ಕೊನೆಗೂ ತನ್ನ `ಗರ್ಲ್ ಫ್ರೆಂಡ್` ಪರಿಚಯಿಸಿದ ವಿಜಯ್ ದೇವರಕೊಂಡ..! ಆ ಮಿಸ್ಟ್ರಿ ಗರ್ಲ್ ಯಾರು ಗೊತ್ತಾ..!
Vijay Devarakonda GF: ಸದ್ಯ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿರುವುದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿ. ಇನ್ನೊಂದು ಕಡೆ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುವುದು ಕನ್ನಡತಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿದ್ದಾರೆ. ಇನ್ನು ಸ್ವಲ ದಿನದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ವಿಜಯ್ ದೇವರಕೊಂಡ ಕಡೆಗೂ ತಮ್ಮ `ಗರ್ಲ್ ಫ್ರೆಂಡ್` ಯಾರೆಂದು ಪರಿಚಯಿಸಿದ್ದಾರೆ.
Vijay Devarakonda Girlfriend: ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಪ್ರೀತಿಸುತ್ತಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ, ಶೀಘ್ರವೇ ಮದುವೆ ಆಗುತ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ನಡುವೆ ದೇವರಕೊಂಡ, ತಮ್ಮ 'ಗರ್ಲ್‌ಫ್ರೆಂಡ್' ಪರಿಚಯಿಸಿರುವುದು ಅಭಿಮಾನಿಗಳಿಗೆ ಕಚಗುಳಿ ಇಟ್ಟಂತಾಗಿದೆ.
ಸದ್ಯ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿರುವುದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿ. ಇನ್ನೊಂದು ಕಡೆ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುವುದು ಕನ್ನಡತಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿದ್ದಾರೆ. ಇನ್ನು ಸ್ವಲ ದಿನದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ. ಇಂಥ ಬಿರುಸಾದ ಚರ್ಚೆಯ ನಡುವೆಯೇ ವಿಜಯ್ ದೇವರಕೊಂಡ ಚಿತ್ರದ ಟೀಸರ್ ಬಿಡುಗಡೆ ವೇಳೆ ರಶ್ಮಿಕಾ ಮಂದಣ್ಣ ಅವರನ್ನು 'ಗರ್ಲ್‌ಫ್ರೆಂಡ್' ಎಂದು ಪರಿಚಯಿಸಿದ್ದಾರೆ.
ಇದನ್ನೂ ಓದಿ- ಮದುವೆಗೂ ಮುನ್ನವೇ ಗರ್ಭಿಣಿಯಾದ ಸ್ಟಾರ್ ನಟಿಯರು ಇವರು!
ಕುತೂಹಲಕಾರಿಯಾದ ಮತ್ತೊಂದು ವಿಷ್ಯ ಏನೆಂದರೆ ವಿಜಯ್ ದೇವರಕೊಂಡ ರಿಲೀಸ್ ಮಾಡಿರುವ 'ದಿ ಗರ್ಲ್‌ಫ್ರೆಂಡ್' ಎಂಬ ತೆಲುಗು ಚಿತ್ರದ ಟೀಸರ್ ಅನ್ನು ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮೊದಲೇ ಇಬರಿಬ್ಬರ ನಡುವೆ ಲವ್ವಿಡವ್ವಿ ಸುದ್ದಿ ಎದ್ದೆದ್ದು ಕುಣಿಯುತ್ತಿರುವಾಗ 'ದಿ ಗರ್ಲ್‌ಫ್ರೆಂಡ್' ಎಂಬ ಸಿನಿಮಾ ಮಾಡಿರುವುದು, ಅದರ ಟೀಸರ್ ಅನ್ನು ನಾಯಕ ಬಿಡುಗಡೆ ಮಾಡೋದು, ನಾಯಕಿ ಶೇರ್ ಮಾಡೋದು ಅಂದ್ರೆ ಕುತೂಹಲ ಕೇರಳದೇ ಇರುತ್ತಾ?
ಭಾನುವಾರ ವಿಜಯ್ ದೇವರಕೊಂಡ “Heartthrob @thedeverakonda will introduce #TheGirlfriend to the world #TheGirlfriendTeaser, out on December 9th at 11:07 AM. ಅಂತಾ ಬರೆದು ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅದನ್ನು ಶೇರ್ ಮಾಡಿದ್ದಷ್ಟೇಯಲ್ಲದೆ “Thankyou @thedeverakonda," ಎಂದು ಪ್ರತಿಕ್ರಿಯಿಸಿದ್ದಾರೆ. ಇಷ್ಟಾದ ಮೇಲೆ ಅಭಿಮಾನಿಗಳು ಸುಮ್ಮನಿರುತ್ತಾರೆಯೇ ಇವರಿಬ್ಬರ ಪ್ರೇಮ-ಪ್ರಣಯ ಕುರಿತಾದ ಸುದ್ದಿಗಳು ಕೂಡ ಶೇರ್ ಮಾಡತೊಡಗಿದ್ದಾರೆ.
ಇದನ್ನೂ ಓದಿ- ಕೋಟಿ ಕೋಟಿ ಹಣವಿದ್ದರೂ, ಮಗನ ಮದುವೆಯನ್ನ ತಂಬಾ ಸರಳವಾಗಿ ಮಾಡಿದ ಸೂಪರ್ ಸ್ಟಾರ್ ನಟ..! ಇದಪ್ಪಾ ಸಂಪ್ರದಾಯ ಅಂದ್ರೆ...
ರಶ್ಮಿಕಾ ಮಂದಣ್ಣ ಇತ್ತೀಚಿಗೆ ತಮ್ಮ ‘ಪುಷ್ಪಾ-2’ ಚಿತ್ರವನ್ನು ವಿಜಯ್ ದೇವರಕೊಂಡ ಕುಟುಂಬದವರೊಂದಿಗೆ ವೀಕ್ಷಣೆ ಮಾಡಿದ್ದರು. ರಶ್ಮಿಕಾ ಮಂದಣ್ಣ 2018ರಲ್ಲಿ ಇದೇ ವಿಜಯ್ ದೇವರಕೊಂಡ ನಾಯಕತ್ವದ ‘ಗೀತಾ ಗೋವಿಂದಂ’ ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. 2019ರಲ್ಲಿ ಇವರಿಬರು ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಮತ್ತೆ ಒಂದಾದರು. ಅಲ್ಲಿಂದಲೇ ಇವರಿಬ್ಬರ ನಡುವೆ ಪ್ರೀತಿ ಉಕ್ಕಿ ಹರಿಯುತ್ತಿದೆ ಎನ್ನುವ ಸುದ್ದಿಗಳು ಸರಿದಾಡಲು ಆರಂಭಿಸಿದವು. ಇನ್ನೂ ನಿಂತಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.