Prabhas - Kriti Sanon : ತೆಲುಗು ನಟ ಪ್ರಭಾಸ್ ಮತ್ತು ಬಾಲಿವುಡ್‌ ನಟಿ ಕೃತಿ ಸನೊನ್‌ ನಡುವೆ ಪ್ರೀತಿ ಹುಟ್ಟಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ವರುಣ್ ಧವನ್ ಇವರ ನಡುವಿನ ಸಂಬಂಧದ ಬಗ್ಗೆ ಭಾರಿ ಸುಳಿವನ್ನು ನೀಡಿದ್ದಾರೆ. ಮುಂಬೈನಲ್ಲಿ ಇಲ್ಲದ ಮತ್ತು ಇದೀಗ ದೀಪಿಕಾ ಪಡುಕೋಣೆ ಅವರೊಂದಿಗೆ ಶೂಟಿಂಗ್ ಮಾಡುತ್ತಿರುವ ನಟನ ಹೃದಯದಲ್ಲಿ ಕೃತಿ ಅವರ ಹೆಸರನ್ನು ಬರೆಯಲಾಗಿದೆ ಎಂದು ಹೇಳಿದರು. ಹಿಂದಿ ಶೋ ಒಂದರ ವೇದಿಕೆಯ ಮೇಲೆ ನಟ ವರುಣ್ ಧವನ್ ಆಡಿದ ಈ ಮಾತುಗಳೆ ಈ ವದಂತಿಗೆ ಪುಷ್ಠಿ ನೀಡಿವೆ. ಈಗ ಉದ್ಯಮದ ಒಳಗಿನವರೊಬ್ಬರು ಪ್ರಭಾಸ್ ಮತ್ತು ಕೃತಿ ಸಂಬಂಧದಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾರೆ ಮತ್ತು ಈ ಪ್ರೇಮ ಪಕ್ಷಿಗಳು ನಿಶ್ಚಿತಾರ್ಥ ಮಾಡಿಕೊಳ್ಳಬಹುದು ಎಂದು ಸಹ ಹೇಳಿದ್ದಾರಂತೆ. 


COMMERCIAL BREAK
SCROLL TO CONTINUE READING

 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.