Adavi Shesh: ಟಾಲಿವುಡ್‌ನಲ್ಲಿ ಪ್ರತಿಭಾವಂತ ನಾಯಕನಾಗಿ ಮಿಂಚುತ್ತಿರುವ ಅಡವಿ ಶೇಷ್, ತನ್ನ ಕೆರಿಯರ್ ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ನಂತರ ಹೀರೋ ಆಗುತ್ತಾ ಸಾಲು ಸಾಲು ಹಿಟ್ ಗಳನ್ನು ನೀಡಿದವರು. ರೊಟೀನ್ ಕಥೆಗಳ ಹೊರತಾಗಿ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಐಶ್ವರ್ಯಾ ರೈ ಬಚ್ಚನ್ ಕುಟುಂಬದಿಂದ ಬೇರ್ಪಡಲು ಕಾರಣ ʼಈʼ ವ್ಯಕ್ತಿ! ಅಭಿಷೇಕ್‌ ಜೊತೆ ವಿಚ್ಛೇದನ ಖಚಿತವೇ?


ಅವರ ವೃತ್ತಿಜೀವನದ ಆರಂಭದಲ್ಲಿ, ಹೆಚ್ಚಾಗಿ ಕಾಣಿಸಿಕೊಂಡಿದ್ದು ನೆಗೆಟೀವ್‌ ಶೇಡ್‌ʼಗಳಲ್ಲಿ. ಶ್ರೀನು ವೈಟ್ಲಾ ನಿರ್ದೇಶನದ ಸೊಂಟಂ ಚಿತ್ರದಲ್ಲಿ ಅಮೆರಿಕದ ಮದುಮಗನಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಕರ್ಮ ಎಂಬ ಸಿನಿಮಾ ಮಾಡಿದರು. ಅವರೇ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಲ್ಲದೇ ನಿರ್ದೇಶನ ಹಾಗೂ ಚಿತ್ರಕಥೆಯನ್ನೂ ಮಾಡಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಪಂಜಾ ಚಿತ್ರದಲ್ಲಿ ನೆಗೆಟಿವ್ ರೋಲ್ʼನಲ್ಲಿ ಕಾಣಿಸಿಕೊಂಡಿದ್ದರು. 


ಆ ನಂತರ ನಿಧಾನವಾಗಿ ಸೆಕೆಂಡ್‌ ಹೀರೋ ಆಗಿ ಎಂಟ್ರಿ ಪಡೆದರು. ರನ್ ರಾಜಾ ರನ್, ಲೇಡೀಸ್ ಅಂಡ್ ಜಂಟಲ್‌ಮೆನ್, ಬಾಹುಬಲಿ, ದೊಂಗಾಟ, ಸೈಜ್ ಜೀರೋ, ಊಪಿರಿ ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡಿದ್ದಾರೆ. ನಂತರ ಗೂಢಾಚಾರಿ, ಮೇಜರ್, ಹಿಟ್ 2 ಚಿತ್ರಗಳೊಂದಿಗೆ ಹಿಟ್‌ ಪಡೆದರು. 


ಈ ಮಧ್ಯೆ, ಒಂದು ಚಲನಚಿತ್ರದಿಂದಾಗಿ, ಅಡವಿ ಶೇಷ್ ಬೆಳೆದು ಸತತ ಹಿಟ್‌ಗಳನ್ನು ಪಡೆದರು. ಆ ಚಿತ್ರದ ಹೆಸರು ಬಲುಪು. ಈ ಸಿನಿಮಾದಲ್ಲಿ ನಟಿಸಲು ಅಡವಿ ಶೇಷ್ʼಗೆ ಇಷ್ಟವಿರಲಿಲ್ಲವಂತೆ. ಅಷ್ಟೇ ಅಲ್ಲದೆ, ಆ ಸಿನಿಮಾದಲ್ಲಿ ಶೃತಿ ಹಾಸನ್ ಕೂದಲನ್ನು ಲಾಕ್‌ ಮಾಡುವ ಒಂದು ದೃಶ್ಯವಿದ್ದು, ಅದು ತನಗೆ ಅಸಹ್ಯ ಎನಿಸಿತು. ಎಂದು ಅವರೇ ಹೇಳಿಕೊಂಡಿದ್ದರು. 


ಇದನ್ನೂ ಓದಿ:  6,6,6,6,6,6... ಅಮೆರಿಕಾದಲ್ಲಿ ಸಿಕ್ಸರ್‌ ಸುರಿಮಳೆಗೈದ ಸ್ಟಾರ್‌ ಬ್ಯಾಟರ್!


"ಸಿನಿಮಾ ಸೂಪರ್ ಹಿಟ್ ಆಯಿತು. ಆದರೆ ನನ್ನ ಪಾತ್ರ ನಿಷ್ಪ್ರಯೋಜಕ" ಎನ್ನುತ್ತಾರೆ ಅಡವಿ ಶೇಷ್. "ಆ ಸಿನಿಮಾದ ಬಳಿಕ ನನಗೆ ರವಿತೇಜ ಮತ್ತು ಗೋಪಿಚಂದ್  ಪರಿಚಯವಾಯಿತು. ಆ ನಂತರ ಸತತ 5 ಹಿಟ್‌ʼಗಳನ್ನು ಪಡೆದಿದ್ದೇನೆ" ಎಂದು ಹೇಳಿದರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ