದರ್ಭದಲ್ಲಿ ನೀವು ಅವರ ಬಗ್ಗೆ ತಿಳಿಯಬೇಕಾಗಿರುವ ಅಪರೂಪದ ಸಂಗತಿಗಳು ಇಲ್ಲಿವೆ.


COMMERCIAL BREAK
SCROLL TO CONTINUE READING

1. ರಜನಿಕಾಂತ್ ಅವರು ಬೆಂಗಳೂರಿನ ಮರಾಠಿ ಕುಟುಂಬದಲ್ಲಿ ಡಿಸೆಂಬರ್ 12.1950 ರಂದು ಜನಿಸಿದರು.ಇವರ ಮೂಲ ಹೆಸರು ಶಿವಾಜಿ ರಾವ್ ಗಾಯಕವಾಡ್. 


2.ತಮ್ಮ ಪ್ರಾಥಮಿಕ ಶಾಲಾ ಅಧ್ಯಯನವನ್ನು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಅವರು ನಂತರ ಜೀವನಕ್ಕಾಗಿ ಕೂಲಿ ಹಾಗೂ ಕಾರ್ಪೆಂಟರ್ ಕೆಲಸವನ್ನು ಮಾಡಬೇಕಾಗಿ ಬಂತು ತಂದನಂತರ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿದರು 


3.ಮದ್ರಾಸ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯಲ್ಲಿ ಡಿಪ್ಲೊಮಾ ಪಡೆದು 1975 ರಲ್ಲಿ ಕೆ.ಬಾಲಚಂದರ್ ಚಿತ್ರದಲ್ಲಿ ಅಪೂರ್ವ ರಾಗಂಗಲ್ ಚಿತ್ರದಲ್ಲಿ ನಟಿಸಿದರು. ಒಂದು ಮೂಲಗಳ ಪ್ರಕಾರ ಇಡೀ ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಖ್ಯಾತಿಯನ್ನು ರಜನಿಕಾಂತ್ ಹೊಂದಿದ್ದಾರೆ.2007ರಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆದ ಶಿವಾಜಿ ಚಿತ್ರದ ನಂತರ ಅವರ ಸಂಭಾವನೆ 26 ಕೋಟಿಗೆ ಏರಿತು, ಆ ಮೂಲಕ ಜಾಕಿ ಜಾನ್ ಬಿಟ್ಟರೆ ಇವರೇ ಅಧಿಕ ಮೊತ್ತದ ಸಂಭಾವನೆ ಪಡೆಯುವ ನಟ ಎನ್ನುವ ಖ್ಯಾತಿಯನ್ನು ಪಡೆದರು.


4.ರಜನಿಕಾಂತ್ ಟ್ವಿಟ್ಟರ್ ಖಾತೆಯನ್ನು ತೆರೆದಾಗ ಕೇವಲ ಒಂದೇ ದಿನಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಅವರು ಹೊಂದಿದ್ದರು.


5.ರಜನಿಕಾಂತ್ ಎಲ್ಲರಿಗೂ ಸೂಪರ್ ಸ್ಟಾರ್ ಆದರೆ ರಜನಿಕಾಂತ್ ಗೆ ಸೂಪರ್ ಸ್ಟಾರ್ ಆಗಿದ್ದವರು ಕನ್ನಡದ ನಟ ಸಾರ್ವಭೌಮ ಡಾ.ರಾಜಕುಮಾರ್.ಇದುವರೆಗೂ ರಜನಿಕಾಂತ್ ಆಟೋಗ್ರಾಫ್ ಪಡೆದಿರುವುದು ಇವರ ಬಳಿ ಮಾತ್ರ!


6.ಒಮ್ಮೆ ರಾಮಕೃಷ್ಣ ಮಠದಲ್ಲಿ ಅವರು ಏಕಲ್ಯವ್ಯ ಸ್ನೇಹಿತನಾಗಿ ನಾಟಕವೊಂದರಲ್ಲಿ ನಟಿಸಿದ್ದರು.ಆಗ ಪ್ರೇಕ್ಷಕರಲ್ಲಿ ಒಬ್ಬರಾಗಿದ್ದ ಕನ್ನಡದ ವರಕವಿ ದ.ರಾ. ಬೇಂದ್ರೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.