actor Balakrishna wig : ಸಾಮಾನ್ಯವಾಗಿ ಜನರಿಗೆ ಸೆಲೆಬ್ರಿಟಿಗಳ ಜೀವನಶೈಲಿ ಮತ್ತು ಅವರ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳುವ ಆಸೆ ಇರುತ್ತದೆ. ವಿಶೇಷವಾಗಿ ತಮ್ಮ ನೆಚ್ಚಿನ ನಾಯಕರು ಯಾವ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ? ಯಾವ ರೀತಿಯ ಕಾರುಗಳನ್ನು ಬಳಸುತ್ತಾರೆ? ಅವರು ಯಾವ ರೀತಿ ಹೇರ್ ಸ್ಟೈಲ್ ಅನ್ನು ನಿರ್ವಹಿಸುತ್ತಾರೆ ಎಂಬ ವಿಚಾರವನ್ನು ತಿಳಿಯುವ ಕುತೂಹಲ ಇರುತ್ತವೆ. ಅಲ್ಲದೆ, ಅವರಂತೆ ತಾವೂ ಬದಲಾಗಲು ಇಷ್ಟ ಪಡ್ತಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ನಂದಮೂರಿ ಬಾಲಕೃಷ್ಣ ಅವರ ಮೇಕಪ್ ಮ್ಯಾನ್‌ ವಾಸು ಕೊಪ್ಪಿಶೆಟ್ಟಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, ಬಾಲಕೃಷ್ಣ ಅವರು ಬಳಸುತ್ತಿದ್ದ ವಿಗ್‌ನ ಬೆಲೆಯನ್ನು ಬಹಿರಂಗಪಡಿಸಿದರು. ವಾಸ್ತವವಾಗಿ, ನಂದಮೂರಿ ಬಾಲಕೃಷ್ಣ ತಮ್ಮ ಚಿತ್ರಗಳಲ್ಲಿ ವಿಗ್ ಬಳಸುತ್ತಾರೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ಅಲ್ಲದೆ, ಎನ್‌ಬಿಕೆ ಹೆಚ್ಚಾಗಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಒಂದು ಪಾತ್ರ ಒರಿಜಿನಲ್ ಆಗಿ ಕಂಡರೂ ಎರಡನೇ ಪಾತ್ರಕ್ಕೆ ವಿಗ್ ಬಳಸಲೇಬೇಕಾದ ಸನ್ನಿವೇಶಗಳಿವೆ. 


ಇದನ್ನೂ ಓದಿ: ಕಟೀಲು ದೇವಾಸ್ಥಾನಕ್ಕೆ ಶಿಲ್ವಾ ಶೆಟ್ಟಿ ಭೇಟಿ, ಹರಕೆ ತೀರಿಸಿದ ಕರುನಾಡ ಕುವರಿ


ಬಾಲಕೃಷ್ಣ ಅವರು ಬಳಸುವ ವಿಗ್‌ಗಳು ಲಕ್ಷಗಟ್ಟಲೆ ಬೆಲೆ ಬಾಳುತ್ತಿದ್ದು, ಕಡಿಮೆ ಗುಣಮಟ್ಟದ ವಿಗ್‌ಗಳನ್ನು ಬಳಸುವುದಿಲ್ಲವಂತೆ. ಆದ್ರೆ, ಬಾಲಕೃಷ್ಣ ಅವರಿಗೆ ವಿಗ್ ಸೆಂಟಿಮೆಂಟ್ ಇಲ್ಲ, ಅವರ ಹೇರ್‌ಸ್ಟೈಲ್‌ ಸರಿಯಾಗಿ ಸೆಟ್ ಆದ್ರೆ, ಸಿನಿಮಾ ಸೂಪರ್ ಹಿಟ್ ಆಗುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ. ಆಯಾ ಸಿನಿಮಾಗೆ ತಕ್ಕನಾದ ಹೇರ್‌ ಸ್ಟೈಲ್‌ ಇದ್ರೆ ಬಾಲಯ್ಯ ನೊಡೋಕೆ ಮಸ್ತ್‌ ಆಗಿ ಕಾಣಿಸುತ್ತಾರೆ. ಅದಕ್ಕೆ, ನಿರ್ಮಾಪಕರು ಅವರ ವಿಗ್‌ಗಾಗಿಯೇ ಲಕ್ಷಗಟ್ಟಲೆ ಹಣ ಖರ್ಚು ಮಾಡ್ತಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ